Koti Raj: 1,700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಜೋಗದಲ್ಲಿ ಬಿದ್ದು ಬೆನ್ನುಮೂಳೆ ಏಟುಮಾಡಿಕೊಂಡಿದ್ದ ಕೋತಿರಾಜು ಇದೀಗ ಒಂದೂವರೆ ವರ್ಷ ವಿಶ್ರಾಂತಿ ಬಳಿಕ ಮತ್ತೆ ಸಾಹಸ ಮುಂದುವರಿಸಿದ್ದಾರೆ.

 • News18 Kannada
 • 3-MIN READ
 • Last Updated :
 • Dakshina Kannada, India
 • Share this:

  ಬೆಳ್ತಂಗಡಿ: ಕೋತಿರಾಜ್! ಈ ಹೆಸ್ರು ಕೇಳಿದ್ರೇನೇ ಮೈ ರೋಮಾಂಚಕ ಆಗುತ್ತೆ, ಎತ್ತರದ ದೈತ್ಯ ಕೋಟೆಗಳನ್ನ ಏರೋದ್ರಲ್ಲಿ ಅಷ್ಟು ಫೇಮಸ್ ಆಗಿರೋ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ (Koti Raj) ಈಗ ಕರಾವಳಿಗೂ ಲಗ್ಗೆಯಿಟ್ಟಿದ್ದಾರೆ. ದಕ್ಷಿಣ ಕನ್ನಡದ ಬೆಳ್ತಂಗಡಿ ಬಳಿಯಿರೋ ಪ್ರಸಿದ್ಧ ಗಡಾಯಿಕಲ್ಲು (Kotiraj In Gadaikallu) ಏರಿದ್ದಾರೆ ಕೋತಿರಾಜ್.


  ಗಡಾಯಿಕಲ್ಲು ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿದ್ದು, ಕೋತಿರಾಜ್ ಈ ಬೃಹತ್ ಕಲ್ಲನ್ನು ರೋಪ್ ಸಹಾಯದಿಂದ ಏರಿ ಸಾಧನೆ ಮಾಡಿದ್ದಾರೆ. ಈ ಮೂಲಕ ಬರೀ ರೋಪ್​ನಲ್ಲಿ ಗಡಾಯಿಕಲ್ಲು ಏರಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಕೋತಿರಾಜ್ ಪಾತ್ರವಾಗಿದ್ದಾರೆ.


  ಚಂದ್ಕೂರು ದುರ್ಗಾಪರಮೇಶ್ವರಿಗೆ ಪೂಜೆ
  ಕಳೆದ ಎರಡು ದಿನಗಳಿಂದ ಗಡಾಯಿಕಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದ ಕೋತಿರಾಜು ಗಡಾಯಿಕಲ್ಲು ಕೆಳಗಿರುವ ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಏರಲು ಶುರುಮಾಡಿದ್ರು. ನೋಡ ನೋಡುತ್ತಿದ್ದಂತೆಯೇ ಎಲ್ರೂ ಹುಬ್ಬೇರಿಸುವಂತೆ ಗಡಾಯಿಕಲ್ಲನ್ನು ಏರಿ ಸಾಧನೆ ಮಾಡಿದ್ರು.


  ಇದನ್ನೂ ಓದಿ: Success Story: ದೃಷ್ಟಿ ಸಮಸ್ಯೆ ಇದ್ರೂ CA ಪರೀಕ್ಷೆಯಲ್ಲಿ ಸಾಧನೆ!


  ಬೆನ್ನುಮೂಳೆಗೆ ಏಟು ಮಾಡಿಕೊಂಡಿದ್ದ ಕೋತಿರಾಜ್
  ಜೋಗದಲ್ಲಿ ಬಿದ್ದು ಬೆನ್ನುಮೂಳೆ ಏಟುಮಾಡಿಕೊಂಡಿದ್ದ ಕೋತಿರಾಜು ಇದೀಗ ಒಂದೂವರೆ ವರ್ಷ ವಿಶ್ರಾಂತಿ ಬಳಿಕ ಮತ್ತೆ ಸಾಹಸ ಮುಂದುವರಿಸಿದ್ದಾರೆ.
  ಕ್ಲೈಂಬಿಂಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ ಹೊಂದಿರುವ ಕೋತಿರಾಜು ಇದೇ ಕಾರಣಕ್ಕೆ ಇಡೀ ರಾಜ್ಯದಲ್ಲಿ ಹೀಗೆ ಸಾಹಸ ಕಾರ್ಯ ನಡೆಸೋ ಗುರಿ ಹೊಂದಿದ್ದಾರೆ.


  ಇದನ್ನೂ ಓದಿ: Dakshina Kannada: ಜ್ಯೂಸ್​ ತಗೊಂಡ್ರೆ ಕಬ್ಬಿನ ಹಾಲು ಫ್ರೀ! ಇಲ್ಲಿದೆ ಸಖತ್ ಸ್ಟಾರ್ಟಪ್​ ಐಡಿಯಾ


  ವಿದೇಶಗಳಲ್ಲೂ ಸಾಹಸ ಮಾಡುವ ಉತ್ಸಾಹ!
  ಗಡಾಯಿಕಲ್ಲಿನ ಮೇಲೆ ಕರ್ನಾಟಕ ಧ್ವಜ ಹಾರಿಸಿದ್ದಾಗಿ ಕೋತಿರಾಜ್ ತಿಳಿಸಿದ್ರು. ಅಲ್ಲದೇ, ಮುಂದಿನ ದಿನಗಳಲ್ಲಿ ವಿದೇಶಗಳಲ್ಲೂ ಇಂತಹದೇ ಸಾಹಸ ಮಾಡಿ ಭಾರತದ ಧ್ವಜ ಹಾರಿಸಿ ತೋರಿಸುವುದಾಗಿ ಭರವಸೆ ನೀಡಿದ್ರು.

  Published by:ಗುರುಗಣೇಶ ಡಬ್ಗುಳಿ
  First published: