• Home
 • »
 • News
 • »
 • mangaluru
 • »
 • Kantara: ಕಾಂತಾರ ಎಫೆಕ್ಟ್! ದೈವಾರಾಧಕರಿಗೆ ಕರ್ನಾಟಕ ಸರ್ಕಾರದಿಂದ ಶುಭಸುದ್ದಿ

Kantara: ಕಾಂತಾರ ಎಫೆಕ್ಟ್! ದೈವಾರಾಧಕರಿಗೆ ಕರ್ನಾಟಕ ಸರ್ಕಾರದಿಂದ ಶುಭಸುದ್ದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

60 ವರ್ಷ ಮೇಲ್ಪಟ್ಟ ದೈವನರ್ತನ ಮಾಡುವವರಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ಕೊಡಲು ನಿರ್ಧಾರ ಮಾಡಲಾಗಿದೆ.

 • News18 Kannada
 • Last Updated :
 • Mangalore, India
 • Share this:

  ಮಂಗಳೂರು: ದೈವ ನರ್ತನ ಮಾಡುವರಿಗೆ ಮಾಸಾಶನ ಕೊಡಲು ಸರ್ಕಾರ ತೀರ್ಮಾನಿಸಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ (Karnataka Minister Sunil Kumar) ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. 60 ವರ್ಷ ಮೇಲ್ಪಟ್ಟ ದೈವನರ್ತನ ಮಾಡುವವರಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ಕೊಡಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದಿಂದ (Kantara Film) ಮುನ್ನೆಲೆಗೆ ಬಂದ ಕರಾವಳಿಯ ಆಚರಣೆ ದೈವಾರಾಧನೆಗೆ ಇನ್ನಷ್ಟು ಮಹತ್ವ  ಸಿಕ್ಕಂತಾಗಿದೆ. ದೈವ ನರ್ತಕರಿಗೆ (Pension To Daiva Narthakas) ಮಾಸಾಶನ ದೊರೆಯುವಂತಾಗಿದೆ. 


  ಸಂಸ್ಕೃತಿ‌ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತಾಡಬಾರದು. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ. ಯಾರೋ ಒಬ್ಬ ವ್ಯಕ್ತಿ ಹಾಗೆ ಹೇಳಿದ್ರೆ ಆ ಸಂಸ್ಕೃತಿಯಿಂದ ಯಾರೂ ದೂರ ಆಗಲ್ಲ. ಭೂತಾರಾಧನೆ ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗವಾಗಿದೆ ಎಂದು ಸಚಿವ ಸುನೀಲ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.


  ನಟ ಚೇತನ್ ವಿರುದ್ಧ ಪೊಲೀಸ್ ದೂರು
  ಭೂತಕೋಲ ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದಿದ್ದ ನಟ ಚೇತನ್ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ನಟ ಚೇತನ್ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಹಿಂದೂ ಜಾಗರಣಾ ವೇದಿಕೆ ದೂರು ದಾಖಲಿಸಿದೆ. ನಟ ಚೇತನ್ ಹೇಳಿಕೆಯಿಂದ ಹಿಂದೂ ಧರ್ಮದ ನಂಬಿಕೆಗೆ ದಕ್ಕೆ ಉಂಟಾಗಿದೆ. ಹೀಗಾಗಿ ನಟ ಚೇತನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹ ವ್ಯಕ್ತಪಡಿಸಿದೆ.


  ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


  ಕಾಂತಾರ ಸಿನಿಮಾ ದೇಶ ಮಾತ್ರವಲ್ಲ ವಿದೇಶಗಳಲ್ಲಿಯೂ ಸೌಂಡ್ ಮಾಡುತ್ತಿದೆ. ಕರಾವಳಿಯ ನೆಲ, ಜನ, ಕಾಡು, ಸಂಸ್ಕೃತಿಯನ್ನು ತಿಳಿಸೋ ಸಿನಿಮಾವನ್ನು ಜನ ಮೆಚ್ಚಿ ಕೊಂಡಾಡಿದ್ದಾರೆ.


  ಪ್ರಧಾನಿ ಮೋದಿ ಕಾಂತಾರ ಸಿನಿಮಾ ನೋಡ್ತಾರಾ?
  ಪ್ರಧಾನಿ ನರೇಂದ್ರ ಮೋದಿ ಅವರು ರಿಷಬ್ ಶೆಟ್ಟಿ ಜೊತೆ ಕುಳಿತು ಕಾಂತಾರ ಸಿನಿಮಾ ನೋಡಲಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿದೆ. ಈ ಕುರಿತ ಮೆಮ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


  ವೈರಲ್ ಆಗುತ್ತಿದೆ ಈ ಸುದ್ದಿ
  ಪ್ರಧಾನಿ ನರೇಂದ್ರ ಮೋದಿ ನವೆಂಬರ್ 14ರಂದು ರಿಷಬ್ ಶೆಟ್ಟಿ ಅವರ ಜೊತೆ ಕುಳಿತು ಕಾಂತಾರ ಸಿನಿಮಾ ನೋಡಲಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದು ನಿಜವೇ ಎನ್ನುವ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಹೇಳಿಲ್ಲ. ಹೀಗೊಂದು ಸುದ್ದಿ ಓಡಾಡುತ್ತಿದೆ ಅಷ್ಟೆ, ಕಾಂತಾರ ಸಿನಿಮಾ ವಿಮರ್ಶೆಯಿಂದಲೇ ಹೆಚ್ಚು ವೈರಲ್ ಆಗುತ್ತಿದೆ. ಸಿನಿಮಾ ವೀಕ್ಷಿಸಿದವರ ಮಾತುಗಳೇ ಸಿನಿಮಾಗೆ ದೊಡ್ಡ ಬಲವಾಗಿ ಬದಲಾಗಿದೆ.


  ದೇವರ ನಾಡಲ್ಲಿ ಕಾಂತಾರ ಸಿನಿಮಾ ರಿಲೀಸ್
  ಕಾಂತಾರ ತನ್ನ ಯಶಸ್ವಿಯಾತ್ರೆಯನ್ನ ಮುಂದುವರೆಸಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲವೂ ಮುಗಿಸಿಕೊಂಡು ಈಗ ಮಾಲಿವುಡ್​ ಕನ್ನಡದ ಕಾಂತಾರ ಕಾಲಿಡುತ್ತಿದೆ. ಕನ್ನಡದ ಭಾಷೆಯಲ್ಲಿ ಕನ್ನಡಿಗರ ಹೃದಯ ಗೆದ್ದ ಕಾಂತಾರ ಈಗಾಗಲೇ ಆಯಾ ಭಾಷೆಯಲ್ಲಿಯೇ ಸಿನಿಮಾ ರಿಲೀಸ್ ಆಗಿದೆ.


  ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


  ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಮೊದಲು ಕನ್ನಡ ಭಾಷೆಯಲ್ಲಿಯೇ ಕಾಂತಾರ ಸಿನಿಮಾ ರಿಲೀಸ್ ಆಗಿದೆ. ಕಳೆದ ತಿಂಗಳ 30 ರಂದು ತೆರೆಗೆ ಬಂದ ಕಾಂತಾರ ಚಿತ್ರ ರಿಲೀಸ್ ಮುಂಚಿನ ಪ್ರಿಮಿಯರ್ ಶೋದಲ್ಲಿಯೇ ಒಳ್ಳೆ ರೆಸ್ಪಾನ್ಸ್ ಪಡೆಯಿತು.

  Published by:ಗುರುಗಣೇಶ ಡಬ್ಗುಳಿ
  First published: