• Home
  • »
  • News
  • »
  • mangaluru
  • »
  • Jobs In Mangaluru ಭಾರತ್ ಸಿನೆಮಾಸ್​ನಲ್ಲಿ ಇದೆ ಉದ್ಯೋಗ; ಬೇಗ ಅಪ್ಲೈ ಮಾಡಿ

Jobs In Mangaluru ಭಾರತ್ ಸಿನೆಮಾಸ್​ನಲ್ಲಿ ಇದೆ ಉದ್ಯೋಗ; ಬೇಗ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Jobs In Bharath Cinemas: ದೇಶದ ಪ್ರತಿಷ್ಟಿತ ಮಲ್ಟಿಪ್ಲೆಕ್ಸ್ ಸಿನೆಮಾ ಮಂದಿರದಲ್ಲಿ ಒಂದಾಗಿರುವ 'ಭಾರತ್ ಸಿನೆಮಾಸ್' ನಲ್ಲಿ ಉದ್ಯೋಗ ಮಾಡುವ ಅವಕಾಶವಿದೆ.

  • News18 Kannada
  • Last Updated :
  • Mangalore, India
  • Share this:

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯುವಕ-ಯುವತಿಯರಿಗೆ ಉದ್ಯೋಗಾವಕಾಶದ ಒಳ್ಳೆ ಸುದ್ದಿಯೊಂದು ಇಲ್ಲಿದೆ. ನೀವೇನಾದರೂ ಉದ್ಯೋಗ ಹುಡುಕುತ್ತಿದ್ದರೆ (Job News) ದೇಶದ ಪ್ರತಿಷ್ಟಿತ ಮಲ್ಟಿಪ್ಲೆಕ್ಸ್ ಸಿನೆಮಾ ಮಂದಿರದಲ್ಲಿ ಒಂದಾಗಿರುವ 'ಭಾರತ್ ಸಿನೆಮಾಸ್' ನಲ್ಲಿ ಉದ್ಯೋಗ ಮಾಡುವ (Jobs In Bharath Cinemas) ಅವಕಾಶವಿದೆ. ಈಗಾಗಲೇ ಕರಾವಳಿಯ ಹಲವೆಡೆ 'ಭಾರತ್ ಸಿನೆಮಾಸ್' ತನ್ನ ಬ್ರಾಂಚ್​ಗಳನ್ನ ಈಗಾಗಲೇ ಸ್ಥಾಪಿಸಿದೆ. ಮುಂದಿನ ದಿನಗಳಲ್ಲಿ‌ ಇನ್ನಷ್ಟು ಬ್ರಾಂಚ್​ಗಳು ಪುತ್ತೂರು (Puttur) ಹಾಗೂ ಇನ್ನಿತರ ಸ್ಥಳಗಳಲ್ಲಿ ತಲೆ ಎತ್ತಲಿದೆ. ಹೀಗಾಗಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

    ಸಂಸ್ಥೆಯ ಹೆಸರುಭಾರತ್ ಸಿನೆಮಾಸ್
    ಹುದ್ದೆಯ ಹೆಸರುಅಸೋಸಿಯೇಟ್ ಆಪರೇಷನ್ ಹಾಗೂ ಅಸೋಸಿಯೇಟ್ ಇಂಜಿನಿಯರಿಂಗ್ ಹುದ್ದೆ
    ಕೆಲಸದ ಸ್ಥಳದಕ್ಷಿಣ ಕನ್ನಡ
    ವಯೋಮಿತಿಅನುಕ್ರಮವಾಗಿ 27 ಮತ್ತು 30 ವರ್ಷಗಳು
    ಈ ವಿಳಾಸಕ್ಕೆ ಅರ್ಜಿ ಕಳಿಸಿbharathcinemas.hr@gmail.com

    ಹುದ್ದೆಗಳ ವಿವರ
    'ಭಾರತ್ ಸಿನೆಮಾಸ್' ನಲ್ಲಿ ಅಸೋಸಿಯೇಟ್ ಆಪರೇಷನ್ ಹಾಗೂ ಅಸೋಸಿಯೇಟ್ ಇಂಜಿನಿಯರಿಂಗ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.


    ವಿದ್ಯಾರ್ಹತೆ ಮತ್ತು ವಯೋಮಿತಿ
    ಆಸಕ್ತ ಅಭ್ಯರ್ಥಿಗಳು Associate Operations ಹುದ್ದೆಗೆ ಅರ್ಜಿ ಸಲ್ಲಿಸುವುದಿದ್ದರೆ 27 ವಯಸ್ಸಿನ ಒಳಗಿನವರಾಗಿರಬೇಕು. ಮತ್ತು ಎಸ್​ಎಸ್​ಎಲ್​ಸಿ, ಪಿಯುಸಿ ಅಥವಾ ಪದವಿ ಶಿಕ್ಷಣ ಪೂರೈಸಿರಬೇಕು.


    ಇನ್ನು Associate Engineering ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 30 ವರ್ಷದ ಒಳಗಿನವರಾಗಿದ್ದು, ಡಿಪ್ಲೊಮಾ ಅಥವಾ ಐಟಿಐ ತರಬೇತಿ ಪಡೆದಿರಬೇಕು. ಜೊತೆಗೆ 3 ವರ್ಷದ ಅನುಭವ ಹೊಂದಿರಬೇಕು.


    ಸಂದರ್ಶನ ಯಾವಾಗ?
    ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 7 ರಂದು ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬೇಕು. ಆ ದಿನ ಬೆಳಿಗ್ಗೆ 9.30 ಯಿಂದ ಆರಂಭವಾಗಿ 5.30ರ ವರೆಗೆ ಸಂದರ್ಶನ ನಡೆಯಲಿದೆ.


    ಅರ್ಜಿ ಸಲ್ಲಿಸುವ ವಿಧಾನ
    ಆಸಕ್ತ ಅಭ್ಯರ್ಥಿಗಳು ಇ-ಮೇಲ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಇ-ಮೇಲ್ ವಿಳಾಸ : bharathcinemas.hr@gmail.com


    ಸಂದರ್ಶನ ಸ್ಥಳ ಹಾಗೂ ಹೆಚ್ಚಿನ ಮಾಹಿತಿಗಾಗಿ
    ಸಂದರ್ಶನ ಸ್ಥಳ ಹಾಗೂ ಹೆಚ್ಚಿನ ಮಾಹಿತಿಗಾಗಿ ಭಾರತ್ ಸಿನೆಮಾಸ್, ಭಾರತ್ ಮಾಲ್, ಎರಡನೇ ಮಹಡಿ, ಬಿಜೈ, ಮಂಗಳೂರು ಇಲ್ಲಿಗೆ ಭೇಟಿ ನೀಡುವುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: