ಮಂಗಳೂರು: ಎಸೆದ ಬಾಲ್ನ್ನು ಟಫ್ ಅಂತ ಬಾರಿಸೋ ಆಟಗಾರ, ಕಾಲಿನಿಂದ ಹೊಡೆದರೆ ಅಷ್ಟು ದೂರ ಹೋಗಿ ಬೀಳುತ್ತೆ ಫುಟ್ಬಾಲ್, ಯಾವ ಬಾಲ್ ಸಹ ಮಿಸ್ ಆಗೋ ಚಾನ್ಸೇ ಇಲ್ಲ, ಹಣೆಗೆ ನಾಮ ಇಟ್ಟುಕೊಂಡು ನಾನಾ ಕಸರತ್ತು ಮಾಡ್ತಾ ಫುಟ್ಬಾಲ್, ಕ್ರಿಕೆಟ್ ಆಡುವ ಈ ಆನೆ (Kattel Elephant) ಅಂದ್ರೆ ಏನೋ ಆಕರ್ಷಣೆ, ಇದು ಕಟೀಲಿನ (Kateel Temple Mahalakshmi Elephant) ಸಾಕ್ಷಾತ್ ಮಹಾಲಕ್ಷ್ಮಿ.
ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಗಜರಾಣಿಯ ಲೀಲೆಗಳು ಹೀಗೆ ಒಂದೆರಡಲ್ಲ. ದೇವಿ ದರ್ಶನ ಮಾಡಿದ ಭಕ್ತರು ಆನೆಯನ್ನು ಕಂಡು ಖುಷಿ ಖುಷಿಯಿಂದ ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದಾರೆ.
ಮೂವರು ಮುಸ್ಲಿಂ ಮಾವುತರು
ಈ ಹಿಂದೆ ಕಟೀಲು ದೇಗುಲದಲ್ಲಿ ನಾಗರಾಜ ಎಂಬ ಗಂಡಾನೆಯಿತ್ತು. ನಾಗರಾಜ ಮೃತಪಟ್ಟ ನಂತರ ಮಹಾಲಕ್ಷ್ಮಿಯ ಆಗಮನವಾಗಿದೆ. ಜೊತೆಗೆ ಮೂವರು ಹೊಸ ಮಾವುತರೂ ಆನೆ ಟ್ರೇನಿಂಗ್ಗೆ ಬಂದಿದ್ದಾರೆ. ಮುಜಾಹಿದ್, ಫೈರೋಜ್ ಮತ್ತು ಅಲ್ತಾಫ್ ಎಂಬ ಮೂವರು ಮಾವುತರ ಕೈಚಳಕದಿಂದ ಮಹಾಲಕ್ಷ್ಮಿ ಫುಟ್ಬಾಲ್, ಕ್ರಿಕೆಟ್ ಆಡುತ್ತೆ, ಅಷ್ಟೇ ಅಲ್ಲ, ಇನ್ನೇನು ಕೆಲ ದಿನಗಳಲ್ಲಿ ಡಾನ್ಸ್ನ್ನೂ ಮಾಡುತ್ತೆ ಅಂತಾರೆ 23 ವರ್ಷದ ಮಹಾಲಕ್ಷ್ಮಿಯ ಮಾವುತರು.
ಇದನ್ನೂ ಓದಿ: Success Story: 100 ರೂಪಾಯಿಯಲ್ಲಿ ಮೋದಿ ಕನಸು ನನಸು!
ಹೀಗಿದೆ ಮಹಾಲಕ್ಷ್ಮಿಯ ದಿನಚರಿ
ಮಹಾಲಕ್ಷ್ಮಿ ಪ್ರತಿದಿನ ಬೆಳಗ್ಗೆ ಎದ್ದು ಸ್ನಾನ ಮಾಡುತ್ತೆ, ಕಟೀಲು ರಥಬೀದಿಯಲ್ಲಿ ಒಂದು ಸುತ್ತು ಹಾಕಿ ದೇವರಿಗೆ ನಮಸ್ಕರಿಸುತ್ತೆ. ಬೈಹುಲ್ಲು, ಬೆಳ್ತಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸೌತೆಕಾಯಿ, ಹೆಸರುಬೇಳೆ, ರಾಗಿ, ತೊಗರಿಬೇಳೆ, ಹುರುಳಿಗಳನ್ನು ಸವಿಯುತ್ತೆ. ನೂರಾರು ಕೆಜಿ ಸೊಪ್ಪುಗಳನ್ನು ಮಹಾಲಕ್ಷ್ಮಿಗೆ ನೀಡಲಾಗುತ್ತೆ. ಭಕ್ತರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತೆ.
ಇದನ್ನೂ ಓದಿ: Padangara Bhagavathi: ಈಕೆ ಸಾಕ್ಷಾತ್ ದೇವಿಯ ಪ್ರತಿರೂಪ, ಪಾಡಾಂಗರ ಭಗವತಿಯ ಮಹಿಮೆ!
ಭಕ್ತರಿಗೆ ಬೋನಸ್!
ಮಹಾಲಕ್ಷ್ಮಿ ತಣ್ಣೀರನ್ನು ಮೈ ನೆನೆಸಿಕೊಂಡು ತಣ್ಣಗಾಗುತ್ತೆ. ಫುಟ್ಬಾಲ್, ಕ್ರಿಕೆಟ್ ಆಡ್ತಾ ಮನರಂಜಿಸುತ್ತೆ. ಮಹಾಲಕ್ಷ್ಮಿಯ ಈ ಇಡೀ ದಿನದ ಆಟೋಟ ಭಕ್ತರಿಗೆ ಮುದ ನೀಡುತ್ತೆ. ಒಟ್ಟಾರೆ ಕಟೀಲು ದುರ್ಗಾ ಪರಮೇಶ್ವರಿಯ ದರ್ಶನದ ಜೊತೆ ಭಕ್ತರಿಗೆ ಮಹಾಲಕ್ಷ್ಮಿ ಆಟ ತುಂಟಾಟಗಳು ಬೋನಸ್ ಆಗಿವೆ!
ವರದಿ: ಕಿಶನ್ ಶೆಟ್ಟಿ, ನ್ಯೂಸ್ 18
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ