ಮಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಚಿರತೆ ಹಾಗೂ ಮಾನವ ನಡುವಿನ ನಡುವಿನ ಮುಖಾಮುಖಿ ಹೆಚ್ಚುತ್ತಿದ್ದು, ನರಬಲಿಯೂ ನಡೆದಿತ್ತು. ಕೇವಲ ಸೀಮಿತ ಮೈಸೂರು, ಮಲೆನಾಡಿಗೆ ಸೀಮಿತವಾಗದ ಚಿರತೆ ಆತಂಕ ಕರಾವಳಿಯಲ್ಲೂ ಜೋರಾಗಿಯೇ ಇದೆ. ಮಾನವನ ಜೊತೆಗಿನ ಮುಖಾಮುಖಿ ಇದುವರೆಗೂ ಆಗದಿದ್ದರೂ, ಅದೆಷ್ಟೋ ಬಾರಿ ಚಿರತೆ ಕಣ್ಣ ಮುಂದೆಯೇ ಹಾದು ಹೋಗಿರುವುದನ್ನು ಕಂಡವರಿದ್ದಾರೆ.
ಸಿಸಿಟಿವಿಯಲ್ಲಿ ಎರಡೆರಡು ಚಿರತೆಗಳು ಮನೆ ಅಂಗಳಕ್ಕೆ ಬಂದು ಸಾಕು ನಾಯಿಯನ್ನು ಹೊತ್ತೊಯ್ದ ಘಟನೆಗಳು ನಡೆದಿದ್ದವು. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ವಿಶೇಷವಾಗಿ ಕಡಬ, ಮುಲ್ಕಿ, ಬಂಟ್ವಾಳ, ಮೂಡಬಿದ್ರಿ ತಾಲೂಕುಗಳಲ್ಲಿ ಚಿರತೆ ಉಪಟಳ ಜೋರಾಗಿಯೇ ಇತ್ತು.
ಬೋನಿಗೂ ಬೀಳದೇ ಹೋಗ್ತಿದ್ದ ಚಿರತೆಗಳು!
ಇತ್ತೀಚೆಗೆ ಹಸುಗಳ ಮೇಲೆರಗಿ ಬಂದಿದ್ದ ಚಿರತೆಗಳು ಜಿಲ್ಲೆಯಲ್ಲಿ ಅವುಗಳನ್ನು ಬಲಿ ಪಡೆಯುವುದರ ಜೊತೆಗೆ ಜನರ ಆತಂಕಕ್ಕೂ ಕಾರಣವಾಗಿತ್ತು. ಜನರ ಕಣ್ಣಿಗೆ ಕಂಡರೂ ಚಿರತೆ ಸುಲಭವಾಗಿ ಬೋನಿಗೆ ಬೀಳದೇ ಕಣ್ಮರೆಯಾಗುತ್ತಿದ್ದವು. ಚಿರತೆ ಓಡಾಟ ಕಂಡು ಬರುವ ಪ್ರದೇಶಗಳಲ್ಲಿ ರಾತ್ರಿ ಸಂಚಾರವಂತೂ ಅಘೋಷಿತವಾಗಿ ಜನರೇ ಸ್ವಯಂ ನಿರ್ಬಂಧಿಸಿಕೊಂಡಿದ್ದರು. ಒಂದು ವೇಳೆ ರಾತ್ರಿ ಕೆಲಸ ಮುಗಿಸಿಕೊಂಡು ಬರುವವನು ಭಯದಲ್ಲೇ ಮನೆ ಸೇರಬೇಕಿತ್ತು.
ಕೊನೆಗೂ ಬೋನಿಗೆ ಬಿತ್ತು ಚಿರತೆ!
ಹೌದು, ಮುಲ್ಕಿ ತಾಲೂಕಿನ ಹಲವೆಡೆ ಚಿರತೆಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಹಲವೆಡೆ ಬೋನು ಅಳವಡಿಸಲಾಗಿತ್ತು. ಕೊನೆಗೂ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ಎಂಬಲ್ಲಿ ಚಿರತೆ ಅದ್ಹೇಗೋ ಬೋನಿನಲ್ಲಿ ಬಂಧಿಯಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಜನ ಬೋನಿನತ್ತ ಬರಬೇಕಿದ್ದರೆ, ಚಿರತೆ ಆರ್ಭಟಿಸುತ್ತಾ ಬಂಧಿಯಾಗಿದ್ದು ಗೊತ್ತಾಗಿದೆ. ಕೂಡಲೇ ಅರಣ್ಯ ಇಲಾಖೆ ಕರೆಸಿ ಅದರ ಸ್ಥಳಾಂತರ ಕಾರ್ಯವೂ ನಡೆದಿದೆ.
ಈ ಮೂಲಕ ಸ್ಥಳೀಯವಾಗಿ ಇತ್ತೀಚೆಗೆ ಮನೆ ಮಾಡಿದ್ದ ಆತಂಕ ಕೊಂಚ ಮಟ್ಟಿಗೆ ದೂರವಾಗಿದೆ. ಅದಾಗ್ಯೂ, ಇನ್ನಷ್ಟು ಚಿರತೆಗಳು ಈ ಪರಿಸರದಲ್ಲಿದೆ ಅನ್ನೋ ಶಂಕೆ ಜನರಲ್ಲಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಚಿರತೆ ನರ ಬಲಿ ಪಡೆದ ನಂತರವಂತೂ ಜನರ ಆತಂಕವೂ ಅತಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ