ದಕ್ಷಿಣ ಕನ್ನಡ: ದೇವರ ಸ್ವಂತ ನಾಡು ಎಂದು ಕರೆಸಿಕೊಂಡಿರುವ ಕೇರಳದಲ್ಲಿ ದೈವಾರಾಧನೆಗೆ ಕರ್ನಾಟಕದ ಕರಾವಳಿಯಂತೆ (Coastal Karnataka Culture) ಭಾರೀ ಮಹತ್ವವಿದೆ. ಕರಾವಳಿಯಲ್ಲಿರುವಂತೆ ಸುಮಾರು 500 ಕ್ಕೂ ಹೆಚ್ಚಿನ ವಿವಿಧ ಪ್ರಕಾರದ ದೈವಗಳನ್ನು ಕೇರಳ ರಾಜ್ಯದಾದ್ಯಂತ (Kerala) ಆರಾಧಿಸಲಾಗುತ್ತಿದೆ. ಈ ದೈವಗಳಲ್ಲಿ ಭಗವತಿ ದೈವದ ಆರಾಧನೆಗೆ ಅತ್ಯಂತ ಮಹತ್ವವಿದೆ. ಇಂತಹದೇ ವಿಶಿಷ್ಟ ಆಚರಣಾ ಮಹೋತ್ಸವ ಕಾಸರಗೋಡು (Kasaragodu) ಜಿಲ್ಲೆಯ ಸಿರಿಯ ಸಮೀಪದ ಅಡ್ಕ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವದಲ್ಲಿ (Kaliyattam Festival) ನಡೆದಿದೆ. ಶಿವ-ಪಾರ್ವತಿಯರು ಹುಲಿಯಾದ ಕಥೆಯನ್ನು ಬಿಂಬಿಸುವ ಈ ದೈವಾಚರಣೆಯನ್ನು ನೋಡುವುದೇ ಕಣ್ಣಿಗೆ ಸಂಭ್ರಮ!
ಕರ್ನಾಟಕದ ಕರಾವಳಿ ಭಾಗದಲ್ಲಿ ಇರುವಂತೆಯೇ, ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲೂ ದೈವಾರಾಧನೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆರಾಧಿಸಿಕೊಂಡು ಬರಲಾಗುತ್ತಿದೆ.
ಎಲ್ಲಿದೆ ಈ ಅಡ್ಕ ಕ್ಷೇತ್ರ?
ಈ ಆರಾಧನೆಗಳಲ್ಲಿ ದೇವಿ ಅವತಾರವಾದ ಭಗವತಿಗೆ ಅತ್ಯಂತ ಮಹತ್ವವಿದೆ. ಭಗವತಿ ಆರಾಧನೆಯನ್ನು ಕಳಿಯಾಟ, ನಡಾವಳಿ ಮಹೋತ್ಸವಗಳ ಮೂಲಕ ಆಚರಿಸಿಕೊಂಡು ಬರಲಾಗುತ್ತಿದೆ. ಕಾಸರಗೋಡು ಜಿಲ್ಲೆಯ ಸಿರಿಯ ಸಮೀಪದ ಅಡ್ಕ ಎಂಬಲ್ಲಿದೆ ಈ ದೇವಿಯ ತಾಣವಿದೆ. ಅಡ್ಕ ಶ್ರೀ ಭಗವತೀ ದೈವಸ್ಥಾನ ಎನ್ನುವ ಹೆಸರಿನಲ್ಲಿ ಕರೆಯಲ್ಪಡುವ ಈ ಕ್ಷೇತ್ರದಲ್ಲಿ ಭಗವತಿ ದೇವಿಗೆ ಕಳಿಯಾಟ ಮಹೋತ್ಸವವನ್ನು ನಡೆಸಲಾಗುತ್ತದೆ.
ಇದನ್ನೂ ಓದಿ: Dakshina Kannada: ಮಸೀದಿ ನಿರ್ಮಿಸಿದ ಹಿಂದೂ ಬಡಗಿಯನ್ನು ಮೆಚ್ಚಿ ಐಫೋನ್, ವಾಚ್ ಗಿಫ್ಟ್!
ಈ ಎಲ್ಲ ದೈವಗಳಿಗೆ ಪೂಜೆ
ಅಡ್ಕ ಭಗವತಿ ಕ್ಷೇತ್ರದಲ್ಲಿ ಪುಲ್ಲುಕರಿಂಗಾಳಿ, ಪುಲ್ಲೂರಾಳಿ, ವೆಲ್ಲೂರು ಕಣ್ಣನ್, ಪಿಲಿಕಂಡನ್, ಕಾಲಪುಲಿ, ಕರೀಂದ್ರ ಕಣ್ಣನ್ ನಾಯರ್, ವೇಟಕ್ಕೊರುಮಗನ್, ಪಿಲಿಚ್ಚೋಗನ್, ಗುಳಿಗ ಮತ್ತು ವಿಷ್ಣುಮೂರ್ತಿ ದೈವಗಳನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಈ ದೈವಗಳಿಗೆ ಇಲ್ಲಿ ನೇಮೋತ್ಸವವನ್ನೂ ನಡೆಸಲಾಗುತ್ತದೆ.
ಊರ ಹಾಗೂ ಪರವೂರಿನ ಸಾವಿರಾರು ಸಂಖ್ಯೆಯ ಭಕ್ತಾದಿಗಳು ರಾತ್ರಿಯಿಂದ ಹಗಲಿನವರೆಗೆ ನಡೆಯುವ ಈ ನೇಮೋತ್ಸವನ್ನು ಪಾಲ್ಗೊಳ್ಳುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಇದನ್ನೂ ಓದಿ: Gangamma Devi Temple: ಗಂಗಮ್ಮ ದೇವಿಗೆ ಪಂಜುರ್ಲಿ ಅಲಂಕಾರ, ಚರ್ಚೆಗೆ ಕಾರಣವಾದ ಫೋಟೋಗಳನ್ನು ನೋಡಿ
ಅದರಲ್ಲೂ ದೇವಿಯ ಸ್ವರೂಪವಾದ ಪುಲ್ಲುಕರಿಂಗಾಳಿ ದೈವದ ನರ್ತನ ಅತ್ಯಂತ ವಿಶೇಷವಾಗಿರುತ್ತದೆ. ಭಾರೀ ಗಾತ್ರದ ತಲೆಯ ಮೇಲೆ ಕಟ್ಟುವ ಅಣಿಯನ್ನು ಭೂಮಿಗೆ ತಾಗಿಸುವ ಮೂಲಕ ಅತ್ಯಂತ ಆಕರ್ಷಕವಾಗಿ ಈ ದೈವಿಯ ನರ್ತನ ನೆರವೇರುತ್ತದೆ.
ವರದಿ: ನ್ಯೂಸ್ 18,ಪುತ್ತೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ