• Home
 • »
 • News
 • »
 • mangaluru
 • »
 • Mangaluru News: ದೀಪಾವಳಿ ಹಬ್ಬಕ್ಕೆ ಮಂಗಳೂರಿಗೆ ಸ್ಪೆಷಲ್ ರೈಲು!

Mangaluru News: ದೀಪಾವಳಿ ಹಬ್ಬಕ್ಕೆ ಮಂಗಳೂರಿಗೆ ಸ್ಪೆಷಲ್ ರೈಲು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ವಿಶೇಷ ರೈಲು ರಾಜ್ಯದ ಹಲವೆಡೆ ನಿಲುಗಡೆಯನ್ನು ಹೊಂದಿದ್ದು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಈ ವಿಶೇಷ ರೈಲಿನ ಕುರಿತ ಎಲ್ಲ ಮಾಹಿತಿ ಇಲ್ಲಿದೆ ನೋಡಿ.

 • News18 Kannada
 • Last Updated :
 • Mangalore, India
 • Share this:

  ಮಂಗಳೂರು: ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಬೇರೆ ಬೇರೆ ರಾಜ್ಯದಲ್ಲಿ ಉದ್ಯೋಗ ಸಹಿತ ಇನ್ನಿತರ ಕಾರಣಗಳಿಗಾಗಿ ಹೋಗಿ ನೆಲೆಸಿರುವವರು ತವರಿಗೆ ಆಗಮಿಸುತ್ತಾರೆ. ಹೀಗೆ ಸಾವಿರಾರು ಮಂದಿ ಏಕಕಾಲಕ್ಕೆ ಹೊರಡುವ ಸಾಧ್ಯತೆ ಇರುವುದರಿಂದ ರೈಲು ಪ್ರಯಾಣ ದುಸ್ತರವಾಗಬಹುದು. ಮೊದಲೇ ಭರ್ತಿಯಾಗಿರುವುದರಿಂದ ಕೆಲವರು ಊರಿಗೆ ತಲುಪದೇ ಇರಬಹುದು. ಹೀಗೆ ತವರಿಗೆ ಬರುವವರಲ್ಲಿ ಕರಾವಳಿಗರು (Coastal Karnataka) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿಯೇ ಕೊಂಕಣ ರೈಲ್ವೇ ವಿಶೇಷ ರೈಲೊಂದನ್ನು(Konkan Railway Diwali Special Trains) ಹೆಚ್ಚುವರಿಯಾಗಿ ಗುಜರಾತ್ ಉಧಾನ ಜಂಕ್ಷನ್ ನಿಂದ ಮಂಗಳೂರು ಜಂಕ್ಷನ್ ವರೆಗೆ ಓಡಾಟ ನಡೆಸಲು ನಿರ್ಧರಿಸಿದೆ.


  ವಿಶೇಷ ರೈಲಿನ ದಿನಾಂಕ
  ಈ ವಿಶೇಷ ರೈಲು ಉಧಾನ-ಮಂಗಳೂರು ನಡುವೆ ಅಕ್ಟೋಬರ್ 23 ಹಾಗೂ ಅಕ್ಟೋಬರ್ 30 ರಂದು ಸಂಚರಿಸಲಿದೆ. ಈ ದಿನಾಂಕಗಳಂದು ರಾತ್ರಿ 8 ಗಂಟೆಗೆ ಉಧನ ಜಂಕ್ಷನ್‌ದಿಂದ ಹೊರಡುವ ರೈಲು ಮರುದಿನ ಸಂಜೆ 6.30 ಕ್ಕೆ ಮಂಗಳೂರು ತಲುಪಲಿದೆ.


  ಮಂಗಳೂರಿನಿಂದ ಉಧನ ಜಂಕ್ಷನ್​ಗೆ ವಾಪಸ್
  ಇದೇ ರೈಲು ಅಕ್ಟೋಬರ್ 24 ಹಾಗೂ ಅಕ್ಟೋಬರ್ 31 ರಂದು ಮಂಗಳೂರು ಜಂಕ್ಷನ್ ನಿಂದ ಉಧನ ಜಂಕ್ಷನ್ ಗೆ ವಾಪಸ್ ಆಗಲಿದೆ. ಈ ದಿನಾಂಕಗಳಂದು ರಾತ್ರಿ 8.45 ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು ಮರುದಿನ ಸಂಜೆ 7.15 ಕ್ಕೆ ಉಧನ ಜಂಕ್ಷನ್ ತಲುಪಲಿದೆ.


  ಇದನ್ನೂ ಓದಿ: Mangaluru Viral Video: ಒಂದೇ ಬಲೆಗೆ ಕ್ವಿಂಟಾಲ್‌ಗಟ್ಟಲೆ ಮೀನು ಸಿಕ್ತು!


  ರಾಜ್ಯದಲ್ಲಿ ಎಲ್ಲೆಲ್ಲ ಸ್ಟಾಪ್?
  ಈ ವಿಶೇಷ ರೈಲು ರಾಜ್ಯದ ಹಲವೆಡೆ ನಿಲುಗಡೆಯನ್ನು ಹೊಂದಿದ್ದು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೋಡ್ , ಗೋಕರ್ಣ, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್, ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಹಾಗೂ ಸುರತ್ಕಲ್‌ನಲ್ಲಿ ನಿಲುಗಡೆ ಹೊಂದಿರುತ್ತದೆ.


  ಇದನ್ನೂ ಓದಿ: Tiger Dance: ನೀವೂ ಹುಲಿ ವೇಷ ಹಾಕಿ! ಇಲ್ಲಿದೆ ಚಾನ್ಸ್!


  ಹೆಚ್ಚಿನ ಮಾಹಿತಿಗಾಗಿ
  ರೈಲ್ವೇ ಸಂಬಂಧಿತ ಯಾವುದೇ ಮಾಹಿತಿ, ದೂರು ಹಾಗೂ ಸಲಹೆಗಳಿಗಾಗಿ 'ರೈಲ್ವೇ ಮದದ್' ಆ್ಯಪ್ ಅನ್ನು ಬಳಸಬಹುದಾಗಿದೆ. ಅಥವಾ ಉಚಿತ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಬಹುದಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: