• Home
 • »
 • News
 • »
 • mangaluru
 • »
 • KT ಚಹಾ ಅಂದ್ರೇನು? ಅದ್ಭುತ ರುಚಿ ಹಿಂದಿನ ಗುಟ್ಟು ಹೀಗಿದೆ ನೋಡಿ

KT ಚಹಾ ಅಂದ್ರೇನು? ಅದ್ಭುತ ರುಚಿ ಹಿಂದಿನ ಗುಟ್ಟು ಹೀಗಿದೆ ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

1952ರಲ್ಲಿ ಸಣ್ಣದಾಗಿ ಶುರುವಾದ ಬಂಟ್ವಾಳದ ಕಲ್ಲಡ್ಕದಲ್ಲಿರುವ ಶ್ರೀಲಕ್ಷ್ಮೀ ನಿವಾಸ ಹೋಟೆಲ್ ಇಂದು ಕೆಟಿ ಹೋಟೆಲ್ ಎಂದೇ ಫೇಮಸ್ ಆಗಿದೆ.

 • News18 Kannada
 • 2-MIN READ
 • Last Updated :
 • Dakshina Kannada, India
 • Share this:

  ದಕ್ಷಿಣ ಕನ್ನಡ: ನೊರೆ ಉಕ್ಕುವ ಹಾಲಿನ ಮೇಲಷ್ಟೇ ಚಹಾದ ಪರಿಚಯ. ಕೆಳಗಡೆ ಏನಿದ್ರೂ ಹಾಲ್ನೊರೆಯದ್ದೇ ಕಲರವ. ಅರೆ, ಹೀಗೂ ಚಹಾ ಮಾಡೋಕೆ ಆಗುತ್ತಾ ಮಾರ್ರೆ ಅಂತಾ ಕೇಳ್ಬೇಡಿ. ಇದೇ ನೋಡಿ ನಮ್ ಮಂಗಳೂರಿನ (Mangaluru Specia Tea)  ಭಾರೀ ಫೇಮಸ್ ಕಲ್ಲಡ್ಕ ಟೀ  (Kalladka Teaಅಲಿಯಾಸ್ ಕೆಟಿ.


  ಹೌದು, ಇತ್ತೀಚೆಗೆ ಚಹಾದಲ್ಲೂ ಸಖತ್ ವೆರೈಟಿ ಬಂದಿವೆ. ಕಡಾಯಿ, ತಂದೂರಿ, ಮಡಿಕೆ ಚಾಯಿ ಹೀಗೆ ಹಲವು ವೆರೈಟಿಗಳೇ ಬಂದ್ರೂ ಅದ್ಯಾವುದೂ ಕರಾವಳಿಯಲ್ಲಿ ಕಲ್ಲಡ್ಕ ಟೀಗೆ ಸರಿಸಮಾನವಾಗಿದ್ದೇ ಇಲ್ಲ. ಕಲ್ಲಡ್ಕ ಟೀ ತನ್ನದೇ ಬ್ರ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದೆ. ಕಳೆದ 50 ವರ್ಷಗಳಿಂದ ಕಲ್ಲಡ್ಕ ಟೀಯ ಆ ಟೇಸ್ಟಿ ಗೊತ್ತಿದ್ದವರು ಒಂದು ಹೊತ್ತಾದರೂ ಕೆಟಿ ರುಚಿ ಸವಿದೇ ಸವಿಯುತ್ತಾರೆ.


  ಹೀಗಿದೆ ನೋಡಿ ಕೆಟಿ ಇತಿಹಾಸ!
  1952ರಲ್ಲಿ ಸಣ್ಣದಾಗಿ ಶುರುವಾದ ಬಂಟ್ವಾಳದ ಕಲ್ಲಡ್ಕದಲ್ಲಿರುವ ಶ್ರೀಲಕ್ಷ್ಮೀ ನಿವಾಸ ಹೋಟೆಲ್ ಇಂದು ಕೆಟಿ ಹೋಟೆಲ್ ಎಂದೇ ಫೇಮಸ್ ಆಗಿದೆ. ಬೆಂಗಳೂರು, ಮಡಿಕೇರಿ, ಮೈಸೂರು ಹೋಗುವವರಂತೂ ರಾಷ್ಟ್ರೀಯ ಹೆದ್ದಾರಿ 75 ತಾಗಿಕೊಂಡಿರೋ ಈ ಹೋಟೆಲ್​ಗೆ ತೆರಳಿ ಕೆಟಿ ಸವಿಯದೇ ಮುಂದೆ ಹೋಗೋದೇ ಇಲ್ಲ!


  ಶ್ರೀಲಕ್ಷ್ಮೀ ನಿವಾಸಕ್ಕೆ ಹೋಗುವವರು ತಿಂಡಿ ತಿನಿಸು, ಖಾದ್ಯಗಳನ್ನ ತಿನ್ನೋದಕ್ಕೂ ಜಾಸ್ತಿ ಕೆಟಿ ಸವಿಯೋದಕ್ಕೆ ಹೋಗೋದೆ ಹೆಚ್ಚು. ಹೀಗಾಗಿ ಕಲ್ಲಡ್ಕದ ಈ ಕೆಟಿ ಹೊಟೇಲ್ ಸದಾ ರಶ್ಶೋ ರಶ್ಶು.
  ಲಕ್ಷ್ಮಿ ನಾರಾಯಣ ಹೊಳ್ಳ ಅವರು ಮದ್ರಾಸ್​ಗೆ ತೆರಳಿದಾಗ ಕಂಡುಕೊಂಡ ಯುನಿಕ್ ಸ್ಟೈಲ್ ಟೀ ಅದಾಗಲೇ ಕಲ್ಲಡ್ಕದಲ್ಲಿ ಆರಂಭವಾಯಿತು. ಬಳಿಕ ಇದಕ್ಕೆ ಕಲ್ಲಡ್ಕ ಟೀ ಅನ್ನೋ ನಾಮಕರಣವೂ ಆಯಿತು. ಹೀಗೆ ಕಲ್ಲಡ್ಕ ಟೀ ಮುಂದೆ ಕೆಟಿ ಆಗಿ ಫೇಮಸ್ ಆಗಿದ್ದು, ಹೊಳ್ಳ ಅವರ ಕುಟುಂಬವು ತನ್ನ ಬ್ರ್ಯಾಂಡ್ ಅನ್ನ ಮುಂದುವರೆಸಿಕೊಂಡು ಬಂದಿದೆ.


  80-100 ಲೀಟರ್ ಹಾಲಿನ ಟೀ!
  ಸದ್ಯ ಕಲ್ಲಡ್ಕ ಜಂಕ್ಷನ್ ನಲ್ಲಿರುವ ಈ ಕೆಟಿ ಹೋಟೆಲನ್ನ ಲಕ್ಷ್ಮೀ ನಾರಾಯಣ ಹೊಳ್ಳ ಅವರ ಮೊಮ್ಮಗ ಶಿವರಾಮ ಹೊಳ್ಳ ನಡೆಸುತ್ತಿದ್ದಾರೆ. ಇಲ್ಲಿ ಪ್ರತಿದಿನ 80-100 ಲೀಟರ್ ಹಾಲಿನ ಜೊತೆಗೆ 4-5 ಕೆಜಿ ಚಹಾಪುಡಿ ಖರ್ಚಾಗುತ್ತೆ. ಇತ್ತೀಚೆಗಂತೂ ಕೆಟಿ ಚಾ ಜೊತೆಗೆ ಕೆಟಿ ಕಾಫಿ ಕೂಡಾ ಸಖತ್ ಫೇಮಸ್ ಆಗಿದೆ.


  ಇದನ್ನೂ ಓದಿ: Arecanut Farmers: ಅಡಿಕೆ ತೋಟದಲ್ಲಿ ಡ್ರೋನ್ ಸದ್ದು! ಎಲೆಚುಕ್ಕಿ ರೋಗಕ್ಕೆ ಹೊಸ ಪರಿಹಾರ!


  ಸೆಲೆಬ್ರಿಟಿಗಳೂ ಇಲ್ಲಿ ಚಹಾ ಕುಡಿದಿದ್ದಾರೆ!
  ಮಂಗಳೂರಿಗೆ ಬಂದಾಗಲೆಲ್ಲ ಅದೆಷ್ಟೋ ಸೆಲೆಬ್ರಿಟಿಗಳು ಕೂಡಾ ಕಲ್ಲಡ್ಕ ಟೀ ರುಚಿ ನೋಡಲು ಲಕ್ಷ್ಮೀ ನಿವಾಸಕ್ಕೆ ಬರೋದಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಜಾರ್ಜ್ ಫೆರ್ನಾಂಡಿಸ್, ಜೂಹಿ ಚಾವ್ಲಾ, ಕುಮಾರಸ್ವಾಮಿ, ಕೆಎಲ್ ರಾಹುಲ್ ಹಾಗೂ ಇನ್ನೂ ಅನೇಕಾನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು ಇಲ್ಲಿಗೆ ಬಂದು ಕೆಟಿ ರುಚಿ ನೋಡಿದ್ದಾರೆ. ಇಂದಿಗೂ ಅದೆಷ್ಟೋ ಕಲಾವಿದರು, ರಾಜಕಾರಣಿಗಳು ಇಲ್ಲಿಗೆ ಬರುತ್ತಲೇ ಇರ್ತಾರೆ.


  ಇದನ್ನೂ ಓದಿ: Success Story: ಪುತ್ತೂರಿನಲ್ಲಿ ಹುಟ್ಟಿತು ಸ್ವದೇಶಿ TV ಬ್ರಾಂಡ್! ಟಿವಿ ರಿಪೇರಿ ಮಾಡ್ತಿದ್ದವರು ಕಂಪನಿ ಕಟ್ಟಿದ ಕಥೆ


  ಹೀಗೆ ಕಲ್ಲಡ್ಕ ಟೀ ಕರಾವಳಿ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ಸಖತ್ ಫೇಮಸ್ ಆಗಿದೆ. ಇಲ್ಲಿ ಚಾ ಕುಡಿದವರಂತೂ ತಮ್ಮ ಸ್ಟೇಟಸ್ ನಲ್ಲಿ ‘ಎಂತಾ ಚಾ ಮಾರೆ‘ ಅಂತಾ ಹೊಗಳಿಕೊಳ್ಳೋದರಲ್ಲಿ ಡೌಟಿಲ್ಲ.


  ವರದಿ: ನಾಗರಾಜ್ ಭಟ್, ಮಂಗಳೂರು

  Published by:ಗುರುಗಣೇಶ ಡಬ್ಗುಳಿ
  First published: