ದಕ್ಷಿಣ ಕನ್ನಡ: ಕಂಬಳ ತುಳುನಾಡಿನ ಜೀವಾಳ. ಕಂಬಳ ಎಂದರೆ ಊಟ ತಿಂಡಿ ಬಿಟ್ಟು ಕೋಣಗಳ ಹಿಂದೆ ಓಡಾಡೋರು ನೂರಾರು ಜನ ಕರಾವಳಿ ಭಾಗದಲ್ಲಿ (Coastal Karnataka) ಸಿಗ್ತಾರೆ. ಕಂಬಳದಲ್ಲಿ (Kambala Buffalo) ಓಟಗಾರರಿಗಿಂತಲೂ ಕೋಣಗಳಿಗೆ ಫ್ಯಾನ್ಸ್ ಹೆಚ್ಚು. ಚಾಂಪಿಯನ್ ಆಗಿರುವ ಹತ್ತಾರು ಕೋಣಗಳ ಹೆಸರಿನಲ್ಲಿ ಫ್ಯಾನ್ಸ್ ಪೇಜ್‌ಗಳೇ ಸೋಶಿಯಲ್ ಮಿಡಿಯಾದಲ್ಲಿ ಇವೆ. ಇದೀಗ ಕಂಬಳ ಅಭಿಮಾನಿಗಳಿಗೆ (Kambala Fans) ಖುಷಿ ಆಗೋ ಸಿಹಿ ಸುದ್ದಿಯೊಂದು ಸಿಕ್ಕಿದೆ.
‘ಕೆಪಿ ಬೊಲ್ಲ’ ಕೋಣಕ್ಕೆ ಸನ್ಮಾನ
ಕಂಬಳ ಕ್ರೀಡಾಕೂಟದಲ್ಲಿ ಟಾಪ್ ರೇಸ್‌ನಲ್ಲಿ ಓಡುವ ಕೆಲವೇ ಕೆಲವು ಕೋಣಗಳ ಪೈಕಿ ಒಂದಾಗಿರುವ ಕೃಷ್ಣಾಪುರ ನಡುಮನೆ ಪರಮೇಶ್ವರ್ ಸಾಲ್ಯಾನ್ ಅವರ ಒಡೆತನದ ‘ಕೆಪಿ ಬೊಲ್ಲ’ ಕೋಣಕ್ಕೆ ಸನ್ಮಾನ ಮಾಡಲಾಗಿದೆ.
ಅತೀ ಅಪರೂಪದ ವಿದ್ಯಮಾನ
ಕಂಬಳದ ಅತೀ ಅಪರೂಪದ ವಿದ್ಯಮಾನಗಳಲ್ಲಿ ಇದೂ ಒಂದಾಗಿದ್ದು, ಈ ವರ್ಷದ ಸೀಸನ್‌ನಲ್ಲಿ ಮಿಂಚಿನ ಓಟಕ್ಕೆ ಹೆಸರಾದ ಕೆಪಿ ಬೊಲ್ಲನಿಗೆ ಸನ್ಮಾನ ಮಾಡಿರೋದು ಅಭಿಮಾನಿಗಳಿಗೆ ಖುಷಿ ತರಿಸಿದೆ.
ಇದನ್ನೂ ಓದಿ: Kambala: ಕಂಬಳ ನೋಡ್ಬೇಕೇ? ಹಾಗಿದ್ರೆ ಈ ಸೀಸನ್ನ ಕೊನೆಯ ಈ 6 ಕ್ರೀಡಾಕೂಟ ಮಿಸ್ ಮಾಡ್ಲೇಬೇಡಿ!
ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಕಟ್ಟೆಮಾರ್ ಶ್ರೀ ಮಂತ್ರದೇವತಾ ದೈವಸ್ಥಾನದಲ್ಲಿ ಕೃಷ್ಣಾಪುರದ ಕಿಂಗ್ ಖ್ಯಾತಿಯ ಕೆಪಿ ಬೊಲ್ಲ ಕೋಣಕ್ಕೆ ಸನ್ಮಾನ ಮಾಡಲಾಯಿತು.
ಇದನ್ನೂ ಓದಿ: Panjurli Daiva Video: ಪ್ರಜ್ಞೆ ತಪ್ಪಿಸುವ ತುಳುನಾಡಿನ ಪಂಜುರ್ಲಿ ದೈವ! ಆದೇಶ ಕೊಟ್ರೆ ತಕ್ಷಣ ಎಚ್ಚರವಾಗುತ್ತೆ!
ಅಭಿಮಾನಿಗಳಲ್ಲಿ ಭರ್ಜರಿ ಖುಷಿ
ತನ್ನ ಮಿಂಚಿನ ಓಟದ ಮೂಲಕ ಗ್ರಾಮದ ಹೆಸರನ್ನು ಹತ್ತೂರಿಗೆ ಪಸರಿಸಿದ ಕಿಂಗ್ ಕೆಪಿಗೆ ದೈವಸ್ಥಾನದ ಆಡಳಿತ ಮಂಡಳಿಯವರು ಕ್ಷೇತ್ರದಲ್ಲಿ ಸನ್ಮಾನ ಮಾಡಿ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು. ಈ ವೇಳೆ ನೂರಾರು ಭಕ್ತರು ಮತ್ತು ಕೆಪಿ ಬೊಲ್ಲನ ಫ್ಯಾನ್ಸ್ ತಮ್ಮ ನೆಚ್ಚಿನ ಕೋಣಕ್ಕೆ ಸನ್ಮಾನ ಆಗಿದ್ದನ್ನು ಕಂಡು ಖುಷಿ ಪಟ್ಟರು.
ವರದಿ: ಅವಿನಾಶ್ ಕಡೆಶಿವಾಲಯ, ನ್ಯೂಸ್ 18 ಕನ್ನಡ ಡಿಜಿಟಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ