• Home
  • »
  • News
  • »
  • mangaluru
  • »
  • Kukke Subramanya: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಚಂಪಾಷಷ್ಠಿಯಲ್ಲಿ ಎಡೆಸ್ನಾನಕ್ಕೆ ಅವಕಾಶ

Kukke Subramanya: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಚಂಪಾಷಷ್ಠಿಯಲ್ಲಿ ಎಡೆಸ್ನಾನಕ್ಕೆ ಅವಕಾಶ

ಕುಕ್ಕೆ ದೇಗುಲ

ಕುಕ್ಕೆ ದೇಗುಲ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವಕ್ಕೆ ಈ ಬಾರಿ ಕುಣಿತ ಭಜನೋತ್ಸವ ಮೆರುಗು ನೀಡಲಿದೆ.

  • News18 Kannada
  • Last Updated :
  • Mangalore, India
  • Share this:

    ದಕ್ಷಿಣ ಕನ್ನಡ: ಚಂಪಾಷಷ್ಠಿ ಕೊರೋನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ನಿರ್ಬಂಧಿಸಲಾಗಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿನ ಚಂಪಾ ಷಷ್ಠಿಯ ಎಡೆಸ್ನಾನ ಸೇವೆಗೆ ಈ ಬಾರಿ ಅವಕಾಶ ನೀಡಲಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ (Kukke Subramanya Temple)  ನವೆಂಬರ್‌ 21ರಿಂದ ನಡೆಯಲಿರುವ ಚಂಪಾಷಷ್ಠಿ ಜಾತ್ರಾ ಮಹೋತ್ಸವದ (Kukke Subramanya Temple Champa Shashti) ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಬೀದಿ ಉರುಳು ಸೇವೆ ಮಾಡುವವರಿಗೆ ಲಕ್ಷ ದೀಪೋತ್ಸವ ದಿನದಂದು ರಾತ್ರಿ ರಥೋತ್ಸವದ (Kukke Temple Rathotsav) ಬಳಿಕ ಸಂಜೆ 5ರಿಂದ ಬೆಳಗ್ಗೆ 6 ಗಂಟೆವರೆಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ.


    ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವಕ್ಕೆ ಈ ಬಾರಿ ಕುಣಿತ ಭಜನೋತ್ಸವ ಮೆರುಗು ನೀಡಲಿದೆ. ನವೆಂಬರ್ 23ರಂದು ನಡೆಯಲಿರುವ ಲಕ್ಷದೀಪೋತ್ಸವ ಸಮಯದಲ್ಲಿ ಕುಣಿತಾ ಭಜನೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಸುಮಾರು ಒಂದು ಸಾವಿರ ತಂಡಗಳು ಕುಣಿಯುತ್ತಾ ನಡೆಸುವ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಅದಕ್ಕಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಆಸಕ್ತ ತಂಡಗಳು ಭಜನಾ ಕುಣಿತದಲ್ಲಿ ಭಾಗವಹಿಸಲು ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.


    ಎಲ್ಲಿ ನಡೆಯುತ್ತೆ ಕುಣಿತ ಭಜನೆ?
    ನವೆಂಬರ್ 23 ರ ಲಕ್ಷದೀಪೋತ್ಸವದ ದಿನ ಸಂಜೆ 7ರಿಂದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ ಕಾಶಿಕಟ್ಟೆಯಾಗಿ ಕುಮಾರಧಾರದವರೆಗೆ ಕುಣಿತ ಭಜನೆ ಸಂಭ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ. ನಿರಂತರ ಕುಣಿತಾ ಭಜನೆ ವಿಶೇಷ ಮೆರುಗು ನೀಡಲಿದೆ.


    ಒಂದು ಸಾವಿರ ತಂಡ!
    ಕುಣಿತಾ ಭಜನೋತ್ಸವದಲ್ಲಿ ಸುಮಾರು 1,000 ತಂಡಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಖ್ಯಾತ ಗಾಯಕ ಜಗದೀಶ ಆಚಾರ್ಯ ಪುತ್ತೂರು ಅವರು ಭಾಗವಹಿಸಲಿದ್ದಾರೆ.


    ಇದನ್ನೂ ಓದಿ: Dharmasthala Lakshadeepotsava: 5 ದಿನಗಳ ಕಾಲ ಧರ್ಮಸ್ಥಳ ಲಕ್ಷದೀಪೋತ್ಸವ; ಇಲ್ಲಿದೆ ಪ್ರತಿದಿನದ ಕಾರ್ಯಕ್ರಮ ವಿವರ


    ತಂಡದಲ್ಲಿ ಇರಬೇಕಾದ ಸದಸ್ಯರು?
    ಕುಣಿತಾ ಭಜನೋತ್ಸವದಲ್ಲಿ ಸಾರ್ವಜನಿಕರಲ್ಲದೇ ರಾಜ್ಯಾದ್ಯಂತ ಭಕ್ತರು ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರತಿಯೊಂದು ತಂಡದಲ್ಲಿ ಗರಿಷ್ಟ 10 ಮಂದಿಗಷ್ಟೇ ಅವಕಾಶವಿರಲಿದೆ.


    ಇದನ್ನೂ ಓದಿ: Cricket News: ಕರಾವಳಿ ಕ್ರಿಕೆಟ್ ಪ್ರೇಮಿಗಳ ಬೇಡಿಕೆಗೆ ಕೊನೆಗೂ ಸಿಕ್ಕ ಮನ್ನಣೆ; ಪುತ್ತೂರಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ


    ನೋಂದಣಿ ಕೊನೆ ದಿನಾಂಕ
    ಕುಣಿತಾ ಭಜನೋತ್ಸವದಲ್ಲಿ ಪಾಲ್ಗೊಳ್ಳುವ ಆಸಕ್ತರಿರುವ ತಂಡಗಳು ನವೆಂಬರ್ 20ರ ಒಳಗಾಗಿ ಕುಕ್ಕೆ ದೇಗುಲದ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕಾಗುತ್ತದೆ.

    Published by:ಗುರುಗಣೇಶ ಡಬ್ಗುಳಿ
    First published: