• Home
  • »
  • News
  • »
  • mangaluru
  • »
  • Dakshina Kannada: ಟೆರೇಸ್ ಮೇಲೆ ಮಲ್ಲಿಗೆ ಬೆಳೆ, ತಿಂಗಳಿಗೆ 60 ಸಾವಿರ ಆದಾಯ!

Dakshina Kannada: ಟೆರೇಸ್ ಮೇಲೆ ಮಲ್ಲಿಗೆ ಬೆಳೆ, ತಿಂಗಳಿಗೆ 60 ಸಾವಿರ ಆದಾಯ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವೃತ್ತಿಯಲ್ಲಿ ಲಾಯರ್ ಆಗಿರುವ ಕಿರಣ್, ಆರಂಭದಲ್ಲಿ ಹೂವಿನಕುಂಡದಲ್ಲಿ ಸುಮಾರು 150 ಮಲ್ಲಿಗೆ ಗಿಡಗಳನ್ನು ಹಾಕಿ ಆರೈಕೆ ಮಾಡಿದ್ದಾರೆ.

  • News18 Kannada
  • 4-MIN READ
  • Last Updated :
  • Mangalore, India
  • Share this:

    ಟೆರೇಸ್ ಅಂಗಳದಲ್ಲಿ ಅರಳಿ ನಿಂತ ಮಲ್ಲಿಗೆ ಹೂವುಗಳು.ಒಂದೊಂದಾಗಿ ತೆಗೆಯುತ್ತಾ ಡಬ್ಬದಲ್ಲಿ ತುಂಬಿಸಿಕೊಳ್ತಿರೋ ಮಹಿಳೆಯರು. ಲಾಕ್​ಡೌನ್​ನಲ್ಲಿ (Covid-19 Lockdown) ಆರಂಭಿಸಿದ ಮಲ್ಲಿಗೆ ಕೃಷಿ ಲಾಯರ್ ಓರ್ವರ ಬದುಕು ಬದಲಿಸಿದೆ. ಮನೆ ಟೆರೇಸ್ ಮೇಲಂತೂ ಈಗ ಮಲ್ಲಿಗೆ ಕೃಷಿಯದೇ (Jasmine Farming) ಸದ್ದು. ಎಲ್ಲಿವರೆಗೆ ಅಂದ್ರೆ ಎಲ್ಲ ಕೃಷಿ ಆಸಕ್ತರ (Agriculture Success Story) ಕಣ್ಣು ಈಗ ಎರಡು ಮಹಡಿ ಮೇಲಿರೋ ಈ ಟೆರೇಸ್ ಮೇಲೆ ನೆಟ್ಟಿದೆ.


    ಹೌದು, ಕೊರೊನಾ ಲಾಕ್​ಡೌನ್ ಅದೆಷ್ಟೋ ಜನರ ಬದುಕನ್ನ ತತ್ತರಿಸುವಂತೆ ಮಾಡಿತ್ತು. ಹಳ್ಳೀಲಿ ಜಮೀನಿದ್ದವರು ವಾಪಸ್ ತವರಿಗೆ ಬಂದು ಕೃಷಿಯಲ್ಲಿ ತೊಡಗಿಕೊಂಡಿದ್ರು, ಆದ್ರೆ, ನಗರದಲ್ಲಿ ಒಂದಿಂಚು ಗ್ಯಾಪ್ ಇಲ್ದೇ ಮನೆ ಮಾಡಿಕೊಂಡವರು ಮಾಡೋದಾದ್ರೂ ಏನು? ಹೀಗಂತ ಯೋಚಿಸುತ್ತಾ ಕೂತಿದ್ರೆ ಈ ಟೆರೇಸ್ ಜಾಸ್ಮಿನ್ ಗಾರ್ಡನ್ ಆಗುತ್ತಲೆ ಇರ್ಲಿಲ್ಲ.


    ಟೆರೇಸ್ ಮೇಲೆ 150 ಮಲ್ಲಿಗೆ ಗಿಡಗಳು
    ಅತ್ತ ಲಾಕ್​ಡಔನ್ ಆಗುತ್ತಲೇ ಇತ್ತ ಮಂಗಳೂರು ನಗರದ ಕೊಂಚಾಡಿಯ ಕಿರಣ ಎಂಬವರು ತಮ್ಮ ಎರಡು ಮಹಡಿಯ ಮನೆಯ ವಿಸ್ತಾರವಾದ ಟೆರೇಸ್ ಅನ್ನೇ ಮಲ್ಲಿಗೆ ಕೃಷಿಗೆ ಬಳಸಿಕೊಂಡಿದ್ದಾರೆ.  ವೃತ್ತಿಯಲ್ಲಿ ಲಾಯರ್ ಆಗಿರುವ ಕಿರಣ್, ಆರಂಭದಲ್ಲಿ ಹೂವಿನಕುಂಡದಲ್ಲಿ ಸುಮಾರು 150 ಮಲ್ಲಿಗೆ ಗಿಡಗಳನ್ನು ಹಾಕಿ ಆರೈಕೆ ಮಾಡಿದ್ದಾರೆ.


    ಪ್ರತಿ ತಿಂಗಳು 60 ಸಾವಿರಕ್ಕೂ ಹೆಚ್ಚು ಆದಾಯ
    ಆರು ತಿಂಗಳಲ್ಲೇ ಒಳ್ಳೇ ಇಳುವರಿ ತೆಗೆದಿದ್ದಾರೆ. ಇದೀಗ ಮಲ್ಲಿಗೆಯಿಂದ ತಿಂಗಳಿಗೆ 60 ಸಾವಿರಕ್ಕೂ ಅಧಿಕ ಆದಾಯ ಗಳಿಸ್ತಿರೋ ಹವ್ಯಾಸ ವ್ಯಾಪಾರವಾಗಿರೋದಕ್ಕೆ ಸ್ವತಃ ಕಿರಣ್ ಅವರೇ ಖುಷಿಯಾಗಿದ್ದಾರೆ.


    ಶಂಕರಪುರ ಮಲ್ಲಿಗೆ ಬೆಳೆದು ದಾಖಲೆ
    ಉಡುಪಿಯ ಶಂಕರಪುರ ಮಲ್ಲಿಗೆ ಬೇರೆಲ್ಲೂ ಬೆಳೆಯಲ್ಲ ಅನ್ನೋ ಮಾತಿತ್ತು. ಹೀಗಾಗಿ ಉಡುಪಿ ಜಿಲ್ಲೆ ಬಿಟ್ಟು ಬೇರೆಲ್ಲೂ ಈ ಮಲ್ಲಿಗೆ ಕೃಷಿಯನ್ನು ಮಾಡ್ತಿರ್ಲಿಲ್ಲ. ಆದ್ರೆ ಕಿರಣ ಅವರು ಮಂಗಳೂರಿನಲ್ಲೇ, ಅದರಲ್ಲೂ ಟೆರೇಸ್ ಮೇಲೆ ಹೂವಿನ ಕುಂಡದಲ್ಲೇ ಮಾಡಬೇಕೆಂದು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.


    ಇದನ್ನೂ ಓದಿ: Human Waste: ಹೊಲಸು ಎಂದು ಮೂಗು ಸಿಂಡರಿಸಬೇಡಿ, ಮಾನವ ತ್ಯಾಜ್ಯದಿಂದ ಆದಾಯ ಗಳಿಸ್ತಿದೆ ದಕ್ಷಿಣ ಕನ್ನಡದ ಈ ಸಂಸ್ಥೆ!


    ಪ್ರತಿ ದಿನ ಬೆಳಗ್ಗೆ ಮಲ್ಲಿಗೆ ಗಿಡದಿಂದ ಹೂವು ತೆಗೆದು ಬಳಿಕ ಅದನ್ನು ದಾರಕ್ಕೆ ಕಟ್ಟಿ ಬಳಿಕ ಮಾರುಕಟ್ಟೆಗೆ ಸಾಗಿಸ್ತಾರೆ. ಜೊತೆ ಜೊತೆಗೆ ತಮ್ಮ ವಕೀಲ ವೃತ್ತಿಯನ್ನೂ ಮುಂದುವರೆಸಿಕೊಂಡು ಬಂದಿದ್ದಾರೆ. ಇವರ ಈ ಮಲ್ಲಿಗೆ ಕೃಷಿ ಎಲ್ಲರನ್ನು ಸೆಳೆಯುತ್ತಿದ್ದು ಇದೀಗ ಅವರ ಅಕ್ಕನೂ ಇದೇ ಕೃಷಿಯನ್ನು ಮಾಡಿ ಯಶಸ್ವಿಯಾಗಿದ್ದಾರೆ.


    ಕುಟುಂಬಸ್ಥರಿಂದ ಸಹಕಾರ
    ಕಿರಣ ಅವರ ಮಲ್ಲಿಗೆ ಕೃಷಿಗೆ ಅವರ ಗಂಡ, ತಾಯಿ, ಅಕ್ಕ ಹೀಗೆ ಎಲ್ಲರೂ ಸಹಕರಿಸುತ್ತಿದ್ದಾರೆ. ಪ್ರತಿದಿನ ಹೂವು ಕೊಯ್ಯುವುದರ ಜೊತೆಗೆ ಆರೈಕೆಯನ್ನೂ ಎಲ್ಲರೂ ಸೇರಿ ಮಾಡ್ತಾರೆ. ಮಲ್ಲಿಗೆ ಕೃಷಿಗೆ ಬೇಕಾದ ಹೂ ಕುಂಡ, ಹನಿ ನೀರಿನ ಸಿಂಪಡಣೆ ಕಾಲ ಕಾಲಕ್ಕೆ ನಡೆಯುತ್ತಿದ್ದು ಮಲ್ಲಿಗೆಯು ಸೊಂಪಾಗಿ ಬೆಳೆಯುತ್ತಿದೆ.


    ಇದನ್ನೂ ಓದಿ: King Cobra Viral Video: ಮನೆಗೇ ಬಂದ ಭಯಂಕರ ಕಾಳಿಂಗ! ಇಲ್ಲಿದೆ ನೋಡಿ ವಿಡಿಯೋ


    ಒಟ್ಟಿನಲ್ಲಿ ಲಾಕ್ಡೌನ್ ಸಮಯದಲ್ಲಿ ಕಾಲಹರಣದ ಮಾಡದೇ, ಹಾಗಂತ ಅತೀ ಆತ್ಮವಿಶ್ವಾಸವನ್ನೂ ತೋರದೆ ಮಾಡಿದ ಪ್ರಾಮಾಣಿಕ ಪ್ರಯತ್ನಕ್ಕೆ ಲಾಯರ್ ಮೇಡಂ ಉತ್ತಮ ಪ್ರತಿಫಲವನ್ನೇ ಪಡೆಯುತ್ತಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: