• Home
  • »
  • News
  • »
  • mangaluru
  • »
  • Tiger Dance: ನೀವೂ ಹುಲಿ ವೇಷ ಹಾಕಿ! ಇಲ್ಲಿದೆ ಚಾನ್ಸ್!

Tiger Dance: ನೀವೂ ಹುಲಿ ವೇಷ ಹಾಕಿ! ಇಲ್ಲಿದೆ ಚಾನ್ಸ್!

ಹುಲಿ ವೇಷದ ಅಬ್ಬರ

ಹುಲಿ ವೇಷದ ಅಬ್ಬರ

ಯಕ್ಷಗಾನ, ಕಂಬಳದ ನಂತರ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಪಿಲಿ ವೇಷ ತರಬೇತಿಯ ಪರಿಚಯ ಬಹುಮುಖ್ಯವಾಗಿದೆ. ನೀವೂ ಹುಲಿ ವೇಷ ಹಾಕುವುದನ್ನು ಇಲ್ಲಿ ಕಲಿಯಬಹುದಾಗಿದೆ.

  • News18 Kannada
  • Last Updated :
  • Mangalore, India
  • Share this:

    ಮಂಗಳೂರು: ಕನ್ನಡ ಚಿತ್ರರಂಗದಲ್ಲಿ ಕರಾವಳಿ ಅಲೆ ಆವರಿಸಿದೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ ಶೆಟ್ಟಿ ಕರಾವಳಿ ಸೊಗಡನ್ನು ಉಣಬಡಿಸುತ್ತಿದ್ದಾರೆ. ಇದರಿಂದ ಕರಾವಳಿ ಸಂಸ್ಕೃತಿ (Coastal Culture) ಬಗ್ಗೆ ಇಡೀ ಕರ್ನಾಟಕದಲ್ಲಿ ಆಸಕ್ತಿ ಹೆಚ್ಚುತ್ತಿದೆ. ಈ ಬೆನ್ನಲ್ಲೇ ಕರಾವಳಿಯ ಪ್ರಮುಖ ಆಚರಣೆ ಹುಲಿ ವೇಷ ಕಲಿಸುವ (Tiger Dance Class) ತರಗತಿಯೊಂದು ಆರಂಭವಾಗುತ್ತಿದೆ. ಸಾಂಪ್ರದಾಯಿಕ 'ಪಿಲಿ ವೇಷ' ಅಥವಾ 'ಹುಲಿ ವೇಷ' (ಹುಲಿ ಕುಣಿತ) (Pili Dance)  ಇನ್ನಷ್ಟು ಜನಪ್ರಿಯಗೊಳ್ಳುತ್ತಿರುವಾಗಲೇ ಕಳೆದ 19 ವರ್ಷಗಳಿಂದ 'ಪಿಲಿ ವೇಷ' ತಂಡವನ್ನು ನಿರ್ವಹಿಸುತ್ತಿರುವ ಕಲಾಶ್ರೀ ಬೆದ್ರದ ರಮೇಶ್ ಮಿಜಾರ್ ಅವರು ಶೀಘ್ರದಲ್ಲೇ ಹುಲಿ ವೇಷ ಕುಣಿತ ಕ್ಲಾಸ್​ಗಳನ್ನು (HuliVesha Dance Class) ಪ್ರಾರಂಭಿಸಲಿದ್ದಾರೆ. 3 ರಿಂದ 20 ವಯಸ್ಸಿನ ವಿದ್ಯಾರ್ಥಿಗಳಿಗೆ ಔಪಚಾರಿಕ ಪಿಲಿ ವೇಷ ತರಬೇತಿ ಕಾರ್ಯಕ್ರಮ ನಡೆಯಲಿದೆ.


    ಯಕ್ಷಗಾನ, ಕಂಬಳದ ನಂತರ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಪಿಲಿ ವೇಷ ತರಬೇತಿಯ ಪರಿಚಯ ಬಹುಮುಖ್ಯವಾಗಿದೆ. 3-20 ವರ್ಷದೊಳಗಿನ ಹುಡುಗರಿಗೆ ಮತ್ತು 3-15 ರ ನಡುವಿನ ಬಾಲಕಿಯರಿಗೆ ತರಗತಿಗಳು ನಡೆಯಲಿವೆ.


    ಪಿಲಿ ವೇಷ ಕಲಿಸುವ ಮೊದಲ ಕ್ಲಾಸ್
    ತರಬೇತಿ ಕಾರ್ಯಕ್ರಮವು 15 ವಿವಿಧ ರೀತಿಯ ಸಾಹಸಗಳನ್ನು (ಅಕ್ರೋಬ್ಯಾಟ್) ಕಲಿಸುವುದು ಸೇರಿದಂತೆ ಪಿಲಿ ವೇಷದ ಎಲ್ಲಾ ಅಂಶಗಳನ್ನು ಒಳಗೊಂಡಿರಲಿದೆ. ಅಂದಹಾಗೆ ಇದು ಪಿಲಿ ವೇಷ ಕಲಿಸುವ ಮೊದಲ ಕ್ಲಾಸ್ ಆಗಲಿದೆ.


    ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


    ಕ್ಲಾಸ್ ಯಾವಾಗ ನಡೆಯಲಿದೆ?
    ವಾರಾಂತ್ಯದಲ್ಲಿ ಎರಡು ಗಂಟೆಗಳ ಕಾಲ ತರಗತಿಗಳು ನಡೆಯಲಿದ್ದು, ವಿದ್ಯಾರ್ಥಿಗಳು ಹುಲಿ ವೇಷ ನೃತ್ಯದ ಇತಿಹಾಸ, ವಿಕಾಸ, ಸಂಗೀತ ಮತ್ತು ಚಿತ್ರಕಲೆ ಸೇರಿದಂತೆ ಅದರ ಹೆಜ್ಜೆಗಳು ಮತ್ತು ಸಾಹಸಗಳನ್ನು ಹೊರತುಪಡಿಸಿ ಪ್ರತಿಯೊಂದು ಅಂಶವನ್ನು ಕಲಿಯಬಹುದಾಗಿದೆ.


    ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


    ಕ್ಲಾಸ್ ಆರಂಭಿಸಲು ಏನು ಕಾರಣ?
    ಪ್ರತಿ ವರ್ಷವೂ ಹುಲಿ ನೃತ್ಯದ ಬೇಡಿಕೆ ಮತ್ತು ಜನಪ್ರಿಯತೆ ಹೆಚ್ಚುತ್ತಿದೆ. ದಸರಾ ಸಂದರ್ಭದಲ್ಲಿ ನಗರದಲ್ಲಿ ಮಾತ್ರವಲ್ಲ, ತಾಲೂಕು ಮಟ್ಟದಲ್ಲಿಯೂ ಹುಲಿ ನೃತ್ಯ ತಂಡಗಳಿಗೆ ಹಲವಾರು ಸ್ಪರ್ಧೆಗಳನ್ನು ನಡೆಯುತ್ತಿದೆ. ಅನೇಕ ಯುವಕರು ನೃತ್ಯ ರೂಪವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಯುವತಿಯರಲ್ಲಿ ಹುಲಿ ವೇಷದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅನೇಕ ಹುಡುಗಿಯರು ಅವಕಾಶ ಸಿಕ್ಕಾಗಲೆಲ್ಲ ನೃತ್ಯ ಪ್ರದರ್ಶಿಸಿದ್ದಾರೆ. ಈ ಬೆಳೆಯುತ್ತಿರುವ ಆಸಕ್ತಿಯು ತರಗತಿಗಳನ್ನು ಪ್ರಾರಂಭಿಸಲು ನನಗೆ ಸ್ಫೂರ್ತಿ ನೀಡಿದೆ ಎಂದು ಕಲಾಶ್ರೀ ಬೆದ್ರದ ರಮೇಶ್ ಮಿಜಾರ್ ಅವರು ತಿಳಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: