ಮಂಗಳೂರು: ಕಂಬಳ, ಈ ಹೆಸರು ಕೇಳಿದ್ರೇನೇ ಮೈಯೆಲ್ಲ ರೋಮಾಂಚನ! ಕರಾವಳಿ ಗ್ರಾಮೀಣ ಜನಜೀವನದ ಭಾಗವೇ ಆಗಿಹೋದ ಕಂಬಳ (Kambala) ಈಗ ಸಿಟಿ ಭಾಗಗಳಲ್ಲೂ ಫೇಮಸ್ ಆಗಿದೆ. ಅಷ್ಟೇ ಅಲ್ಲ, ಮೊದಮೊದಲು ಪುರುಷರೇ ಹೆಚ್ಚು ಪಾಲ್ಗೊಳ್ತಿದ್ದ ಈ ಕ್ರೀಡೆ (Kambala Race) ಈಗ ಮಹಿಳೆಯರ ಪಾಲಿನ ನೆಚ್ಚಿನ ಕ್ರೀಡೆಯೂ ಆಗಿದೆ.
ಕಂಬಳ ಕ್ರೀಡೆ ಕೇವಲ ಗ್ರಾಮೀಣ ಭಾಗಕ್ಕೆ ಸೀಮಿತಗೊಳ್ಳದೇ ನಗರವಾಸಿಗಳಿಗೂ ತಲುಪಬೇಕು ಎಂಬ ನಿಟ್ಟಿನಲ್ಲಿ ಮಂಗಳೂರು ನಗರದ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಕಳೆದ 6 ವರ್ಷಗಳಿಂದ ರಾಮ-ಲಕ್ಷ್ಮಣ ಕಂಬಳ ನಡೆಸಲಾಗ್ತಿದೆ.
ಲಕ್ಷಾಂತರ ಖರ್ಚಾಗುತ್ತೆ
ಕಂಬಳವನ್ನು ಆಯೋಜಿಸೋದು, ಕಂಬಳದ ಕೋಣಗಳನ್ನು ಸಾಕುವುದು ಅಥವಾ ಕೋಣಗಳನ್ನು ಓಡಿಸೋದು ಯಾವ್ದೂ ಸುಲಭವಲ್ಲ. ಒಂದು ಕಂಬಳಕ್ಕೆ ಕೋಣವನ್ನು ಸಿದ್ಧ ಮಾಡಬೇಕಾದ್ರೆ ಲಕ್ಷಾಂತರ ರೂಪಾಯಿ ಖರ್ಚು ಮಾಡ್ಬೇಕಾಗುತ್ತೆ. ಪ್ರತಿದಿನವೂ ಕೋಣಕ್ಕೆ ಬೈ ಹುಲ್ಲಿನೊಂದಿಗೆ ಹುರುಳಿಯನ್ನು ನೀಡಬೇಕಾಗುತ್ತೆ. ಮಧ್ಯಾಹ್ನ ಒಂದು ಗಂಟೆಗೆ ಹುರುಳಿಯನ್ನು ಹುಡಿ ಮಾಡಿದ ಭಕ್ಷ ಕೊಟ್ಟು, ಸಂಜೆಯ ಹೊತ್ತಿಗೆ ಬಿಸಿ ನೀರಿನ ಸ್ನಾನ ಮಾಡಿಸಿ ಕೋಣಗಳಿಗೆ ಎಣ್ಣೆಯ ಮಸಾಜ್ ಮಾಡ್ಬೇಕಾಗುತ್ತೆ. ತಮ್ಮ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿಯಲ್ಲಿ ಈ ಕೋಣಗಳನ್ನ ಸಾಕುತ್ತಾರೆ ಕರಾವಳಿ ಮಂದಿ.
ಮುತ್ತೈದೆಯರಿಂದ ಆರತಿ!
ಕಂಬಳಕ್ಕೆ ಹೊರಟ ದಿನ ಮನೆಯ ಮುತ್ತೈದೆಯರಿಂದ ಆರತಿಯನ್ನೂ ಬೆಳಗಲಾಗುತ್ತೆ. ಈ ಎಲ್ಲಾ ದೃಶ್ಯಗಳು ಕಂಬಳ ಕ್ರೀಡಾಂಗಣದಲ್ಲೇ ಅಲ್ಲಲ್ಲಿ ಕಾಣ ಸಿಗುತ್ತಿದ್ದು, ಕರಾವಳಿಯಲ್ಲಿ ಕಂಬಳಕ್ಕಿರುವ ಮಹತ್ವವನ್ನೂ ಸಾರಿ ಹೇಳುತ್ತೆ.
ಇದನ್ನೂ ಓದಿ: Elephant Training: ಆನೆಗಳಿಗೆ ಪಾಠ ಹೇಳೋ ಶಾಲೆಯಿದು! ಊಟ, ಪಾಠ, ತುಂಟಾಟ ಎಲ್ಲ ಇಲ್ಲೇ
ಪ್ರತಿ ಊರಲ್ಲೀ ಇರ್ತಿತ್ತು ಕಂಬಳ!
ಕಂಬಳಕ್ಕೂ, ಕರಾವಳಿ ಭಾಗದ ಜನರ ಜೀವನಕ್ಕೂ ಅವಿನಾಭಾವ ಸಂಬಂಧವಿದೆ ಎನ್ನುವ ವಿಚಾರ ಹೆಚ್ಚಿನ ಮಂದಿಗೆ ತಿಳಿದಿಲ್ಲ. ಕರಾವಳಿಯ ಪೂರ್ವಜರು ಭತ್ತದ ಬೇಸಾಯ ಮಾಡಿದ ಗದ್ದೆಯಲ್ಲಿ ನಾಗಾರಾಧನೆಯನ್ನು ಮಾಡಿ, ಗದ್ದೆಯಲ್ಲಿ ಪೂಕೆರೆಯನ್ನು ನಿರ್ಮಿಸಿ ಬಳಿಕ ಊರಿನ ಎಲ್ಲಾ ಕೋಣಗಳನ್ನು ಆ ಗದ್ದೆಯಲ್ಲಿ ಓಡಿಸಿದ್ರೆ ಕಂಬಳಕ್ಕೆ ಚಾಲನೆ ದೊರೆಯುತ್ತಿತ್ತು. ಪ್ರತಿ ಊರಿನಲ್ಲೂ ಈ ಕಂಬಳಗಳು ನಡೆಯುತ್ತಿದ್ದ ಕಾಲವೂ ಇತ್ತು. ಇದೀಗ ಕಂಬಳ ಕೇವಲ ತಾಲೂಕಿಗೆ ಒಂದು ಎನ್ನುವ ಹಂತಕ್ಕೆ ತಲುಪಿದೆ.
ಇದನ್ನೂ ಓದಿ: KT ಚಹಾ ಅಂದ್ರೇನು? ಅದ್ಭುತ ರುಚಿ ಹಿಂದಿನ ಗುಟ್ಟು ಹೀಗಿದೆ ನೋಡಿ
ಮಂಗಳೂರು ನಗರದ ಮಧ್ಯೆ ನಡೆದ ಈ ಕಂಬಳವನ್ನು ಎಲ್ಲಾ ವಯೋಮಾನದ ಜನರೂ ಬಂದು ವೀಕ್ಷಿಸಿದ್ರು. ಮಹಿಳೆಯರನ್ನೂ ಹೆಚ್ಚಾಗಿ ಆಕರ್ಷಿಸುತ್ತಿರೋ ಈ ಮಂಗಳೂರಿನ ಸಿಟಿ ಕಂಬಳ ಲೇಡಿಸ್ ಫೇವರೀಟ್ ಕೂಡಾ ಆಗಿ ಮಿಂಚುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ