ದಕ್ಷಿಣ ಕನ್ನಡ: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Elections 2023) ಬಿರುಸಿನ ಮತದಾನ ನಡೆಯುತ್ತಿದೆ. ಮತದಾನ ಮಾಡಲೆಂದು ದೇಶದ ಬೇರೆ ಬೇರೆ ರಾಜ್ಯ, ವಿದೇಶಗಳಲ್ಲಿ ನೆಲೆಸಿರುವವರು ತಮ್ಮ ಮತಗಟ್ಟೆ ಇರುವ ಊರುಗಳಿಗೆ ವಾಪಸ್ ಆಗಿ ತ ಹಕ್ಕನ್ನು ಚಲಾಯಿಸುತ್ತಿದ್ದಾರೆ. ವಿಶೇಷ ರೈಲು, ಬಸ್ ಗಳ ಮೂಲಕ ಅದಾಗಲೇ ಊರು ತಲುಪಿ ಮತ ಚಲಾಯಿಸಿ ಮತ್ತೆ ಕರ್ತವ್ಯದೆಡೆಗೆ ತೆರಳಲು ಮುಂದಾಗಿದ್ದಾರೆ. ಈ ಮಧ್ಯೆ ದಕ್ಷಿಣ ಕನ್ನಡದ (Dakshina Kannada News) ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇರಳದ (Kerala) ಕ್ಯಾಲಿಕಟ್ನಿಂದ ಸ್ಕೂಟಿಯಲ್ಲಿ ಬಂದ ದಂಪತಿಯೋರ್ವರು ಮತ ಚಲಾಯಿಸಿ ಮಾದರಿಯಾಗಿದ್ದಾರೆ.
ಮತದಾನಕ್ಕಾಗಿ ಆಗಮನ
ಮೂಲತಃ ಕಡಬ ತಾಲೂಕಿನ ಕೋಡಿಂಬಾಳದವರಾಗಿರುವ ಗೋಪಾಲಕೃಷ್ಣ ಮತ್ತು ಧನ್ಯಾ ದಂಪತಿ ಕೇರಳದ ಕ್ಯಾಲಿಕಟ್ನಲ್ಲಿ ನೌಕರಿಯಲ್ಲಿದ್ದಾರೆ. ಮತದಾನ ಮಾಡುವ ಉದ್ದೇಶದಿಂದಲೇ ಅವರು ಸ್ಕೂಟರ್ನಲ್ಲಿ ಆಗಮಿಸಿ ಕೋಡಿಂಬಾಳದ ಮತಗಟ್ಟೆ ಸಂಖ್ಯೆ 95 ರ ಬೂತ್ನಲ್ಲಿ ಮತದಾನ ಮಾಡಿ ಗಮನ ಸೆಳೆದರು.
ಇದನ್ನೂ ಓದಿ: Mangaluru News: ಮಂಗಳೂರಿನಲ್ಲಿ ರಕ್ತದ ಅಭಾವ, ದಾನಿಗಳೇ ಮುಂದೆ ಬನ್ನಿ!
270 ಕಿ.ಮೀ. ಜರ್ನಿ
ಸೂರ್ಯೋದಯ ಆಗುವ ಮುನ್ನವೇ ಬೆಳಗಿನ ಜಾವ 5 ಗಂಟೆಗೆ ಕ್ಯಾಲಿಕಟ್ನಿಂದ ಹೊರಟು ಬಂದ ಈ ದಂಪತಿಯ ಮಧ್ಯಾಹ್ನ 3.35ಕ್ಕೆ ಮತಗಟ್ಟೆ ತಲುಪಿದ್ದಾರೆ. ಬರೋಬ್ಬರಿ 270 ಕಿಲೋ ಮೀಟರ್ ಕ್ರಮಿಸಿ ಬಂದ ಇವರು ತಮ್ಮ ಹಕ್ಕನ್ನು ಚಲಾಯಿಸಿ ಅದೇ ಸ್ಕೂಟಿಯಲ್ಲಿ ಬಳಿಕ ನಿರ್ಗಮಿಸಿದ್ದಾರೆ.
ಇದನ್ನೂ ಓದಿ: Karnataka SSLC Results 2023: ಬುದ್ಧಿವಂತ ಜಿಲ್ಲೆಗಳು ಟಾಪರ್ ಆಗಿಲ್ಲವೇಕೆ? ಇಲ್ಲಿದೆ ಕಾರಣ!
ಹೀಗೆ ಗೋಪಾಲಕೃಷ್ಣ ಮತ್ತು ಧನ್ಯಾ ದಂಪತಿ ಬೇರೆ ರಾಜ್ಯದಲ್ಲಿದ್ದರೂ, ಕೆಲಸದ ಒತ್ತಡದ ನಡುವೆಯೂ ಮತ ಚಲಾಯಿಸಿ ಮಾದರಿಯಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ