• Home
  • »
  • News
  • »
  • mangaluru
  • »
  • Kambala Calendar: ಕಂಬಳ ಸೀಸನ್ ಶುರು! ಇಲ್ಲಿದೆ ನೋಡಿ ಟೈಮ್​ ಟೇಬಲ್

Kambala Calendar: ಕಂಬಳ ಸೀಸನ್ ಶುರು! ಇಲ್ಲಿದೆ ನೋಡಿ ಟೈಮ್​ ಟೇಬಲ್

ಕಂಬಳ ( ಸಾಂದರ್ಭಿಕ ಚಿತ್ರ)

ಕಂಬಳ ( ಸಾಂದರ್ಭಿಕ ಚಿತ್ರ)

Kambala Dates: ಈ ಬಾರಿ 'ಕಾಂತಾರ' ಪ್ರಭಾವದಿಂದ ದೇಶದ ವಿದೇಶದ ಜನರನ್ನು ಮತ್ತಷ್ಟು ಸೆಳೆಯಲಿದೆ. ಹಾಗಿದ್ರೆ ಕಂಬಳ ಕ್ರೀಡೆ ಯಾವಾಗ ಆರಂಭ? ಎಲ್ಲೆಲ್ಲ ನಡೆಯಲಿದೆ ಅನ್ನೋ ಮಾಹಿತಿ ನಾವ್ ಕೊಡ್ತೀವಿ ನೋಡಿ.

  • News18 Kannada
  • Last Updated :
  • Mangalore, India
  • Share this:

    ಮಂಗಳೂರು: ದೀಪಾವಳಿ ಮುಗಿಯಿತು. ಮಳೆಗಾಲ ದೂರ ಸರಿಯಿತು. ಸಾಲು ಸಾಲು ಹಬ್ಬಗಳು ಮುಗಿದು ಹೋದವು. ಇನ್ನೇನಿದ್ರೂ ಕರಾವಳಿಯಲ್ಲಿ ಸಾಂಸ್ಕೃತಿಕ (Coastal Karnataka Culture) ಕಲರವ ಆರಂಭವಾಗುತ್ತದೆ. ಅವಿಭಜಿತ ದಕ್ಷಿಣ ಕನ್ನಡ (Dakshina Kannada Kambala) ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ಕ್ರೀಡೆ (Kambala Sports) ಮೇಳೈಸಲಿದೆ. ಮೊದಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕಂಬಳ ಕ್ರೀಡೆಯು, ಈ ಬಾರಿ 'ಕಾಂತಾರ' (Kantara Movie)  ಪ್ರಭಾವದಿಂದ ದೇಶದ ವಿದೇಶದ ಜನರನ್ನು ಮತ್ತಷ್ಟು ಸೆಳೆಯಲಿದೆ. ಹಾಗಿದ್ರೆ ಕಂಬಳ ಕ್ರೀಡೆ ಯಾವಾಗ ಆರಂಭ? (Kambala Calendar) ಎಲ್ಲೆಲ್ಲಿ ನಡೆಯಲಿದೆ ಅನ್ನೋ ಮಾಹಿತಿ ನಾವ್ ಕೊಡ್ತೀವಿ ನೋಡಿ.


    ಕಂಬಳ ಎಂದರೇನು?
    ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಜೋಡಿ ಕೋಣಗಳನ್ನು ಕೆಸರು ಗದ್ದೆಯಲ್ಲಿ ಸ್ಪರ್ಧೆಗಿಳಿಸುವುದಾಗಿದೆ. ಹೊನಲು ಬೆಳಕಿನ ಈ ಸ್ಪರ್ಧೆಯನ್ನು ಜನ ಹೆಚ್ಚು ಇಷ್ಟಪಡುತ್ತಾರೆ. ಕನೆ ಹಲಗೆ, ಎರಡು ಜೋಡಿ ಕೋಣಗಳ ಓಟ ಹೀಗೆ ಹಲವು ವಿಭಾಗಗಳಲ್ಲಿ ಸ್ಪರ್ಧೆಯು ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಕಂಬಳ ಕ್ರೀಡೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.


    ಯಾವಾಗ ಆರಂಭ ಕಂಬಳ?
    ನವೆಂಬರ್ 26 ಕ್ಕೆ ಆರಂಭವಾಗಲಿರುವ ಕಂಬಳ ಕ್ರೀಡೆಯು ಎಪ್ರಿಲ್ 8 ರ ವರೆಗೆ ನಡೆಯಲಿದೆ.


    ಕಂಬಳ ವೇಳಾಪಟ್ಟಿ ಹೀಗಿದೆ


    ನವೆಂಬರ್ 26 - ಕಕ್ಕೆಪದವು


    ಡಿಸೆಂಬರ್ 3 - ವೇಣೂರು


    ಡಿಸೆಂಬರ್ 10 - ಬಾರಾಡಿ ಬೀಡು


    ಡಿಸೆಂಬರ್ 13 - ಶಿರ್ವ


    ಡಿಸೆಂಬರ್ 17 - ಹೊಕ್ಕಾಡಿಗೋಳಿ


    ಡಿಸೆಂಬರ್ 24 - ಮೂಡಬಿದಿರೆ


    ಡಿಸೆಂಬರ್ 31 - ಮೂಲ್ಕಿ ಅರಸು ಕಂಬಳ (ಹಳೆಯಂಗಡಿ)


    2023 ರ ಕಂಬಳದ ವಿವರ


    ಜನವರಿ 7 - ಮಿಯಾರು


    ಜನವರಿ 14 - ಅಡ್ವೆ


    ಜನವರಿ 21 - ಮಂಗಳೂರು


    ಜನವರಿ 28 - ಐಕಳ ಬಾವ


    ಇದನ್ನೂ ಓದಿ: Dharmasthala: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ 55 ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಹೀಗಿತ್ತು


    ಫೆಬ್ರವರಿ 04 - ಪುತ್ತೂರು


    ಫೆಬ್ರವರಿ 11 - ಕಟಪಾಡಿ


    ಫೆಬ್ರವರಿ 18 - ವಾಮಂಜೂರು


    ಫೆಬ್ರವರಿ 25 - ಜಪ್ಪಿನಮೊಗರು


    ಮಾರ್ಚ್ 04 - ಬಂಟ್ವಾಳ


    ಮಾರ್ಚ್ 11 - ಉಪ್ಪಿನಂಗಡಿ


    ಮಾರ್ಚ್ 18 - ಬಂಗಾಡಿ


    ಇದನ್ನೂ ಓದಿ: Dose Habba: ದೀಪಾವಳಿಗೆ ದೋಸೆಹಬ್ಬ! ಬೆಳ್ತಂಗಡಿಯಲ್ಲಿ ದೋಸೆ ಸವಿದ ಸಾವಿರಾರು ಜನ!


    ಮಾರ್ಚ್ 25 - ಪೈವಳಿಕೆ


    ಏಪ್ರಿಲ್ 01 - ಸುರತ್ಕಲ್


    ಏಪ್ರಿಲ್ 08 - ಪಣಪಿಲ


    ಒಟ್ಟಾರೆ ಕಾಂತಾರ ಸಿನಿಮಾದ ಹವಾದಿಂದ ಈ ಬಾರಿ ಕಂಬಳ ಇನ್ನಷ್ಟು ಗರ್ದಿ ಗಮ್ಮತ್ತಿನಿಂದ ಕೂಡಿರಲಿದೆ ಎಂದೇ ಹೇಳಳಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಿಂದಲೂ ಕಂಬಳ ವೀಕ್ಷಣೆಗೆ ಪ್ರವಾಸಿಗರು  ಆಗಮಿಸುವ ನಿರೀಕ್ಷೆಗಳಿವೆ.

    Published by:ಗುರುಗಣೇಶ ಡಬ್ಗುಳಿ
    First published: