Dakshina Kannada Voters: ಮನೆಯಲ್ಲೇ ಮತದಾನ; ದಕ್ಷಿಣ ಕನ್ನಡ ಜಿಲ್ಲೆಯೇ ಟಾಪ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

80 ವರ್ಷ ಮೇಲ್ಪಟ್ಟ ಅತ್ಯಧಿಕ ಹಿರಿಯ ನಾಗರಿಕರನ್ನು ಹೊಂದಿರುವ ಜಿಲ್ಲೆ ಎಂದರೆ ದಕ್ಷಿಣ ಕನ್ನಡ!

  • News18 Kannada
  • 5-MIN READ
  • Last Updated :
  • Mangalore, India
  • Share this:

ಮಂಗಳೂರು: ಮೊದಲ ಬಾರಿಗೆ ರಾಜ್ಯದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲತೆ ಹೊಂದಿರುವವರಿಗೆ ಮನೆಯಿಂದಲೇ ಮತದಾನ (Vote From Home) ಮಾಡುವ ವ್ಯವಸ್ಥೆಯನ್ನು ಚುನಾವಣಾ ಆಯೋಗವು (Election Commission Of India) ಕಲ್ಪಿಸಿದೆ. ಇದಕ್ಕೆ ಪೂರ್ವಭಾವಿಯಾಗಿ ಸಾಕಷ್ಟು ಸಿದ್ಧತೆಗಳನ್ನು ಆಯೋಗವು ಮಾಡಿಕೊಂಡಿದೆ. ಮೇ 10 ರಂದು ವಿಧಾನಸಭೆ ಚುನಾವಣೆ (Karnataka Elections 2023) ನಡೆಯಲಿದ್ದು, ರಾಜ್ಯದಲ್ಲಿ 12,15,763 ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 5.71 ಲಕ್ಷ ವಿಕಲಚೇತನರಿದ್ದಾರೆ. ಇವರೆಲ್ಲರಿಗೂ ಮನೆಯಿಂದಲೇ ವೋಟ್‌ ಮಾಡುವ ಅವಕಾಶವಿದ್ದು, ಅವರಿಂದ ಅರ್ಹ ಮಾಹಿತಿ ಕೇಳಲಾಗಿತ್ತು. ಈಗಾಗಲೇ ಅಂತಹವರಿಂದ ಅರ್ಜಿ ಪಡೆಯಲಾಗಿದ್ದು ಎಪ್ರಿಲ್‌ 17ಕ್ಕೆ ಈ ಪ್ರಕ್ರಿಯೆಯು ಅಂತಿಮಗೊಂಡಿತ್ತು.


ಎಷ್ಟು ಜನರಿಗೆ ಅವಕಾಶ?
ಸದ್ಯ ಚುನಾವಣಾ ಆಯೋಗವು ಅಂತಿಮಗೊಳಿಸಿದ ವರದಿ ಅನ್ವಯ, ರಾಜ್ಯದಲ್ಲಿ 99,529 ಮಂದಿ ಮನೆಯಿಂದಲೇ ಮತದಾನ ಮಾಡಲು ಅರ್ಹತೆ ಪಡೆದುಕೊಂಡಿದ್ದಾರೆ. ಅದರಲ್ಲಿ 80,250 ಮಂದಿ 80 ವರ್ಷ ಮೇಲ್ಪಟ್ಟವರು ಹಾಗೂ 19,729 ಮಂದಿ ವಿಕಲಚೇತನರು ಅರ್ಹತೆ ಪಡೆದಿದ್ದಾರೆ.


ದಕ್ಷಿಣ ಕನ್ನಡ ಟಾಪ್‌, ಬೆಂಗಳೂರು ಗ್ರಾಮಾಂತರ ಲೀಸ್ಟ್
80 ವರ್ಷ ಮೇಲ್ಪಟ್ಟ ಅತ್ಯಧಿಕ ಹಿರಿಯ ನಾಗರಿಕರನ್ನು ಹೊಂದಿರುವ ಜಿಲ್ಲೆ ಎಂದರೆ ದಕ್ಷಿಣ ಕನ್ನಡ. ಇಲ್ಲಿ 10,808 ಮಂದಿ ಹಿರಿಯ ನಾಗರಿಕರು ಮನೆಯಿಂದಲೇ ಮತದಾನ ಮಾಡಲು ಅವಕಾಶ ಪಡೆದಿದ್ದಾರೆ.‌ ಬೆಂಗಳೂರು ಗ್ರಾಮಾಂತರವು ಕನಿಷ್ಠ ಸಂಖ್ಯೆ ಹೊಂದಿದ್ದು, 470 ಮಂದಿ ಮನೆಯಿಂದ ಮತದಾನ ಪಡೆಯಲು ಅರ್ಹತೆ ಹೊಂದಿದ್ದಾರೆ.




ವಿಕಲಚೇತನರ ಅಂಕಿ ಅಂಶ ಹೀಗಿದೆ
ತುಮಕೂರು ಜಿಲ್ಲೆಯು 2,845 ಮಂದಿ ವಿಕಲಚೇತನರನ್ನು ಹೊಂದಿದೆ. ಬಿಬಿಎಂಪಿ ಸೆಂಟ್ರಲ್​ನಲ್ಲಿ 14 ಮಂದಿ ವಿಕಲಚೇತನರಿದ್ದು, ಮನೆಯಿಂದಲೇ ಮತದಾನ ಮಾಡುವ ಹಕ್ಕನ್ನು ಪಡೆದಿದ್ದಾರೆ.


ಇದನ್ನೂ ಓದಿ: Mangaluru Positive News: ಮಂಗಳೂರು ಮಕ್ಕಳ ಸಾಮರಸ್ಯದ ಪ್ರವಾಸ! ಮಸೀದಿ, ಚರ್ಚ್, ದೇವಸ್ಥಾನ ದರ್ಶನ


ಬೆಂಗಳೂರು ಸ್ಥಿತಿಗತಿ
ಬೆಂಗಳೂರು ಮಹಾನಗರ ವ್ಯಾಪ್ತಿಯ 28 ಅಸೆಂಬ್ಲಿ ಕ್ಷೇತ್ರದಲ್ಲಿ 9,152 ಮಂದಿ ಹಿರಿಯ ನಾಗರಿಕರು ಹಾಗೂ 119 ಮಂದಿ ವಿಕಲಚೇತನರು ಇದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 113 ಮಂದಿ ವಿಕಲಚೇತನರು ಇದ್ದಾರೆ.


ಕ್ಷೇತ್ರವಾರು ಕಥೆ
ರಾಜ್ಯದ 224 ಅಸೆಂಬ್ಲಿ ಕ್ಷೇತ್ರಗಳಲ್ಲಿ ಶಿರಾ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮನೆಯಿಂದ ಮತದಾನದ ಹಕ್ಕನ್ನು ಪಡೆದಿದ್ದಾರೆ. ಇಲ್ಲಿ 2,480 ಮಂದಿ ಹಿರಿಯ ನಾಗರಿಕರಿಗೆ ಈ ಅವಕಾಶ ಕಲ್ಪಿಸಲಾಗಿದೆ. ಬಳ್ಳಾರಿ ಗ್ರಾಮಾಂತರ ಹಾಗೂ ಚಿತ್ತಾಪುರ ಕ್ಷೇತ್ರದಲ್ಲಿ ತಲಾ 7 ಮಂದಿ ಹಿರಿಯ ನಾಗರಿಕರು ಮನೆಯಿಂದ ಮತದಾನ ಮಾಡಲಿದ್ದಾರೆ.


ಇದನ್ನೂ ಓದಿ: Kappa Rotti Recipe: ಬೆಳಗಿನ ತಿಂಡಿಗೆ ಮಣ್ಣಿನ ಹಂಚಿನ ಕಪ್ಪರೊಟ್ಟಿ ಮಾಡಿ, ರೆಸಿಪಿ ಇಲ್ಲಿದೆ


ಶೂನ್ಯ ವಿಕಲಚೇತನ ಮತದಾರರು
ಶಿರಾ ಕ್ಷೇತ್ರದಲ್ಲಿ 1499 ಮಂದಿ ಅತ್ಯಧಿಕ ಸಂಖ್ಯೆಯ ವಿಕಲಚೇತನರು ಮನೆಯಿಂದ ಮತ ಚಲಾಯಿಸುವವರಿದ್ದಾರೆ. ರಾಜಾಜಿನಗರ, ಪುಲಕೇಶಿನಗರ, ಬಿಟಿಎಂ ಲೇಔಟ್‌, ಪದ್ಮನಾಭನಗರ ಹಾಗೂ ವಿಜಯನಗರದಲ್ಲಿ ಅಂಗವಿಕಲ ಮತದಾರರ ಸಂಖ್ಯೆಯು ಶೂನ್ಯ ಎಂದು ಚುನಾವಣಾ ಆಯೋಗವು ತಿಳಿಸಿದೆ.

top videos
    First published: