ದಕ್ಷಿಣ ಕನ್ನಡ: ಶಿವ ಶಿವ ಶಿವ (Shiva) ಎನ್ನಿರೋ, ಮೂಜಗದವರೆಲ್ಲ ಶಿವ ಶಿವ ಶಿವ ಎನ್ನಿರೋ ಹೌದು, ಒಂದು ಕಡೆ ಪುರೋಹಿತರಿಂದ ಹೋಮ ಹವನ, ಇನ್ನೊಂದೆಡೆ ವಿಶೇಷ ಪೂಜೆ (Pooja) ಪುನಸ್ಕಾರ, ಮತ್ತೊಂದೆಡೆ ದೇವರ (God) ಆಶೀರ್ವಾದಕ್ಕೆ ಪಾತ್ರರಾಗಲು ದೇಗುಲಕ್ಕೆ (Temple) ಆಗಮಿಸ್ತಿರೋ ಶಿವಭಕ್ತರು, ಯೆಸ್, ಮಹಾಶಿವರಾತ್ರಿ ಪೂಜೆ ಪುನಸ್ಕಾರ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಶಿವ ದೇಗುಲದಲ್ಲಿ ಭಾರೀ ಭಕ್ತಿಯಿಂದ ಸಾಗಿದೆ.
ಪುರಾತನ ದೇಗುಲ
ನಿಜ, ಮಹಾಶಿವರಾತ್ರಿ ಶಿವನನ್ನ ನಂಬಿದ ಭಕ್ತರ ಪಾಲಿಗೆ ದೇವರ ಕೃಪೆಗೆ ಪಾತ್ರವಾಗುವಂತಹ ಹಬ್ಬ. ಹಾಗಾಗಿ ದಕ್ಷಿಣ ಕನ್ನಡದ ಮೂಡುಬಿದಿರೆಯ ಸುಮಾರು 750 ವರ್ಷಗಳ ಇತಿಹಾಸವಿರುವ ಚಂದ್ರಶೇಖರ ದೇವಾಲಯದಲ್ಲೂ ವಿಶೇಷ ಪೂಜೆ ಪುನಸ್ಕಾರಗಳು ಕಂಡು ಬಂದವು.
ಉಪವಾಸ ಆಚರಣೆ
ಭಕ್ತರು ಹಾಗೂ ಅರ್ಚಕರು ಉಪವಾಸ ಹಿಡಿದು ಪೂಜೆಗಳಲ್ಲಿ ಪಾಲ್ಗೊಂಡರು. ಶಿವರಾತ್ರಿ ನಿಮಿತ್ತ ದಿನವಿಡೀ ಭಕ್ತರು ಈ ದೇಗುಲಕ್ಕೆ ಆಗಮಿಸಿ ಕೈ ಮುಗಿದು ನೀಲಕಂಠನ ಮುಂದೆ ನಿಂತು ಓಂ ನಮಃ ಶಿವಾಯ ಎಂದು ಆಶೀರ್ವಾದ ಬೇಡಿಕೊಳ್ಳುವರು.
ದೇಗುಲದ ವೈಶಿಷ್ಟ್ಯತೆ
ಇನ್ನು ಚಂದ್ರಶೇಖರ ಸ್ವಾಮಿ ದೇಗುಲವು ನೋಡೋದಕ್ಕೆ ಪುಟ್ಟದಾದರೂ ವರುಷದ ಯಾವುದೇ ದಿನವಿದ್ದರೂ ಈ ದೇಗುಲಕ್ಕೆ ವಿಶೇಷ ಮಹತ್ವವಿದೆ. ಇಲ್ಲಿಗೆ ಹಿಂದೂ, ಜೈನ, ಮಾಧ್ವ ಮತಗಳ ಅನುಯಾಯಿಗಳು ಬಂದು ಪೂಜೆ ಸಲ್ಲಿಸುತ್ತಾರೆ. ಮೂಡುಬಿದಿರೆ ಸುತ್ತಮುತ್ತಲಿನಲ್ಲಿರುವ ಹದಿನೆಂಟು ದೇಗುಲದಲ್ಲಿ ಎಲ್ಲೇ ಉತ್ಸವ, ಜಾತ್ರೆಗಳು ನಡೆಯಬೇಕಿದ್ದರೂ ಇಲ್ಲಿಂದ ಪ್ರಸಾದ ಹೋಗದೇ ಪೂಜೆ ನೆರವೇರದು. ಅಷ್ಟರ ಮಟ್ಟಿಗೆ ಈ ದೇಗುಲವು ಪ್ರಾಮುಖ್ಯತೆ ಪಡೆದಿದೆ.
ಇದನ್ನೂ ಓದಿ: 30 ವರ್ಷಗಳ ಹಿಂದೆ ಮೂವರಿಂದ ಆರಂಭವಾದ ಯಾತ್ರೆಗೆ ಈಗ ಸಾವಿರಾರು ಪಾದಗಳು!
ಹಿಂಭಾಗದಲ್ಲಿ ಕಲ್ಯಾಣಿ
ಇನ್ನು ದಕ್ಷಿಣ ಕನ್ನಡದ ಭಾಗದಲ್ಲೇ ಇಲ್ಲಿರೋ ಚಂದ್ರಶೇಖರ ಸ್ವಾಮಿಯ ದೇಗುಲವು ವಿಶೇಷ ವಾಸ್ತು ಹೊಂದಿದೆ. ಜೊತೆಗೆ ಇಲ್ಲಿನ ಶಿವರಾತ್ರಿಯ ಆಚರಣೆಗಳಲ್ಲೂ ಒಂದಿಷ್ಟು ಭಿನ್ನತೆ ಕಾಣಬಹುದಾಗಿದೆ. ಎಲ್ಲ ಶಿವಾಲಯಗಳಲ್ಲಿ ಕಲ್ಯಾಣಿ ದೇಗುಲದ ಎದುರು ಭಾಗದಲ್ಲಿದ್ದರೆ, ಇಲ್ಲಿ ಮಾತ್ರ ದೇಗುಲದ ಹಿಂಭಾಗದಲ್ಲಿದೆ. ಒಟ್ಟಿನಲ್ಲಿ ಭಕ್ತರೆಲ್ಲರೂ ಪರಶಿವನ ಸ್ಮರಿಸುತ್ತಾ, ಭಜಿಸುತ್ತಾ ಹತ್ತೂರ ಒಡೆಯನಾದ ಈ ಈಶ್ವರನ ದೇಗುಲಕ್ಕೆ ಬಂದು ಶಿವರಾತ್ರಿಯನ್ನ ಆಚರಿಸಿಕೊಂಡು ಪುನೀತರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ