Kateel Navaratri: ಮಂಗಳೂರಿನ ಜನರೇ ಗಮನಿಸಿ, ನವರಾತ್ರಿಯಲ್ಲಿ ಈ ರಸ್ತೆಲಿ ಸಂಚರಿಸಬೇಡಿ

ನವರಾತ್ರಿ ಉತ್ಸವ ಹಿನ್ನೆಲೆ ನಾಡಿನ ಪ್ರಮುಖ ದೇವಿ ದೇವಸ್ಥಾನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸುವವರು ಮಂಗಳೂರು ನಗರ ಪೊಲೀಸರು ಈ ಸಂದರ್ಭದಲ್ಲಿ ಮಾಡಿರುವ ಬದಲಾವಣೆಯನ್ನು ಗಮನಿಸಲೇಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಂಗಳೂರು: ನವರಾತ್ರಿ ಹಬ್ಬಕ್ಕೆ (Navaratri) ದಿನಗಣನೆ ಆರಂಭವಾಗಿದೆ. ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ವಿವಿಧ ಬಗೆಯ ಪೂಜೆ ಪುನಸ್ಕಾರಗಳಿಗೆ ದೇಗುಲಗಳು ಸಿದ್ಧತೆ ನಡೆಸಿಕೊಳ್ಳುತ್ತಿವೆ. ನಾಡಿನ ಹೆಸರಾಂತ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯದಲ್ಲಿ (Kateel Durgaparameshwari Temple) ನವರಾತ್ರಿ ಉತ್ಸವ ಪ್ರಯುಕ್ತ ವಿವಿಧ ಪೂಜೆ ಹಾಗೂ ಲಲಿತ ಪಂಚಮಿ ಮಹೋತ್ಸವ ಜರುಗಲಿದೆ. ಕಿನ್ನಿಗೋಳಿ-ಬಜ್ಪೆ-ಮಂಗಳೂರು ಹೆದ್ದಾರಿಯಲ್ಲಿ (Mangaluru Highway) ಬರುವ ಕಟೀಲು ಶ್ರೀದುರ್ಗಾಪರಮೇಶ್ವರಿ ದೇಗುಲದಲ್ಲಿ ಈ ಸಮಯದಲ್ಲಿ ಭಾರೀ ಜನದಟ್ಟಣೆ ಉಂಟಾಗಲಿದೆ. ಕ್ಷೇತ್ರಕ್ಕೆ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ. ಹೀಗಾಗಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ಟ್ರಾಫಿಕ್​ನಲ್ಲಿ  ಭಾರೀ ತೊಡಕು ಉಂಟಾಗಲಿದೆ. ಆದ್ದರಿಂದ ಕ್ಷೇತ್ರದ ಮುಂಭಾಗದಲ್ಲಿ ಎಲ್ಲ ಸಾರ್ವಜನಿಕ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಅದಕ್ಕೆ ಬದಲಾಗಿ ಪರ್ಯಾಯ ಮಾರ್ಗವನ್ನು ಮಂಗಳೂರು ನಗರ (Mangaluru City Police) ಪೊಲೀಸರು ಸೂಚಿಸಿದ್ದು, ಅದನ್ನ ಪಾಲಿಸುವಂತೆ ಆದೇಶಿಸಲಾಗಿದೆ.

    ರಥಬೀದಿಗೆ ನೋ ಎಂಟ್ರಿ
    ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರ ವರೆಗೆ ಕಟೀಲು ಕ್ಷೇತ್ರದ ರಥಬೀದಿಗೆ ಯಾವುದೇ ಸಾರ್ವಜನಿಕ ಓಡಾಟದ ವಾಹನಗಳಿಗೆ ಸಂಪೂರ್ಣವಾಗಿ ನಿಷೇಧ ವಿಧಿಸಲಾಗಿದೆ. ಆದರೆ ಈ ನಿರ್ಬಂಧದಿಂದ ವಾಹನ ಪೂಜೆ ಮಾಡಲ್ಪಡುವ ವಾಹನಗಳಿಗೆ ವಿನಾಯಿತಿ ಕಲ್ಪಿಸಲಾಗಿದೆ.

    ಸಂಚಾರ ಬದಲಾವಣೆ ಹೀಗಿದೆ
    1. ಮಂಗಳೂರು, ಬಜಪೆ ಈ ಭಾಗದಿಂದ ಕಟೀಲು ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಕಟೀಲು ಸಮೀಪಿಸುತ್ತಿದ್ದಂತೆ ಮಲ್ಲಿಗೆಯಂಗಡಿ ಕ್ರಾಸ್ ನಲ್ಲಿ ತಿರುವು ಪಡೆದುಕೊಂಡು ಗಿಡಿಗೆರೆ ರಸ್ತೆ ಮೂಲಕ ಕಟೀಲು ಕಾಲೇಜು ಸಮೀಪ ಮುಖ್ಯ ರಸ್ತೆಯನ್ನು ಸಂಪರ್ಕಿಸುವುದು.

    ಇದನ್ನೂ ಓದಿ: Bengaluru To Mysuru: ಬೆಂಗಳೂರು ಟು ಮೈಸೂರು; ದಸರಾ ಪ್ರವಾಸ ಇನ್ನಷ್ಟು ಸಲೀಸು

    2. ಕಟೀಲಿನಿಂದ ಮಂಗಳೂರು ಕಡೆಗೆ ಹೋಗುವ ಎಲ್ಲ ವಾಹನಗಳು ಕಟೀಲು ಪಿಯು ಕಾಲೇಜು ಮೈದಾನದಲ್ಲಿ ಸಂಚರಿಸಿ ಬ್ಯಾಂಕ್ ಆಫ್ ಬರೋಡಾ ಎದುರುಗಡೆ ಸಾಗಿ ಬಜ್ಪೆ, ಮಂಗಳೂರು ಕಡೆ ಸಂಚರಿಸುವುದು.

    3. ಇನ್ನು ಮುಲ್ಕಿ, ಕಿನ್ನಿಗೋಳಿಯಿಂದ ಉಲ್ಲಂಜೆ ರಸ್ತೆ ಆಗಿ ಆಗಮಿಸುವ ವಾಹನಗಳು ಮಂಗಳೂರಿಗೆ ತೆರಳುವುದಿದ್ದಲ್ಲಿ ಮಲ್ಲಿಗೆಯಂಗಡಿ ಜಂಕ್ಷನ್ ಆಗಿ ನೇರವಾಗಿ ಕಟೀಲು ಮುಖ್ಯ ರಸ್ತೆ ಸಂಪರ್ಕಿಸುವುದು. ಕಟೀಲು ಕ್ಷೇತ್ರಕ್ಕೆ ತೆರಳುವ ವಾಹನಗಳು ಗಿಡಿಗೆರೆ ರಸ್ತೆಯಲ್ಲಿ ಸಾಗಿ ಕಾಲೇಜು ಮುಖ್ಯರಸ್ತೆ ತಲುಪಬಹುದಾಗಿದೆ.

    ಇದನ್ನೂ ಓದಿ: Dakshina Kannada: ಅಡಿಕೆ ಮಾರಿದ ಹಣದಲ್ಲಿ ಶಾಲೆಗೆ ಬಂತು ಬಸ್! ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ!

    ನವರಾತ್ರಿ ಉತ್ಸವ ಹಿನ್ನೆಲೆ ನಾಡಿನ ಪ್ರಮುಖ ದೇವಿ ದೇವಸ್ಥಾನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸುವವರು ಮಂಗಳೂರು ನಗರ ಪೊಲೀಸರು ಈ ಸಂದರ್ಭದಲ್ಲಿ ಮಾಡಿರುವ ಬದಲಾವಣೆಯನ್ನು ಗಮನಿಸಲು ಪೊಲೀಸರು ವಿನಂತಿ ಮಾಡಿದ್ದಾರೆ.
    Published by:ಗುರುಗಣೇಶ ಡಬ್ಗುಳಿ
    First published: