• Home
  • »
  • News
  • »
  • mangaluru
  • »
  • Mangaluru ಮ್ಯಾಂಗಲೋರ್ ಅಲ್ಲ, ಮಂಗಳೂರು! ವಿಮಾನ ನಿಲ್ದಾಣದ ಹೆಸರು ಬದಲಾದ ಕಾರಣವಿದು

Mangaluru ಮ್ಯಾಂಗಲೋರ್ ಅಲ್ಲ, ಮಂಗಳೂರು! ವಿಮಾನ ನಿಲ್ದಾಣದ ಹೆಸರು ಬದಲಾದ ಕಾರಣವಿದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಂಗಳೂರು ನಗರದಲ್ಲಿರುವ ಎಲ್ಲಾ ಸರಕಾರಿ ಕಚೇರಿಗಳಲ್ಲೂ Mangalore ಎಂದಿದ್ದ ಹೆಸರನ್ನು Mangaluru ಎಂದು ಬದಲಾಯಿಸಲಾಗಿತ್ತು. ಆದರೆ, ವಿಮಾನ ನಿಲ್ದಾಣದಲ್ಲಿ ಮಾತ್ರ ಇದುವರೆಗೂ 'Mangalore International Airport' ಎಂದೇ ಬಳಸಲಾಗುತ್ತಿತ್ತು.

  • News18 Kannada
  • Last Updated :
  • Mangalore, India
  • Share this:

    ಮಂಗಳೂರು: ಅದಾನಿ ಕಂಪನಿಯ ತೆಕ್ಕೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಣೆಗೆ ವಹಿಸಿದ ಮೇಲೆ ಹಲವು ರೀತಿಯ ಬದಲಾವಣೆಗಳಾಗಿವೆ. ವಿಮಾನ ನಿಲ್ದಾಣದಲ್ಲಿ ಹಲವು ರೀತಿಯ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಇದೀಗ ಹೆಸರಲ್ಲೂ ಬದಲಾವಣೆ ಮಾಡಲಾಗಿದೆ. ಆಂಗ್ಲ ಭಾಷೆಯಲ್ಲಿ ಇದುವರೆಗೂ 'ಮ್ಯಾಂಗಲೋರ್' (Mangalore) ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣವೆಂದು ಉಲ್ಲೇಖಿತವಾಗಿತ್ತು. ಆದರೆ ಈಗ ಮಂಗಳೂರು (Mangaluru) ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದೇ ಎಲ್ಲ ದಾಖಲೆಗಳಲ್ಲೂ ಅಳವಡಿಸಲಾಗಿದೆ. ಹಾಗಾಗಿ ಸಂಪೂರ್ಣ ಕನ್ನಡೀಕರಣದ ಹೆಸರನ್ನೇ ಇನ್ಮುಂದೆ ವಿಮಾನ‌ ನಿಲ್ದಾಣದ ದಾಖಲೆಯಲ್ಲೂ (Mangaluru Airport)  ಅಳವಡಿಸಿಕೊಳ್ಳುವಂತೆ ಅಧಿಕೃತ ಪ್ರಕಟಣೆಯನ್ನು ವಿಮಾನ ನಿಲ್ದಾಣ ಪ್ರಾಧಿಕಾರವು ಪ್ರಕಟಿಸಿದೆ.


    ಯಾಕಾಗಿ ಬದಲಾವಣೆ?
    ಈ ಹಿಂದೆ ರಾಜ್ಯ ಸರಕಾರ 'ಮ್ಯಾಂಗಲೋರ್' ಬದಲಿಗೆ ಮಂಗಳೂರು, 'ಬ್ಯಾಂಗಲೋರ್' ಪದವನ್ನು ಬೆಂಗಳೂರು ಎಂದೂ ಹೀಗೆ ಹಲವು ಊರುಗಳ ಇಂಗ್ಲೀಷ್ ಭಾಷೆಯಲ್ಲಿ ಬಳಸುತ್ತಿದ್ದ ಮಾದರಿಯನ್ನು ಬದಲಾಯಿಸಿತ್ತು. ಹೀಗಾಗಿ ಮಂಗಳೂರು ನಗರದಲ್ಲಿರುವ ಎಲ್ಲಾ ಸರಕಾರಿ ಕಚೇರಿಗಳಲ್ಲೂ Mangalore ಎಂದಿದ್ದ ಹೆಸರನ್ನು Mangaluru ಎಂದು ಬದಲಾಯಿಸಲಾಗಿತ್ತು. ಆದರೆ, ವಿಮಾನ ನಿಲ್ದಾಣದಲ್ಲಿ ಮಾತ್ರ ಇದುವರೆಗೂ 'Mangalore International Airport' ಎಂದೇ ಬಳಸಲಾಗುತ್ತಿತ್ತು.


    ಯಾವಾಗಿನಿಂದ ಜಾರಿ?
    ಈ ಹೊಸ ನಿಯಮವು ಡಿಸೆಂಬರ್ 1 ರ ಬಳಿಕ ವಿಮಾ‌ನ ನಿಲ್ದಾಣದ ಎಲ್ಲ ವಲಯದಲ್ಲೂ ಜಾರಿಗೆ ಬರಲಿದೆ. ಈಗಾಗಲೇ ಬೋರ್ಡ್ ಗಳಲ್ಲಿ 'ಮಂಗಳೂರು ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣ' ಎಂದೇ ನಮೂದಿಸಲಾಗಿದೆ.


    ಯಾವ ಉದ್ದೇಶಕ್ಕಾಗಿ ಬದಲಾವಣೆ?
    ಮಂಗಳೂರು ಪ್ರದೇಶವನ್ನು 'ಮ್ಯಾಂಗಲೋರ್' (Mangalore) ಎಂದು ಸಂಬೋಧಿಸುವವರ ಸಂಖ್ಯೆಯೂ ಕಡಿಮೆಯಿಲ್ಲ. ಆದರೆ, ಎಲ್ಲ ವಲಯಗಳಲ್ಲೂ ಅಧಿಕೃತವಾಗಿ ಮಂಗಳೂರು ಎಂದೇ ಬದಲಾಯಿಸಲಾಗಿದೆ. ಹೀಗಾಗಿ ಅಂತರಾಷ್ಟ್ರೀಯ ವ್ಯಾವಹಾರಿಕ ಉದ್ದೇಶದಿಂದ ಈ ಬದಲಾವಣೆ ಎಂದು ಪ್ರಾಧಿಕಾರವು ತಿಳಿಸಿದೆ.


    ಇದನ್ನೂ ಓದಿ: Auto Fare Hike: ನವೆಂಬರ್ 15ರಿಂದ ಆಟೋ ಪ್ರಯಾಣಕ್ಕೆ ಇಷ್ಟು ಹಣ ಕೊಡ್ಲೇಬೇಕು! ಹೊಸ ಪ್ರಯಾಣ ದರ ಜಾರಿ!


    ಮಂಗಳೂರು ವಿಮಾನ ನಿಲ್ದಾಣವನ್ನು 50 ವರ್ಷಗಳ ಕಾಲ ನಿರ್ವಹಿಸಲು ಮತ್ತು ಅಭಿವೃದ್ಧಿಪಡಿಸಲು ಅಕ್ಟೋಬರ್ 2020 ರಲ್ಲಿ AAI ಯಿಂದ ಅದಾನಿ ಗ್ರೂಪ್‌ಗೆ  ನೀಡಲಾಯಿತು.


    ಕರ್ನಾಟಕದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ
    ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (MIA) ಪ್ರಯಾಣಿಕರ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯಿಂದಾಗಿ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣದ ಅಗತ್ಯಗಳಿಗಾಗಿ ಕರ್ನಾಟಕದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.


    ಇದನ್ನೂ ಓದಿ: ಮಹತ್ವದ ಮಾಹಿತಿ ಪ್ರಕಟಿಸಿದ KSRTC, ಹೊಸ ಟಿಕೆಟ್ ದರ ವಿವರ ಹೀಗಿದೆ


    ಹೆಚ್ಚುತ್ತಿದೆ ಪ್ರಯಾಣಿಕರ ಸಂಖ್ಯೆ
    ಮಂಗಳೂರು ವಿಮಾನ ನಿಲ್ದಾಣವನ್ನು ಬಳಸಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆಯನ್ನು ಗಮನಿಸುವುದಾದರೆ ಅಕ್ಟೋಬರ್ 2021 ರಲ್ಲಿ ಒಟ್ಟು 1,19,838, ನವೆಂಬರ್‌ನಲ್ಲಿ 1,16,423, ಡಿಸೆಂಬರ್‌ನಲ್ಲಿ 1,38,369 ಮತ್ತು ಜನವರಿ 2022 ರಲ್ಲಿ 92,012, ಫೆಬ್ರವರಿಯಲ್ಲಿ 1,03,004 ಮತ್ತು ಮಾರ್ಚ್‌ನಲ್ಲಿ 1,36,822  ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: