ದಕ್ಷಿಣ ಕನ್ನಡ: ಆನೆ ಬಂತೊಂದಾನೆ..ಯಾವೂರ್ ಆನೆ? ಇಲ್ಲಿ ಎಲ್ಲಿ ನೋಡಿದ್ರೂ ಗಜರಾಜನ ಆಟ, ಪಾಠ, ಊಟ, ತುಂಟಾಟ! ಈಗಷ್ಟೆ ಅ ಆ ಕಲಿಯೋಕೆ ಶುರು ಮಾಡಿದ ಆನೆಯಿಂದ ಹಿಡಿದು ಪಿಹೆಚ್ಡಿ ಮಾಡ್ತಿರೋ ಆನೆಗಳೂ ಇಲ್ಲೇ ಶಾಲೆ (Elephant Training Centre) ಕಲಿಯುತ್ತಿವೆ! ಅರೇ! ಯಾವ ಜಾಗ ಇದು? ಅಂದ್ರಾ ಬನ್ನಿ ಆನೆಗಳ ಈ ಸಖತ್ ಶಾಲೆಗೆ (Elephant School) ಒಮ್ಮೆ ಹೋಗ್ಬರೋಣ.
ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದ ಪಕ್ಕದಲ್ಲೇ ಇದೆ ಈ ಆನೆಕೊಂಡ. ಹೆಸರೇ ಹೇಳುವಂತೆ ಇಲ್ಲಿ ಎಲ್ಲಿ ನೋಡಿದರೂ ಆನೆಗಳದ್ದೇ ಕಾರುಬಾರು. ಕೇರಳ ದೇವಸ್ವಂ ಬೋರ್ಡ್ ಆಡಳಿತಕ್ಕೊಳಪಟ್ಟ ಈ ಕೇಂದ್ರದಲ್ಲಿ ಆನೆಗಳಿಗೆ ಪಾಠ ಹೇಳಿಕೊಡಲಾಗುತ್ತೆ. ಒಂದೆರಡಲ್ಲ, ಒಟ್ಟು 45 ಆನೆಗಳು ಇಲ್ಲಿ ಕ್ಲಾಸ್ಗೆ ಕೂರುತ್ವೆ. ಚಿಕ್ಕ ಮಕ್ಕಳಿಗೆ ಪಾಠ ಹೇಳಿದಂತೆ ಆನೆಗಳಿಗೂ ಇಲ್ಲಿ ಪಾಠ ಹೇಳ್ಕೊಡಲಾಗುತ್ತೆ.
ಆನೆ ಸಾಕೋದು ಇಲ್ಲಿ ಕಾಮನ್!
ಕೇರಳದ ಪ್ರತಿಷ್ಠಿತ ಮನೆತನಗಳು ಆನೆಗಳನ್ನು ಸಾಕೋದು ಸಾಮಾನ್ಯ. ಈ ಭಾಗದ ಎಲ್ಲಾ ಪ್ರತಿಷ್ಠಿತ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಆನೆಗಳನ್ನು ಸಾಕಲಾಗುತ್ತೆ. ತಾವು ಸಾಕಿದ ಈ ಆನೆಗಳನ್ನು ತಮ್ಮ ಗ್ರಾಮದಲ್ಲಿ, ವಿವಿಧ ಧಾರ್ಮಿಕ ಕ್ಷೇತ್ರಗಳ ಉತ್ಸವಕ್ಕೆ ನೀಡುತ್ತಿರುವ ಸಂಪ್ರದಾಯವಿದೆ.
ಆನೆಗೊಂಡಗಳಲ್ಲಿ ಆನೆ ಸಾಕಣೆ
ಆದರೆ ಇತ್ತೀಚಿನ ದಿನಗಳಲ್ಲಿ ಆನೆ ಸಾಕಲು ಕೇರಳ ಅರಣ್ಯ ಇಲಾಖೆಯಿಂದ ಹಲವಾರು ನಿರ್ಬಂಧಗಳು ಜಾರಿಯಾದ ಕಾರಣ ಸಾಕಿದ ಆನೆಗಳನ್ನು ಮನೆಯಲ್ಲಿ ಇಡದೇ ಆನೆಗೊಂಡಗಳೆಂಬ ಇಂತಹ ಆನೆ ತರಬೇತಿ ಕೇಂದ್ರಗಳಿಗೆ ನೀಡಲಾಗುತ್ತೆ.
ಆನೆಕೇಂದ್ರಗಳಲ್ಲೇ ಲಾಲನೆ-ಪಾಲನೆ
ಒಮ್ಮೆ ಆನೆಗಳು ಈ ತರಬೇತಿ ಕೇಂದ್ರ ಸೇರಿದ್ರೆ ಸಾಕು, ಅವುಗಳ ಲಾಲನೆ, ಪಾಲನೆ ಎಲ್ಲ ಇಲ್ಲೇ ನಡೆಯುತ್ತೆ. ದೇವಸ್ಥಾನಗಳಲ್ಲಿ ಭಕ್ತರು ಬೀಡುವ ಆನೆಗಳನ್ನೂ ಈ ಶಿಬಿರಗಳಿಗೇ ಒಪ್ಪಿಸಲಾಗುತ್ತೆ. ಆದ್ರೆ ಆನೆಗಳ ಖರ್ಚು ವೆಚ್ಚಗಳ ಹೊಣೆ ಆನೆಗಳ ಒರಿಜಿನಲ್ ಮಾಲೀಕರದ್ದೇ ಆಗಿರುತ್ತೆ. ದೇವಸ್ಥಾನಗಳಲ್ಲಿ ನಡೆಯುವ ವಾರ್ಷಿಕ ಉತ್ಸವಗಳಿಗೆ ಆನೆಗಳ ಅವಶ್ಯಕತೆ ಇದ್ದಲ್ಲಿ ಇದೇ ಕೇಂದ್ರದಿಂದ ಆನೆಗಳನ್ನು ಕಳುಹಿಸಿಕೊಟ್ಟು, ಉತ್ಸವಗಳು ಮುಗಿದ ಬಳಿಕ ಈ ಆನೆಗಳು ಮತ್ತೆ ಶಿಬಿರ ಸೇರುತ್ತವೆ.
ಇದನ್ನೂ ಓದಿ: Kalkuda Kallurti Daiva: ಕಲ್ಕುಡ-ಕಲ್ಲುರ್ಟಿ ದೈವವೇ ತನ್ನ ರೋಚಕ ಕಥೆ ಹೇಳಿದೆ ನೋಡಿ
ಈ ಆನೆ ಕೇಂದ್ರಗಳು ಹತ್ತಾರು ಎಕರೆ ವಿಸ್ತೀರ್ಣ ಹೊಂದಿರುತ್ತವೆ. ಆನೆಗಳ ಆಹಾರಕ್ಕಾಗಿ ಹುಲ್ಲುಗಾವಲು ಮತ್ತು ಈಚಲು ಮರವನ್ನು ಬೆಳೆಸಲಾಗಿರುತ್ತೆ. ಆನೆಗಳಿಗೆ ಸ್ನಾನ ಮಾಡಬೇಕು ಅನಿಸಿದಾಗ ಅವುಗಳಿಗೆಂದೇ ಮೀಸಲಿಟ್ಟ ನೀರಿನ ಟ್ಯಾಂಕ್ನಲ್ಲಿ ಸ್ನಾನವನ್ನೂ ಮಾಡಿಸಲಾಗುತ್ತೆ.
ಇದನ್ನೂ ಓದಿ: Dakshina Kannada: ಮುಚ್ಚಿ ಹೋಗ್ತಿದ್ದ ಸರ್ಕಾರಿ ಕನ್ನಡ ಶಾಲೆಗೆ ಮರುಜೀವ, ಈಗ ವಿದ್ಯಾರ್ಥಿಗಳ ಸಂಖ್ಯೆ ಡಬಲ್!
ಒಟ್ಟಾರೆ ಆನೆಗೊಂಡ ಎಂಬ ಈ ಆನೆ ಶಾಲೆಗಳಿಗೆ ನೀವೂ ಒಮ್ಮೆ ಭೇಟಿಕೊಟ್ರೆ ಸಖತ್ ಖುಷಿಪಡೋದು ಗ್ಯಾರಂಟಿ. ಕೇರಳ ಪ್ರವಾಸಕ್ಕೇನಾದ್ರೂ ಹೋದ್ರೆ ಆನೆಗೊಂಡಕ್ಕೆ ಭೇಟಿ ಕೊಡೋದನ್ನ ಮರೆಯಬೇಡಿ ಆಯ್ತಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ