• Home
  • »
  • News
  • »
  • mangaluru
  • »
  • Yakshagana: ಯಕ್ಷಪ್ರೇಮಿಗಳೇ ಇಲ್ಲಿ ಕೇಳಿ, ಸುಪ್ರೀಂ ಕೋರ್ಟ್ ಆದೇಶಕ್ಕೂ ಸಿಕ್ತು ವಿನಾಯಿತಿ

Yakshagana: ಯಕ್ಷಪ್ರೇಮಿಗಳೇ ಇಲ್ಲಿ ಕೇಳಿ, ಸುಪ್ರೀಂ ಕೋರ್ಟ್ ಆದೇಶಕ್ಕೂ ಸಿಕ್ತು ವಿನಾಯಿತಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೌದು, ಯಕ್ಷಗಾನ ಪ್ರಿಯರಿಗೆ ಇದು ಬಂಪರ್ ಸುದ್ದಿ! ಯಾಕಂದ್ರೆ ಸ್ವತಃ ಭಾರತದ ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿಗಳ ಪ್ರಕಾರ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆ ಮಾಡೋಹಾಗಿಲ್ಲ.

  • News18 Kannada
  • 5-MIN READ
  • Last Updated :
  • Mangalore, India
  • Share this:

    ಮಂಗಳೂರು: ಯಕ್ಷಗಾನ ಪ್ರಿಯರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಸುಪ್ರೀಂಕೋರ್ಟ್ ಆದೇಶಕ್ಕೂ ವಿನಾಯಿತಿ ನೀಡಿ ಯಕ್ಷಗಾನ ಪ್ರಿಯರಿಗೆ (Yakshagana Lovers) ಅನುಕೂಲ ಕಲ್ಪಿಸಲಾಗಿದೆ. 2023ರ ಮೇ ತಿಂಗಳ ಕೊನೆಯವರೆಗೂ ಯಕ್ಷಗಾನ ಪ್ರದರ್ಶನಗಳಿಗೆ (Yakshagana Shows)  ಮಧ್ಯರಾತ್ರಿ 12 ಗಂಟೆಯವರೆಗೆ ಲೌಡ್ ಸ್ಪೀಕರ್​ಗಳನ್ನು ಬಳಸಲು ಕಟೀಲು ಮೇಳಕ್ಕೆ ಅವಕಾಶ ನೀಡಲಾಗಿದೆ. ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಗೆ (Kateel Durgaparameshwari Yakshagana Mela)  ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ವಿಶೇಷ ಅವಕಾಶ ಕಲ್ಪಿಸಿಕೊಟ್ಟಿದೆ.


    ಹೌದು, ಯಕ್ಷಗಾನ ಪ್ರಿಯರಿಗೆ ಇದು ಬಂಪರ್ ಸುದ್ದಿ! ಯಾಕಂದ್ರೆ ಸ್ವತಃ ಭಾರತದ ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿಗಳ ಪ್ರಕಾರ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆ ಮಾಡೋಹಾಗಿಲ್ಲ. ಆದ್ರೆ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಧ್ವನಿವರ್ಧಕ ಬಳಸೋಕೆ ವಿಶೇಷ ಅನುಮತಿ ನೀಡುವಂತೆ ಮನವಿ ಸಲ್ಲಿಸಿತ್ತು.


    ಇದನ್ನೂ ಓದಿ:  Kshetrapala Temple: ಈ ದೇವರಿಗೆ ಕೈಮುಗಿದು ಗಾಡಿ ಓಡಿಸಿದ್ರೆ ಆ್ಯಕ್ಸಿಡೆಂಟ್ ಆಗಲ್ವಂತೆ!


    ರಾತ್ರಿ 12 ಗಂಟೆಯವರೆಗೂ ಲೌಡ್ ಸ್ಪೀಕರ್​ಗೆ ಅವಕಾಶ
    ಈ ಮನವಿಗೆ ಜಿಲ್ಲಾಡಳಿತ ಓಗುಟ್ಟಿದೆ. ಮಧ್ಯರಾತ್ರಿ 12 ಗಂಟೆಯವರೆಗೂ ಲೌಡ್ ಸ್ಪೀಕರ್​ಗಳನ್ನು ಬಳಸಲು ಕಟೀಲು ಮೇಳಕ್ಕೆ ಅವಕಾಶ ನೀಡಿದೆ. ಇದ್ರಿಂದ ಯಕ್ಷಗಾನ ಪ್ರಿಯರು ಖುಷಿಯಿಂದ ಯಕ್ಷನೃತ್ಯ ಸವಿಯಬಹುದಾಗಿದೆ.


    ಇದನ್ನೂ ಓದಿ: Belambar Treatment: ಉತ್ತರ ಕನ್ನಡದ ಈ ನಾಟಿವೈದ್ಯರ ಬಳಿ ರಾಜ್​ಕುಮಾರ್, ಬಿಗ್ ಬಿ ಸಹ ಚಿಕಿತ್ಸೆ ಪಡೆದಿದ್ರು!


    ದೈವಾರಾಧನೆಗೂ ಸಿಗುತ್ತಂತೆ ಅನುಮತಿ
    ಅಷ್ಟೇ ಅಲ್ಲ ಕಣ್ರೀ..ಕರಾವಳಿಯ ದೈವಾರಾಧನೆ ಮತ್ತು ಯಾವ್ದೇ ಧಾರ್ಮಿಕ ವಿಧಿವಿಧಾನಗಳಿಗೆ ರಾತ್ರಿ ಧ್ವನಿವರ್ಧಕ ಬಳಕೆ ಮಾಡ್ಬೇಕು ಅಂತಿದ್ರೆ ಅನುಮತಿಗೆ ವಿನಂತಿ ಸಲ್ಲಿಸೋಕೆ ಜಿಲ್ಲಾಡಳಿತ ತಿಳಿಸಿದೆ. ಅನುಮತಿ ಪಡೆಯದೇ ಮಧ್ಯರಾತ್ರಿವರೆಗೆ ಲೌಡ್ ಸ್ಪೀಕರ್ ಬಳಸೋದಕ್ಕಿಂತ ಜಿಲ್ಲಾಡಳಿತದ ಅನುಮತಿ ಪಡೆದೇ ಬಳಸಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: