ದಕ್ಷಿಣ ಕನ್ನಡ: ಅಬ್ಬಬ್ಬ! ಆಗಸದಲ್ಲಿ ಬಣ್ಣ ಬಣ್ಣಗಳ ಬೆಳಕಿನ ಚಿತ್ತಾರ, ಕಿವಿಗಡಚಿಕ್ಕುವ ಶಬ್ದದ ಜೊತೆ ಸಿಡಿಯೋ ಪಟಾಕಿಗಳ ಪ್ರದರ್ಶನ. ಒಂದಕ್ಕಿಂತ ಒಂದು ಬಾನಂಗಳದಲ್ಲಿ ಮೂಡಿಸುತ್ತಲೇ ಹೋಯ್ತು ನೋಡಿ ಬೆಳಕಿನ ಬಿನ್ನಾಣ. ಇದೆಲ್ಲವನ್ನು ಕಣ್ತುಂಬಿಕೊಳ್ಳಲು ಸೇರಿದ್ರು (Dakshina Kannada Temple's) ಸಹಸ್ರಾರು ಜನರು. ಹಾಗಿದ್ರೆ ಈ ಆಕರ್ಷಕ ಸಿಡಿಮದ್ದು ಪ್ರದರ್ಶನ (Firecrackers Show In Temple) ಕಂಡು ಬಂದಿದ್ದು ಎಲ್ಲಿ? ಇದರ ಹಿನ್ನೆಲೆಯಾದ್ರೂ ಏನು? ಎಲ್ಲವನ್ನೂ ಹೇಳ್ತೀವಿ ನೋಡಿ.
ಹೌದು, ಕರಾವಳಿಯ ಭಾಗದಲ್ಲಿ ಸಿಡಿಮದ್ದು ಇಲ್ಲದೇ ಜಾತ್ರೆ, ಉತ್ಸವಗಳೇ ನಡೆಯದು. ಅದರಲ್ಲೂ ಗಡಿನಾಡು ಕರ್ನಾಟಕ ಕೇರಳದ ಕುಂಬ್ಳೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ (Kumble Gopalakrishna Temple) ವರ್ಷಾವಧಿ ಉತ್ಸವ ಅಂದ್ರಂತೂ ಅಲ್ಲಿ ಸಿಡಿಮದ್ದುಗಳ ಆಕರ್ಷಕ ಹೂರಣವೇ ಕಂಡು ಬರುತ್ತವೆ. ಅದನ್ನ ಕಣ್ತುಂಬಿಕೊಳ್ಳಬೇಕೆಂದೇ ಊರ ಪರವೂರ ಸಹಸ್ರಾರು ಜನ ದೇಗುಲದ ಉತ್ಸವಕ್ಕೆ ಬರುತ್ತಾರೆ.
ಪಟಾಕಿ ಸ್ಫೋಟಗೊಳ್ಳುತ್ತಿದ್ದಂತೆ ಜನರ ಹರ್ಷೋದ್ಘಾರ
ಸಿಡಿಮದ್ದುಗಳ ಆಕರ್ಷಕ ಪ್ರದರ್ಶನವಂತೂ ಜನರನ್ನ ಪಟಾಕಿಗಳ ಬೆಳಕಿನಲ್ಲಿ ತೇಲಾಡುವಂತೆ ಮಾಡುತ್ತದೆ. ಜನರಂತೂ ತಮ್ಮ ತಮ್ಮ ಮೊಬೈಲ್ಗಳಲ್ಲಿ ಈ ದೃಶ್ಯಗಳನ್ನ ಸೆರೆ ಹಿಡಿಯೋದಕ್ಕಾಗಿಯೇ ಕಾಯುತ್ತಿರುತ್ತಾರೆ. ಒಂದೊಂದು ಪಟಾಕಿ ಸ್ಫೋಟಗೊಳ್ಳುತ್ತಿದ್ದಂತೆ ಜನರ ಹರ್ಷೋದ್ಘಾರವೂ ಮುಗಿಲು ಮುಟ್ಟುತ್ತಿರುತ್ತದೆ. ವ್ಹಾವ್ ಅನ್ನೋ ಉದ್ಘಾರ ಎಲ್ಲರ ಬಾಯಲ್ಲಿ ಕಾಮನ್ ಆಗಿರುತ್ತೆ.
ಈ ಭಾಗದಲ್ಲಿ ಮನೆ ಮಾತಾಗಿರುವ ಕ್ಷೇತ್ರವಿದು
ಕುಂಬ್ಳೆ ಗೋಪಾಲಕೃಷ್ಣ ಸಿಡಿಮದ್ದು ಪ್ರದರ್ಶನಕ್ಕೆ ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ಮನೆ ಮಾತಾಗಿರುವ ಕ್ಷೇತ್ರ. ಲಕ್ಷಾಂತರ ಮೌಲ್ಯದ ವಿಶಿಷ್ಟ ಪ್ರಕಾರದ ಸಿಡಿಮದ್ದಿಗೆ ಈ ಜಾತ್ರೋತ್ಸವ ಸಾಕ್ಷಿಯಾಗುತ್ತೆ.
ಲಕ್ಷಾಂತರ ಭಕ್ತರ ಆಗಮನ
ಇತಿಹಾಸ ಪ್ರಸಿದ್ಧವಾದ ಕುಂಬಳೆ ಕಣಿಪುರ ಗೋಪಾಲಕೃಷ್ಣ ದೇವಸ್ಥಾನವು ಕುಂಬಳೆ ಸೀಮೆಯ ಪ್ರಮುಖ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಪ್ರತೀ ವರ್ಷ ಜನವರಿ ತಿಂಗಳಿನಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಕರ್ನಾಟಕ ಹಾಗು ಕೇರಳದ ಲಕ್ಷಾಂತರ ಸಂಖ್ಯೆಯ ಭಕ್ತರು ಈ ಜಾತ್ರೋತ್ಸವದಂದು ಕುಂಬಳೆಯಲ್ಲಿ ಸೇರುತ್ತಾರೆ. ಜಾತ್ರೋತ್ಸವದ ಕೊನೆಯ ದಿನ ನಡೆಯುವ ದೇವರ ಬಲಿ ಉತ್ಸವ ಮತ್ತು ಸಿಡಿಮದ್ದು ಪ್ರದರ್ಶನ ಅತ್ಯಂತ ಆಕರ್ಷಣೀಯವಾಗಿದ್ದು, ಕೇವಲ ಸಿಡಿಮದ್ದು ಪ್ರದರ್ಶನ ನೋಡಲೆಂದೇ ಲಕ್ಷಾಂತರ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ದೇವರೇ ಬರ್ತಾರೆ
ಕ್ಷೇತ್ರದ ರಾಜಾಂಗಣದಲ್ಲಿ ಗೋಪಾಲಕೃಷ್ಣ ದೇವರ ಬಲಿ ಉತ್ಸವ ನಡೆದ ಬಳಿಕ ಉತ್ಸವ ಮೂರ್ತಿಯನ್ನು ಉತ್ಸವ ಕಟ್ಟೆಗೆ ತರಲಾಗುತ್ತದೆ. ಆ ಬಳಿಕ ಬೃಹತ್ ಮೈದಾನದಲ್ಲಿ ಸಿಡಿಮದ್ದು ಪ್ರದರ್ಶನ ಆರಂಭಗೊಳ್ಳುತ್ತದೆ. ದೇವರು ಸಿಡಿಮದ್ದು ಪ್ರದರ್ಶನ ಕಾಣಲೆಂದೇ ಈ ಬೆಡಿಕಟ್ಟೆ ಅಂದ್ರೆ ಸಿಡಿಮದ್ದು ಸ್ಫೋಟ ಮಾಡುವ ಜಾಗಲ್ಲಿರುವ ಕಟ್ಟೆಗೆ ಆಗಮಿಸಿ ಆಸೀನರಾಗುತ್ತಾರೆ ಅನ್ನೋ ನಂಬಿಕೆಯಿದೆ.
ಇದನ್ನೂ ಓದಿ: Ganapati Temple: ಪ್ರಯಾಣಿಕರ ಜೀವ ಕಾಯುವ ಸುಳ್ಯ ಗಡಿಯ ಗಣಪ!
ಈ ದೇಗುಲಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಈ ಕಾರಣಕ್ಕಾಗಿ ಆ ಸಮಯದಲ್ಲಿ ಸಿಡಿಮದ್ದು ಪ್ರದರ್ಶನವನ್ನು ಕೂಡಾ ಭಕ್ತರು ಸೇವೆಯ ರೂಪದಲ್ಲಿ ನಡೆಸುತ್ತಾರೆ. 20 ಲಕ್ಷ ರೂಪಾಯಿಗೂ ಹೆಚ್ಚು ಸಿಡಿಮದ್ದುಗಳ ಪ್ರದರ್ಶನ ಇಲ್ಲಿ ನಡೆದಿದ್ದು, ಕೊಲ್ಲಂನಲ್ಲಿ ನಡೆದ ಸಿಡಿಮದ್ದು ಸ್ಪೋಟ ದುರಂತದ ಬಳಿಕ ಕುಂಬಳೆಯಲ್ಲೂ ಸಿಡಿಮದ್ದುಗಳ ಪ್ರದರ್ಶನದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಹೆಚ್ಚು ಧ್ವನಿ ಮಾಡುವ ಪಟಾಕಿಗಳ ಬದಲು ಪರಿಸರ ಸ್ನೇಹಿಯಾದ ಆಕಾಶದಲ್ಲಿ ಸಿಡಿಯುವ ಆಕರ್ಷಕ ಪಟಾಕಿಗಳಿಗೆ ಇದೀಗ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ.
ಇದನ್ನೂ ಓದಿ: Guliga: ಬೆಂಕಿಯಲ್ಲಿ ಬೀಳೋ ಮೂಕಾಂಬಿಕಾ ಗುಳಿಗ! ರೋಚಕ ಕಥೆ ಕೇಳಿದ್ರೆ ಮೈ ಜುಂ ಅನ್ನುತ್ತೆ
ಒಟ್ಟಿನಲ್ಲಿ ಕುಂಬಳೆ ಗೋಪಾಲಕೃಷ್ಣ ದೇವರು ಸಿಡಿಮದ್ದುಗಳ ಪ್ರದರ್ಶನದಿಂದ ಸಂತೃಪ್ತನಾದರೆ, ಇತ್ತ ಭಕ್ತರು ಕೂಡಾ ಪಟಾಕಿಗಳ ಚಿತ್ತಾರ ಕಣ್ತುಂಬಿಕೊಂಡು ಖುಷಿಪಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ