Dakshina Kannada: 4,33,333 ರೂಪಾಯಿಗೆ ಹರಾಜಾದ ಒಂದು ಹಲಸಿನ ಹಣ್ಣು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಹರಾಜಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

  • News18 Kannada
  • 2-MIN READ
  • Last Updated :
  • Dakshina Kannada, India
  • Share this:

ದಕ್ಷಿಣ ಕನ್ನಡ: ಹಲಸಿನ ಸೀಸನ್ ಶುರುವಾಗೇಬಿಟ್ಟಿದೆ. ಪಲ್ಯ, ಹುಳಿ ಹೀಗೆ ನಾನಾ ಪದಾರ್ಥಗಳನ್ನ ಮಾಡೋದೊಂದೇ ಅಲ್ಲದೇ, ಸಿಹಿ ಸಿಹಿ ಹಲಸಿನ ತೊಳೆಗಳನ್ನ ತಿನ್ನೋದೇ ಒಂದು ಖುಷಿ. ಇದೀಗ ಇಲ್ಲೊಂದು (Dakshina Kannada) ಹಲಸಿನ ಹಣ್ಣು ಬರೋಬ್ಬರಿ 4.33 ಲಕ್ಷ ರೂಪಾಯಿಗೆ ಹರಾಜಾಗಿ (Jackfruit Auction)  ಸಖತ್ ಸುದ್ದಿ ಮಾಡುತ್ತಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಲರಪಟ್ಣದ ನವೀಕೃತ ಮಸೀದಿಯ ಉದ್ಘಾಟನೆ ವೇಳೆ ಈ ಅಪರೂಪದ ಘಟನೆ ನಡೆದಿದೆ.


what are the health benefits of jackfruit
ಹಲಸಿನ ಹಣ್ಣು


4,33,333 ರೂಪಾಯಿಗೆ ಹರಾಜು ಗೆದ್ದರು ನೋಡಿ!
ಮಸೀದಿಗೆ ಅರ್ಪಣೆಯಾಗಿದ್ದ ಹಲಸಿನ ಹಣ್ಣನ್ನು ಹರಾಜಿಗೆ ಇಡಲಾಗಿತ್ತು. ಈ ಹರಾಜಿನಲ್ಲಿ ಸ್ಥಳೀಯ ಪ್ರಮುಖರಾದ ಅಝೀಜ್ ಹಾಗೂ ಲತೀಫ್ ಎಂಬುವವರ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೆ ಲತೀಫ್ ಹಲಸಿನ ಹಣ್ಣನ್ನು ಬರೋಬ್ಬರಿ 4,33,333 ರೂಪಾಯಿಗಳಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ಇದನ್ನೂ ಓದಿ: Dakshina Kannada: ಮಸೀದಿ ನಿರ್ಮಿಸಿದ ಹಿಂದೂ ಬಡಗಿಯನ್ನು ಮೆಚ್ಚಿ ಐಫೋನ್, ವಾಚ್ ಗಿಫ್ಟ್!


ಈ ಹರಾಜಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.



ಇದನ್ನೂ ಓದಿ: Dakshina Kannada: ಶಿವ-ಪಾರ್ವತಿಯರು ಹುಲಿಯಾದ ಕಥೆ, ಕಳಿಯಾಟದ ವೈಭವ!

top videos


    ಇದೊಂದೇ ಅಲ್ಲದೆ, ಹಲವು ವಸ್ತುಗಳನ್ನು ಹರಾಜು ಮಾಡಲಾಗಿದ್ದು, ಒಳ್ಳೆಯ ಮೊತ್ತ ಲಭಿಸಿದೆ. ಈ ಮೊತ್ತವನ್ನು ಆಡಳಿತ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

    First published: