ಕಾಟಿ, ಕಾಳ, ತಾಟಿ, ಬೊಟ್ಟಿಮಾರ್ , ಪಡಿವಾಳ್ಸ್ ರಾಜ. ಅಬ್ಬಬ್ಬ ಒಬ್ಬರಿಗಿಂತ ಒಬ್ಬರದು ಪೈಪೋಟಿ. ಕಂಬಳಕ್ಕಿಳಿಯುವ ಮುನ್ನ ಕೂಲ್ ಆಂಡ್ ಕಾಮ್, ಕೆರೆಗೆ ಇಳಿದೊಡನೆ ಕುದುರೆಗಳನ್ನೂ ನಾಚಿಸುವ ವೇಗ. ಇದು ಪ್ರಸಿದ್ಧ ಕೋಟಿ ಚೆನ್ನಯ ಜೋಡುಕೆರೆ ಕಂಬಳದ ನೋಟ. ಕರಾವಳಿಯಲ್ಲೀಗ ಕಂಬಳಗಳ ಸುಗ್ಗಿ, ಮೂಡುಬಿದಿರೆಯ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳವಂತೂ ಭಾರೀ ಫೇಮಸ್. ಈ ಕಂಬಳದ ವೈಭವವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಕಂಬಳದ ಕರೆಯಲ್ಲಿ ಕೋಣಗಳ ಓಟ ನೋಡುತ್ತಿದ್ದಂತೆ, ಕಂಬಳ ಪ್ರಿಯರು ಸಂಭ್ರಮಿಸಿದರು.
ಸಾಂಪ್ರದಾಯಿಕ ಕಂಬಳ ಕ್ರೀಡೆ ಇಂದಿಗೂ ಕರಾವಳಿಯ ಶ್ರೀಮಂತ ಜಾನಪದ ಕ್ರೀಡೆ. ಕರಾವಳಿಯ ಭಾವೈಕ್ಯತೆಯ ಕ್ರೀಡೆಯೂ ಇದಾಗಿದೆ. ಕಂಬಳ ಕ್ರೀಡೆ ಇಂದಿಗೂ ತನ್ನತನವನ್ನು ಉಳಿಸಿಕೊಂಡಿದೆ.
ಕೋಣ, ಓಟಗಾರ ಇಬ್ಬರಲ್ಲೂ ಭರ್ಜರಿ ಉತ್ಸಾಹ
ವರ್ಷಗಟ್ಟಲೆ ಪ್ರೀತಿಯಿಂದ ಸಾಕಲ್ಪಡುವ ಕೋಣಗಳು ಕಂಬಳದ ದಿನ ಮದುಮಗಳಂತೆ ಸಿಂಗಾರಗೊಂಡು ಕಂಬಳದ ಕರೆಗೆ ಇಳಿದವು. ಒಂದೊಂದು ಜೋಡಿ ಕೋಣಗಳ ಓಟ, ಅದನ್ನ ಓಡಿಸೋ ಓಟಗಾರನ ವೇಗ ಇದೆಲ್ಲವೂ ಜನರ ಗಮನ ಸೆಳೆಯಿತು.
ಇದನ್ನೂ ಓದಿ: Dakshina Kannada: ಟೆರೇಸ್ ಮೇಲೆ ಮಲ್ಲಿಗೆ ಬೆಳೆ, ತಿಂಗಳಿಗೆ 60 ಸಾವಿರ ಆದಾಯ!
ಇದ್ದಾರೆ ಸಾವಿರಾರು ಅಭಿಮಾನಿಗಳು
ಕಂಬಳ ಲೋಕದ ಫಿಟ್ ಆಂಡ್ ಫೈನೆಸ್ಟ್ ಕೋಣ, ಬೆಸ್ಟ್ ಫಿನೀಷರ್ ಕೋಣಗಳಿಗೆ ಕರಾವಳಿಯಲ್ಲೂ ದೊಡ್ಡ ಫ್ಯಾನ್ ಫಾಲೋವರ್ಸ್ ಕೂಡಾ ಇದ್ದಾರೆ. ಜಾಲತಾಣಗಳಲ್ಲೂ ಅಂತಹ ಕೋಣಗಳ ಓಟ, ಅದರ ಖಡಕ್ ಲುಕ್ಕು ಸಖತ್ ರೀಲ್ಸ್ಗಳಾಗಿ ಫೇಮಸ್ ಆಗಿವೆ.
ಇದನ್ನೂ ಓದಿ: Dakshina Kannada: 3 ತಿಂಗಳ ಪರಿಶ್ರಮದಿಂದ ರೆಡಿಯಾಯ್ತು 50 ಅಡಿ ಉದ್ದದ ಗಾಳಿಪಟ!
ಹೀಗೆ ಕರಾವಳಿಯ ಕಂಬಳ ಜಾನಪದ ಕ್ರೀಡೆಯಾದರೂ ಆಧುನಿಕತೆಗೆ ತಕ್ಕಂತೆ ಅಳವಡಿಸಿಕೊಳ್ಳಲಾದ ತಂತ್ರಜ್ಞಾನ ಇದೆಲ್ಲವೂ ಕಂಬಳ ಕ್ರೀಡೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ.
ವರದಿ: ನಾಗರಾಜ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ