ಮಂಗಳೂರು: ಕಣ್ಣು ಹಾಯಿಸಿದಲ್ಲೆಲ್ಲ ಚಿತ್ರಗಳ ಚಿತ್ತಾರ. ಒಂದೊಂದು ಚಿತ್ರಗಳು ಮೂಡಿಸಿದೆ ವಿಶೇಷ ಅಲಂಕಾರ. ಮೈಮನ ರೋಮಾಂಚನಗೊಳಿಸಬಲ್ಲ ಚಿತ್ರಗಳ ಆಕಾರ. ಇದುವೇ ಆಳ್ವಾಸ್ ಜಾಂಬೂರಿಯ ಚಿತ್ರಸಿರಿಯ ಚಿತ್ತಾರ. ಹೌದು, ಮೂಡಬಿದಿರೆಯ ಆಳ್ವಾಸ್ನಲ್ಲಿ ಆರಂಭವಾದ ಸಾಂಸ್ಕೃತಿಕ ಜಾಂಬೂರಿಯಲ್ಲಿನ (International Scout And Guide Cultural Jamboree) ಚಿತ್ರ ಸಿರಿ ಮೇಳವಂತೂ ಆಕರ್ಷಕ ಚಿತ್ರಗಳ ಹೂರಣವನ್ನೇ ಹೊಂದಿತ್ತು. ಕಣ್ಮನ ಸೆಳೆಯುವ ಈ ಚಿತ್ರಗಳ ಚಿತ್ತಾರಕ್ಕೆ (Art Work) ಕಲಾರಸಿಕರು ಮೂಕವಿಸ್ಮಿತರಾದರು.
ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಚಿತ್ರಕಾರರ ಚಿತ್ರಗಳು ಗಮನ ಸೆಳೆಯುತ್ತಿದೆ. ವಿದೇಶಿ ಕಲಾವಿದರ ಚಿತ್ರಗಳು ಇಲ್ಲಿವೆ. ಬಹುತೇಕ ಚಿತ್ರಗಳು ಕಲಾವಿದರ ಕುಂಚದಿಂದ ಅರಳಿದ್ದರೆ, ಇನ್ನೂ ಹಲವು ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಅದ್ಭುತ ಕ್ಷಣಗಳಿಗೆ ಇಲ್ಲಿ ಅಚ್ಚು ಹಾಕಿ ಪ್ರದರ್ಶಿಸಲಾಗುತ್ತಿದೆ.
ಪ್ರದರ್ಶನ ಮಾತ್ರವಲ್ಲ, ಮಾರಾಟವನ್ನೂ ಮಾಡಲಾಯ್ತು
ಅದ್ಭುತ ಪೇಂಟಿಂಗ್ ನೋಡಲೆಂದು ಬರುವ ಕಲಾಸಕ್ತರು ತಮ್ಮ ಮೊಬೈಲ್ ಗಳಲ್ಲಿ ಫೋಟೋಗಳನ್ನ ಸೆರೆ ಹಿಡಿದು ಖುಷಿ ಪಡುತ್ತಿದ್ದಾರೆ. ಕಲಾಕಾರರು ಅಷ್ಟೇ ತಮ್ಮ ಬತ್ತಳಿಕೆಯಲ್ಲಿರುವ ಚಿತ್ರಗಳನ್ನು ಪ್ರದರ್ಶಿಸಿದ್ದಲ್ಲದೇ, ಮಾರಾಟ ಮಾಡುವ ಮಾಡುವ ಮೂಲಕ ತಮ್ಮ ಪೇಂಟಿಂಗ್ನ ಮೌಲ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Dakshina Kannada: ಮೈಸೂರು ಮಹಾರಾಜರ ಕಾಲದ ಬಂಗಾರದ ಚಿತ್ರಗಳು! ವಿಡಿಯೋ ನೋಡಿ
ಇನ್ನು ಬೆಳಗಾವಿ ಜಿಲ್ಲೆಯ ಖಾನಾಪುರದ ರೇಣುಕಾರವರ ಮಡಿಕೆ ಶಾಪ್ ಎಲ್ಲರ ಗಮನ ಸೆಳೆಯುತ್ತಿದೆ. ಮಣ್ಣಿನಿಂದ ಮಾಡಿದ ಮಡಿಕೆ, ಮಣ್ಣಿನಿಂದ ಮಾಡಿದ ಲೋಟಗಳು ಮತ್ತು ಪ್ಲಾಸ್ಟಿಕ್ ಮುಕ್ತ ಭಾರತದ ಸಂದೇಶ ಜನರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ
ನೀವೂ ಭಾಗವಹಿಸಬಹುದು ನೋಡಿ
ಹೀಗೆ ಆಳ್ವಾಸ್ ಸಾಂಸ್ಕೃತಿಕ ಜಾಂಬೂರಿಯ ಅಂಗಣ ದೇಸಿ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನೂ ಮಾಡುತ್ತಿದೆ. ಡಿಸೆಂಬರ್ 27ರವರೆಗೆ ಸಾಂಸ್ಕೃತಿಕ ಜಾಂಬೂರಿ ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಜಾಂಬೂರಿಯತ್ತಲೂ ಪಯಣ ಬೆಳೆಸಬಹುದಾಗಿದೆ.
ವರದಿ: ನಾಗರಾಜ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ