ಮಂಗಳೂರು: ‘‘ಕಾಮನ ಬಿಲ್ಲಲ್ಲವೇ ಮಗಳೆ, ನೀ ನನ್ನ ಕಣ್ಣಿನಲಿ!" ಕಡಲ ತೀರದಲ್ಲಿ ಸಖತ್ ಸದ್ದು ಮಾಡುತ್ತಿರುವ ಸದಭಿರುಚಿಯ ಕನ್ನಡ ಹಾಡು. ಈ ಹಾಡಿನ ಜೊತೆಗೆ ಚಲನಚಿತ್ರಕ್ಕೂ (Film) ಸಖತ್ ನಿರೀಕ್ಷೆ ಹೆಚ್ಚಾಗಿದೆ. ಆದ್ರೆ, ಅದಕ್ಕೂ ಜಾಸ್ತಿ ಸಿನೆಮಾ ನಿರ್ದೇಶಕರದ್ದೇ (Success Story) ಇನ್ನೊಂದು ಇಂಟರೆಸ್ಟಿಂಗ್ ಕಥೆ! ಕೇರಳದಿಂದ ಕರ್ನಾಟಕಕ್ಕೆ (Kerala To Karnataka) ಬಂದು ಆಯ್ದುಕೊಂಡಿದ್ದು ಅದ್ಯಾವುದೋ ಕೆಲಸ, ಕೊನೆಗೆ ಕೈ ಹಾಕಿದ್ದು ಮಾತ್ರ ಕನಸಿನ (Magalu Film) ಸಿನೆಮಾ ಜರ್ನಿಗೆ.
ಯೆಸ್, ಇವರು ಥಾಮಸ್ ಎಂ.ಎಂ. ಮೂಲತಃ ಕೇರಳದವರಾದ್ರೂ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ದಶಕಗಳೇ ಕಳೆದಿವೆ. ಇಲ್ಲಿಗೆ ಬಂದವರೇ ಜೀವನೋಪಾಯಕ್ಕಾಗಿ ಕೆಲವು ಸಮಯ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ನಿರ್ದೇಶನ, ನಟನೆ, ಸಾಹಿತ್ಯ, ನಿರ್ಮಾಣ!
ನಂತರ ರಬ್ಬರ್ ಟ್ಯಾಪಿಂಗ್ ಮಾಡ್ತಾ ಜೀವನ ನಡೆಸ್ತಿದ್ರು. ಆದ್ರೆ ತಮ್ಮೊಳಗಿದ್ದ ಕನಸನ್ನ ಮಾತ್ರ ಎಂದಿಗೂ ಅದುಮಿಟ್ಟವರಲ್ಲ ಥಾಮಸ್. ಹಾಗಾಗಿಯೇ ನೋಡಿ ಕೊನೆಗೂ ಕನ್ನಡದಲ್ಲೊಂದು ‘‘ಮಗಳು‘‘ ಟೈಟಲ್ನಡಿ ಥಾಮಸ್ ತಾವೇ ಸಿನೆಮಾ ನಿರ್ದೇಶಿಸಿ, ನಟಿಸಿ, ಸಾಹಿತ್ಯ ರಚಿಸಿ ಸಿನೆಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ರಿಲೀಸ್ ಆಗೋದಕ್ಕೂ ತಯಾರಾಗಿದೆ.
ಇದನ್ನೂ ಓದಿ: Mangaluru Special Talent: ಮಂಗಳೂರಿನ ವಿಶೇಷ ಪ್ರತಿಭೆ! ಕಣ್ಣಿಗೆ ಬಟ್ಟೆ ಕಟ್ಟಿ ಎರಡೂ ಕೈಯಲ್ಲಿ ಬರೆಯುವ ಬಾಲಕಿ
ನವೀನ್ ಡಿ ಪಡೀಲ್ ಆಕರ್ಷಣೆ
ಥಾಮಸ್ ಮೂಲತಃ ಕೇರಳದವರಾದ್ರೂ ಕನ್ನಡದ ಮೇಲೆ ಅಪಾರ ಆಸಕ್ತಿ. ‘‘ಮಗಳು‘‘ ಸಿನೆಮಾ ಮೂಲಕ ಅದನ್ನ ಸಾಬೀತುಪಡಿಸಿದ್ದಾರೆ ಕೂಡ. ಸಿನೆಮಾದಲ್ಲಿ ಭಾರ್ಗವಿ ಶೇಟ್ ಮಗಳ ಪಾತ್ರದಲ್ಲಿದ್ದು, ತುಳು ಹಾಸ್ಯನಟ ನವೀನ್ ಡಿ ಪಡೀಲ್ ಕೂಡ ನಟಿಸಿದ್ದಾರೆ.ಒಟ್ಟಾರೆ ತುಳುವರ ನಿರೀಕ್ಷೆ ಹೆಚ್ಚಿಸಿದೆ ಈ ಸಿನಿಮಾ.
ಇದನ್ನೂ ಓದಿ: Puttur: ಕಾರ್ ಬಂಪರ್ನಲ್ಲಿ 70 ಕಿಲೋ ಮೀಟರ್ ಸಂಚರಿಸಿದ ನಾಯಿಯ ಮಡಿಲು ಸೇರಿದ ಮರಿಗಳು!
ಹೀಗೆ ಸಾಮಾನ್ಯ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ವ್ಯಕ್ತಿಯೋರ್ವ ತನ್ನ ಕನಸಿಗೆ ನೀರುಣಿಸಿ ಕೊನೆಗೂ ಪೂರ್ಣ ಪ್ರಮಾಣದ ಸಿನೆಮಾ ನಿರ್ದೇಶಕನಾಗಿ ಸೈ ಎನಿಸಿಕೊಳ್ಳೋ ಕಾತರದಲ್ಲಿದ್ದಾರೆ. ಥಾಮಸ್ ಅವರ ಈ ಪ್ರಯತ್ನಕ್ಕೆ ನಮ್ ಕಡೆಯಿಂದಲೂ ಬೆಸ್ಟ್ ಆಫ್ ಲಕ್!
ವರದಿ: ನಾಗರಾಜ್ ಭಟ್, ನ್ಯೂಸ್ 18 ಕನ್ನಡ ಡಿಜಿಟಲ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ