• Home
  • »
  • News
  • »
  • mangaluru
  • »
  • High-Tech Bus Stand: ದಕ್ಷಿಣ ಕನ್ನಡದಲ್ಲಿ ರಾಜ್ಯದ ಮೊದಲ ಹೈಟೆಕ್ ಬಸ್ ಸ್ಟಾಂಡ್! ಎಷ್ಟೇ ರಾತ್ರಿಯಾದ್ರೂ​ ಸೇಫ್!

High-Tech Bus Stand: ದಕ್ಷಿಣ ಕನ್ನಡದಲ್ಲಿ ರಾಜ್ಯದ ಮೊದಲ ಹೈಟೆಕ್ ಬಸ್ ಸ್ಟಾಂಡ್! ಎಷ್ಟೇ ರಾತ್ರಿಯಾದ್ರೂ​ ಸೇಫ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮಹಿಳೆಯರು SOS ಬಟನ್ ಒತ್ತಿದರೆ ಪೊಲೀಸರಿಗೆ ಅಟೋಮ್ಯಾಟಿಕ್ ಕಾಲ್ ಹೋಗುತ್ತೆ. ಅಷ್ಟೇ ಅಲ್ಲ, 5 ನಂಬರ್​ಗಳಿಗೆ ಅಟೋಮ್ಯಾಟಿಕ್ ಕಾಲ್, ಮೆಸೇಜ್ ಸಹ ಹೋಗುತ್ತೆ.

  • Share this:

    ಮಂಗಳೂರು: ರಾತ್ರಿ ಹೊತ್ತು ಬಸ್ ಸ್ಟಾಂಡ್​ನಲ್ಲಿ ನಿಲ್ಲೋದಂದ್ರೆ ಕೊಂಚ ಸಂಕೋಚ. ಅದ್ರಲ್ಲೂ ಮಹಿಳೆಯರು ಒಬ್ಬಂಟಿಯಾಗಿ ಬಸ್ ಕಾಯೋಕೆ ಹೆದರೋ ಸಂದರ್ಭವೇ ಹೆಚ್ಚು, ಪುಂಡ ಪೋಕರಿಗಳು, ಕಳ್ಳರು, ದರೋಡೆಕೋರರ ಭೀತಿಯೂ ಇತ್ತೀಚಿಗೆ ಹೆಚ್ಚಾಗ್ತಿದೆ. ಆದ್ರೆ ರಾತ್ರಿ ಎಷ್ಟೇ ಹೊತ್ತಲ್ಲೂ ಬಸ್ ಸ್ಟಾಂಡಲ್ಲಿ ನಿಲ್ಲೋಕೆ ಇನ್ಮೇಲೆ ಭಯ ಇರಲ್ಲ. ಅರೇ! ಏನಪ್ಪಾ ಈ ಬಸ್ ಸ್ಟಾಂಡ್ (High-Tech Bus Stand) ವಿಶೇಷ ಅಂದ್ರಾ? ನಾವ್ ಹೇಳ್ತೀವಿ ಕೇಳಿ.


    ದಕ್ಷಿಣ ಕನ್ನಡದ (Dakshina Kannada News) ಸುರತ್ಕಲ್​ನಲ್ಲಿ (Surathkal  Bus Stand) ನಿರ್ಮಾಣವಾಗಿದೆ ರಾಜ್ಯದ ಮೊದಲ ಹೈಟೆಕ್ ಬಸ್ ನಿಲ್ದಾಣ! ಸುರತ್ಕಲ್ ಗೋವಿಂದ ದಾಸ್ ಕಾಲೇಜು ಮುಂಭಾಗದಲ್ಲೇ ಈ ಹೈಟೆಕ್ ಬಸ್ ಸ್ಟಾಂಡ್ ಇದೆ.


    SOS ಬಟನ್ ಒತ್ತಿದರೆ 5 ನಂಬರ್​ಗಳಿಗೆ ಕಾಲ್!
    ಸ್ಮಾರ್ಟ್ & ಡಿಜಿಟಲ್ ಸುರತ್ಕಲ್ ಧ್ಯೇಯದಡಿ ಬಸ್ ನಿಲ್ದಾಣ ನಿರ್ಮಾಣವಾಗಿde.  ಮಹಿಳೆಯರ ಸುರಕ್ಷತೆ ಎಸ್ಒಎಸ್ ಅಳವಡಿಕೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಮಹಿಳೆಯರು SOS ಬಟನ್ ಒತ್ತಿದರೆ ಪೊಲೀಸರಿಗೆ ಅಟೋಮ್ಯಾಟಿಕ್ ಕಾಲ್ ಹೋಗುತ್ತೆ. ಅಷ್ಟೇ ಅಲ್ಲ, 5 ನಂಬರ್​ಗಳಿಗೆ ಅಟೋಮ್ಯಾಟಿಕ್ ಕಾಲ್, ಮೆಸೇಜ್ ಸಹ ಹೋಗುತ್ತೆ. ಪೊಲೀಸ್ ಇನ್ಸ್​ಪೆಕ್ಟರ್ ಎಸಿಪಿ, ಪಾಲಿಕೆ ಅಧಿಕಾರಿ ಸೇರಿದಂತೆ ಐದು ಮಂದಿ ಅಧಿಕಾರಿಗಳಿಗೆ ಕರೆ ಹೋಗಲಿದೆ.




    ಇದನ್ನೂ ಓದಿ: Karanika Daiva: ದೈವದ ಮುಂದೆ ಹೂವಿನ ಹರಕೆ, ಕಾರಣಿಕ ದೈವಸ್ಥಾನದ ದರ್ಶನ ಮಾಡಿ


    ಫುಲ್ ಡಿಜಿಟಲ್ ಸೌಲಭ್ಯ
    ಇನ್ನೂ ಈ ಬಸ್ ನಿಲ್ದಾಣದ ಸ್ಪೆಷಲ್ ಏನಂದ್ರೆ ಉಚಿತ ಅನ್​ಲಿಮಿಟೆಡ್ ವೈಫೈ, ಮೂರು ಸಿಸಿ ಕ್ಯಾಮೆರಾ, ಶುದ್ಧ ಕುಡಿಯುವ ನೀರು, ಎಫ್ಎಂ ರೇಡಿಯೋ, ಇನ್ವರ್ಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಸಿ ಕ್ಯಾಮೆರಾ ನೇರ ದೃಶ್ಯ ಪೊಲೀಸ್ ಠಾಣೆ, ಪಾಲಿಕೆಯ ಕಛೇರಿ ಮತ್ತು ಪೊಲೀಸ್ ಅಧಿಕಾರಿಗಳ ಮೊಬೈಲ್​ಗೆ ಹೋಗಲಿದೆ. ಅಲ್ಲದೇ ಫ್ಯಾನ್, ಬೆಂಕಿ ನಿರೋಧಕ, ಮೊಬೈಲ್, ಲ್ಯಾಪ್ ಟಾಪ್ ಚಾರ್ಜ್, ಪ್ರಥಮ ಚಿಕಿತ್ಸೆಯ ಬಾಕ್ಸ್, 12 ಚೇರ್​ಗಳನ್ನು ಒಳಗೊಂಡಿದೆ.


    ಇದನ್ನೂ ಓದಿ: Dakshina Kannada: ಬೀದಿನಾಯಿಗಳ ಊಟಕ್ಕೆ ಸೀಮೆಎಣ್ಣೆ, ಇದು ಮಹಾತಾಯಿಯ ಸಂಕಷ್ಟ


    ಟಚ್ ಸ್ಕ್ರೀನ್ ಡಿಸ್​ಪ್ಲೇ ಸಹ ಇರಲಿದೆ
    ಅಲ್ಲದೇ ಬಸ್ ಸ್ಟ್ಯಾಂಡ್​ನಲ್ಲಿ ಟಚ್ ಸ್ಕ್ರೀನ್ ಡಿಸ್​ಪ್ಲೇ ಅಳವಡಿಸಲಾಗಿದೆ.ಈ ಡಿಸ್ ಪ್ಲೇಯಲ್ಲಿ ಬಸ್​ಗಳ ಟೈಮಿಂಗ್, ಬಸ್ ಬರುತ್ತಿರುವ ನಿರ್ದಿಷ್ಟ ಸ್ಥಳ ಮತ್ತು ಸುತ್ತಮುತ್ತಲಿನ ಪ್ರವಾಸೋದ್ಯಮ ಸ್ಥಳಗಳ ಮಾಹಿತಿ ಇರಲಿದೆ. ಜೊತೆಗೆ ಐ ಲವ್ ಸುರತ್ಕಲ್ ಎಂಬ ಸೆಲ್ಫಿ ಪಾಯಿಂಟ್ ಕೂಡಾ ಬಸ್ ನಿಲ್ದಾಣದಲ್ಲಿದೆ.


    ವರದಿ: ಕಿಶನ್ ಶೆಟ್ಟಿ, ಮಂಗಳೂರು, ನ್ಯೂಸ್ 18 ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: