Kanthavara Kannada Sangha: ಕನ್ನಡ ಬೆಳೆಸೋಕೆ ಕಾಂತಾವರದ ಈ ಸಂಘವೇ ಮಾದರಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮೂಲತಃ ಕೇರಳದವರಾದ ನಾ ಮೊಗಸಾಲೆ ಅರವತ್ತರ ದಶಕದಲ್ಲಿ ಕಾಂತಾವರಕ್ಕೆ ಬಂದು ನೆಲೆಸಿದ್ದರು. ಕನ್ನಡದ ಬಗೆಗಿನ ಅಪಾರ ಪ್ರೇಮ, ಸಾಹಿತ್ಯಾಸಕ್ತಿ ಅವರನ್ನ ಕನ್ನಡ ಸಂಘವನ್ನ ಕಟ್ಟುವಂತೆ ಮಾಡಿತ್ತು.

  • Share this:

    ದಕ್ಷಿಣ ಕನ್ನಡ: ಕನ್ನಡದ ಕವಿಗಳು, ಅವರ ಛಾಯಾಚಿತ್ರಗಳು. ನೂರಾರು ಕನ್ನಡದ ಪುಸ್ತಕಗಳು. ಕನ್ನಡದಲ್ಲೇ ವೆಲ್ಕಮ್ ಮಾಡುವ ಕೊಠಡಿಗಳು. ಹೌದು, ಹೀಗೆ ಸರ್ವಸ್ವವನ್ನೇ ಕನ್ನಡವನ್ನಾಗಿ ಉಸಿರಾಡುತ್ತಿರೋ ಈ ಕಟ್ಟಡ (Kanthavara Kannada Sangha) ಇರೋದಾದ್ರೂ ಎಲ್ಲಿ? ಈ ಕಟ್ಟಡದ ಸ್ಪೆಷಲ್ ಏನು ಅಂತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.


    ಯೆಸ್, ಇದು ಉಡುಪಿಯ ಕಾರ್ಕಳದ ಕಾಂತಾವರದಲ್ಲಿರುವ ಕನ್ನಡ ಭವನ. ಸಾರ್ವಜನಿಕರಿಗಾಗಿ ರೆಡಿಯಾಗಿರೋ ಗ್ರಂಥಾಲಯ. ಗೋಡೆಗಳ ತುಂಬ ಕಾಣಸಿಗುವ ಅವಿಭಜಿತ ದಕ್ಷಿಣ ಕನ್ನಡದ ಕವಿಗಳು ಇಲ್ಲಿನ ವಿಶೇಷ.


    60 ದಶಕದಿಂದ ಕನ್ನಡಕ್ಕಾಗಿ ಕೆಲಸ
    ಬೆಳುವಾಯಿಯಿಂದ ಕೊಂಚ ದೂರ ಸಾಗಿದರೆ ಕಾಂತಾರೇಶ್ವರ ದೇಗುಲದ ದ್ವಾರ ಕಾಣಸಿಗುತ್ತೆ. ಅದರೊಳಗೆ ಕೊಂಚ ದೂರ ಸಾಗಿದರೆ ಈ ಕನ್ನಡ ಭವನದ ದರ್ಶನವಾಗುತ್ತದೆ. ಅಂದಹಾಗೆ ಈ ಕನ್ನಡ ಭವನವನ್ನ ನಿರ್ಮಿಸಿದ್ದು ಅರವತ್ತರ ದಶಕದ ಕನ್ನಡ ಪ್ರೇಮಿಗಳು. ಅಂದು ಕಟ್ಟಿದ ಈ ಭವನ ಇಂದಿಗೂ ಕನ್ನಡ ಪ್ರೇಮವನ್ನು ಪಸರಿಸುತ್ತಾ ಬಂದಿದೆ.


    ನಾ ಮೊಗಸಾಲೆಯವರ ಶ್ರಮದ ಫಲ
    ಮೂಲತಃ ಕೇರಳದವರಾದ ನಾ ಮೊಗಸಾಲೆ ಅರವತ್ತರ ದಶಕದಲ್ಲಿ ಕಾಂತಾವರಕ್ಕೆ ಬಂದು ನೆಲೆಸಿದ್ದರು. ಕನ್ನಡದ ಬಗೆಗಿನ ಅಪಾರ ಪ್ರೇಮ, ಸಾಹಿತ್ಯಾಸಕ್ತಿ ಅವರನ್ನ ಕನ್ನಡ ಸಂಘವನ್ನ ಕಟ್ಟುವಂತೆ ಮಾಡಿತ್ತು. ಅದೇ ಕನ್ನಡ ಸಂಘವೀಗ ತನ್ನದೇ ಭವನವನ್ನು ಹೊಂದಿದೆಯಲ್ಲದೆ ಬರಹಗಾರರಿಗಾಗಿ ಅಲ್ಲಮ ಪೀಠ ನಿರ್ಮಿಸಿ ಮುದ್ದಣ ಪ್ರಶಸ್ತಿಯನ್ನೂ ನೀಡುತ್ತ ಬಂದಿದೆ.


    330 ಕೃತಿಗಳ ಪ್ರಕಟಣೆ
    ಈಗಾಗಲೇ ಯಾವ ಕನ್ನಡ ಸಂಘಗಳೂ ಮಾಡಲು ಸಾಧ್ಯವಾಗದಂತಹ ಕೆಲಸಗಳನ್ನ ಮಾಡಿರುವ ಈ ಸಂಘ ಬರೋಬ್ಬರಿ 330 ಕೃತಿಗಳನ್ನ ಬಿಡುಗಡೆಗೊಳಿಸಿದೆ. ಹೀಗೆ ಬಿಡುಗಡೆಯಾದ ಕೃತಿಗಳಿಗೆ ಕನ್ನಡ ಪ್ರೇಮಿಗಳಿಂದಲೇ ಹಣ ಸಂಗ್ರಹಿಸಲಾಗುವುದು ಇಲ್ಲಿನ ವಿಶೇಷ.




    ಸದ್ಯ ಎಂಬತ್ತರ ಹರೆಯದಲ್ಲಿರುವ ನಾ ಮೊಗಸಾಲೆಯವರು ಸಾರ್ವಜನಿಕರ ಸಹಾಯದಿಂದ ಹಣ ಸಂಗ್ರಹಿಸಿ ಭವನವನ್ನ ನಡೆಸಿಕೊಂಡು ಬರುತ್ತಿದ್ದಾರೆ. ಶಾಲೆಯೊಂದರಲ್ಲಿ ಸಂಘಟಿತಗೊಂಡು ನಂತರ ಪುಸ್ತಕಗಳನ್ನ ಪ್ರಕಟಿಸುವಷ್ಟು ಬೆಳೆದಿರುವ ಈ ಸಂಘಕ್ಕೆ ಸರ್ಕಾರದಿಂದ 3 ವರ್ಷದಿಂದ ಈಚೆ ಯಾವ ಅನುದಾನವೂ ಸಿಕ್ಕಿಲ್ಲವಂತೆ.


    ಇದನ್ನೂ ಓದಿ: Dakshina Kannada: ಇವ್ರಿಗೆ ಮೆಸ್ಕಾಂ ಬೇಡ, ಕರೆಂಟ್ ಬಿಲ್​ ಕೂಡಾ ಬರಲ್ಲ; ತೋಟದಲ್ಲೇ ತಯಾರಾಗುತ್ತೆ ವಿದ್ಯುತ್!


    ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಐಟಿ ಬಿಟಿಯಲ್ಲಿರುವ ಕನ್ನಡ ಪ್ರೇಮಿಗಳು ಒಂದಷ್ಟು ಹಣ ಕೊಟ್ಟು ಈ ಸಂಘವನ್ನ ಜೀವಂತವಿರಿಸಿದ್ದಾರೆ. ಇನ್ನು ಈ ಸಂಘಕ್ಕೆ ಗೌರೀಶ ಕಾಯ್ಕಿಣಿ, ಜಯಂತ ಕಾಯ್ಕಿಣಿ, ಕಯ್ಯಾರ ಕಿಂಞಣ್ಣ ರೈರಂತಹ ಘಟಾನುಘಟಿ ಬರಹಗಾರರು ಬಂದು ಹೋಗಿದ್ದೂ ಇದೆ.


    ಇದನ್ನೂ ಓದಿ: Dakshina Kannada: ಕರಾವಳಿಯ ಭಾರೀ ಫೇಮಸ್ ಬೊಂಬೆಯಾಟದ ಹಿಂದಿರುವ ಮಾಂತ್ರಿಕ ಇವರೇ!


    ಒಟ್ಟಿನಲ್ಲಿ ಮೊಗಸಾಲೆಯವರ ಪ್ರಯತ್ನ, ಕನ್ನಡ ಕಟ್ಟುವ ಮನಸು ಎಲ್ಲವೂ ಒಂದುಗೂಡಿ ಉತ್ತಮ ಕನ್ನಡ ಭವನದ ನಿರ್ಮಾಣಕ್ಕೆ ಕಾರಣವಾಗಿದೆ. ಮಾತ್ರವಲ್ಲದೇ, ಸದಾ ಕನ್ನಡದ ಕಂಪು ಪಸರಿಸಲು ಕಾಂತಾವರದ ಈ ಕನ್ನಡ ಸಂಘ ನಿಜಕ್ಕೂ ಪ್ರೇರಣೆ ಆಗಿದೆ.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು