Dakshina Kannada: ಹೀಗೆ ತಯಾರಾಗುತ್ತೆ ನೋಡಿ ನೀವು ತಿನ್ನುವ ಗೋಡಂಬಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವಿಶೇಷ ಅಂದ್ರೆ, ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶ, ಭಾರತದ ಹಲವು ರಾಜ್ಯ ಮತ್ತು ನಮ್ಮದೇ ಹಲವು ಜಿಲ್ಲೆಗಳಿಂದ ಬರೋ ಗೇರುಬೀಜಗಳು ಗೋಡಂಬಿಯಾಗೋದು ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಫ್ಯಾಕ್ಟರಿಗಳಲ್ಲಿ.

  • News18 Kannada
  • 4-MIN READ
  • Last Updated :
  • Mangalore, India
  • Share this:

    ಮಂಗಳೂರು: ಗುರ್ ಎನ್ನುತ್ತಿರೋ ಯಂತ್ರಗಳು, ಗೇರು ಬೀಜಗಳ ಬೇರ್ಪಡಿಸುತ್ತಿರೋ ಕಾರ್ಮಿಕರು, ಹೀಗೆ ತಯಾರಾಗುತ್ತೆ ನೋಡಿ ನಾವ್ ನೀವು ತಿನ್ನೋ ಕ್ಯಾಶ್ಯೂ. ಹೌದು, ಕಡಲನಗರಿಯ (Mangaluru News) ಹಲವೆಡೆ ಇಂತಹ ಕಾರ್ಖಾನೆಗಳು ಕಣ್ಣಿಗೆ ಕಾಣುತ್ತವೆ. ಅಲ್ಲೆಲ್ಲ ಹೀಗೆ ನಿರಂತರವಾಗಿ ಗೋಡಂಬಿ ತಯಾರಾಗುತ್ತಿರುತ್ತವೆ.


    ಹೌದು, ಸಿಹಿತಿಂಡಿಗೋ, ಪಾಯಸಕ್ಕೋ ಅಥವಾ ಇನ್ಯಾವುದೋ ಸ್ಪೆಷಲ್ ಅಡುಗೆಗೆ ಗೋಡಂಬಿ ಇಲ್ಲದಿದ್ರೆ ಅದೊಂಥರಾ ಅಪೂರ್ಣ. ಆ ಮಟ್ಟಿಗೆ ನಾವೆಲ್ಲ ಗೋಡಂಬಿಯನ್ನ ಅವಲಂಬಿಸಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆ ಗೇರುಕೃಷಿಗೆ ತುಂಬಾ ಫೇಮಸ್.


    ತನ್ನ ಪಾಡಿಗೆ ಫಲ ನೀಡುವ ಕೃಷಿ
    ಗೇರುಬೀಜವನ್ನ ವಿಶೇಷ ಪೋಷಣೆ ಮಾಡದಿದ್ದರೂ ಟೈಂ ಆದಾಗ ಫಲ ನೀಡುವುದು ಕಾಮನ್. ಅಂತೆಯೇ ಜಿಲ್ಲೆಯ ಹಲವೆಡೆ ಇಂತಹ ದೊಡ್ಡದಾದ ಗೇರು ಬೀಜ ಫ್ಯಾಕ್ಟರಿಗಳು ಇಂದಿಗೂ ಇವೆ. ಅವುಗಳು ಅದೆಷ್ಟೋ ಪುರುಷರು, ಮಹಿಳೆಯರಿಗೆ ಅನ್ನ ನೀಡಿದೆ.


    ಇಲ್ಲೇ ತಯಾರಾಗುತ್ತೆ ರುಚಿ ಗೋಡಂಬಿ
    ವಿಶೇಷ ಅಂದ್ರೆ, ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶ, ಭಾರತದ ಹಲವು ರಾಜ್ಯ ಮತ್ತು ನಮ್ಮದೇ ಹಲವು ಜಿಲ್ಲೆಗಳಿಂದ ಬರೋ ಗೇರುಬೀಜಗಳು ಗೋಡಂಬಿಯಾಗೋದು ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಫ್ಯಾಕ್ಟರಿಗಳಲ್ಲಿ. ಇಲ್ಲೆಲ್ಲ ಒಣಗಿದ ಗೇರುಬೀಜಗಳನ್ನ ಈ ಫ್ಯಾಕ್ಟರಿಯ ದೊಡ್ಡ ದೊಡ್ಡ ಯಂತ್ರಗಳ ಮೂಲಕ ಗೋಡಂಬಿಯಾಗಿಸಲಾಗುತ್ತೆ.


    ನೂರಾರು ಕೆಜಿ ಗೋಡಂಬಿ
    ಈ ಹಿಂದೆ ಕೈಯಿಂದಲೇ ತಯಾರಾಗುತ್ತಿದ್ದ ಗೋಡಂಬಿ ಇದೀಗ ಯಂತ್ರಗಳ ಸಹಾಯದಿಂದ ತಯಾರಾಗ್ತಿವೆ. ದೊಡ್ಡ ಯಂತ್ರಕ್ಕೆ ನೂರಾರು ಕೆಜಿಯಷ್ಟು ಗೇರು ಬೀಜವನ್ನ ಸುರಿಯಲಾಗುತ್ತೆ. ಹೀಗೆ ಸುರಿದ ಗೇರುಬೀಜಗಳನ್ನ ಯಂತ್ರವೇ ತೊಳೆದು ಅದರ ಕಸಕಡ್ಡಿ ಬೇರ್ಪಡಿಸಿ ಅದನ್ನ ಬಾಯ್ಲರ್​ಗೆ ಹಾಕುತ್ತೆ.


    ತಯಾರಿ ಪ್ರಕ್ರಿಯೆ ಹೀಗಿರುತ್ತೆ
    ಹೀಗೆ ಬಾಯ್ಲರ್​ಗೆ ಬಂದ ಬೀಜಗಳನ್ನ ಸುಮಾರು ಎಂಟು ಗಂಟೆಗಳ ಕಾಲ ಬೇಯಿಸಬೇಕು. ಬೇಯಿಸಿದ ನಂತರ ಹಬೆಯಲ್ಲಿ ಒಣಗಿಸಿ ಅದನ್ನ ಗಾತ್ರದ ಪ್ರಕಾರವಾಗಿ ಬೇರ್ಪಡಿಸಲಾಗುತ್ತದೆ. ಹೀಗೆ ಬೇರ್ಪಟ್ಟ ಬೀಜಗಳ ಆಟೋಮೇಷನ್ ಸಹಾಯದಿಂದ ಕತ್ತರಿಸಲಾಗುತ್ತೆ. ಕತ್ತರಿಸದೆ ಉಳಿದ ಬೀಜಗಳನ್ನ ಕೆಲಸಗಾರರು ಕೈಯಿಂದ ಕತ್ತರಿಸುತ್ತಾರೆ. ಹೀಗೆ ಕತ್ತರಿಸಿದ ಬೀಜಗಳನ್ನ ಒಣಗಿಸುವ ಯಂತ್ರಗಳು, ವೈಬರೇಟರ್ ಸಹಾಯದಿಂದ ಬೀಜದ ಮೇಲಿನ ಪದರವನ್ನ ಬೇರ್ಪಡಿಸುತ್ತವೆ. ಹೀಗೆ ಬೇರ್ಪಟ್ಟವು ತಮ್ಮ ಗಾತ್ರದ ಅನುಗುಣವಾಗಿ ಕನ್ವೇಯರ್ ಬೆಲ್ಟ್ ಮೂಲಕ ಸಾಗಿ ಪ್ಯಾಕೇಜಿಂಗ್ ಆಗುತ್ತವೆ.


    ಇದನ್ನೂ ಓದಿ: Dakshina Kannada: ಜ್ಯೂಸ್​ ತಗೊಂಡ್ರೆ ಕಬ್ಬಿನ ಹಾಲು ಫ್ರೀ! ಇಲ್ಲಿದೆ ಸಖತ್ ಸ್ಟಾರ್ಟಪ್​ ಐಡಿಯಾ



    ಈ ಹಿಂದೆ ಇಷ್ಟಲ್ಲ ಕೆಲಸಗಳನ್ನ ಕಾರ್ಮಿಕರೇ ಮಾಡುತ್ತಿದ್ದರು. ಇದೀಗ ಯಂತ್ರಗಳು ಬಂದು ಕಾರ್ಮಿಕರಿಗೂ ಕೊಂಚ ರಿಲೀಫ್ ಕೊಟ್ಟಿದೆ. ಕಷ್ಟದಲ್ಲಿ ಅತೀ ಕಷ್ಟ ಎನ್ನಲಾದ ಗೇರುಬೀಜದ ಸಿಪ್ಪೆಯ ಬಿಡಿಸುವುದು, ಸರಿಯಾಗಿ ಒಡೆಯುವುದು ಇವೆಲ್ಲವೂ ಕೂಡ ಯಂತ್ರಗಳೆ ಮಾಡುವುದು ಅಚ್ಚರಿಯ ವಿಷಯ. ಹೀಗೆ ದಕ್ಷಿಣ ಕನ್ನಡದ ಪ್ಯಾಕ್ಟರಿಗಳಲ್ಲಿ ತಯಾರಾದ ಗೋಡಂಬಿ ದೇಶ ವಿದೇಶಗಳಿಗೆ ರಫ್ತಾಗುತ್ತವೆ ಅನ್ನೋದು ಇನ್ನೊಂದು ವಿಶೇಷ.


    ಇದನ್ನೂ ಓದಿ: Dakshina Kannada: ಶೋಭಾವನದ ಶೋಭೆ ಹೆಚ್ಚಿಸಿದ ಈ ಗಿಡ ಮರಗಳನ್ನು ನೀವ್ ನೋಡ್ಲೇಬೇಕು!


    ಏನೇ ಇರಲಿ, ದಕ್ಷಿಣ ಕನ್ನಡ ಜಿಲ್ಲೆಯ ಗೋಡಂಬಿ ಫ್ಯಾಕ್ಟರಿಗಳು ಇಂದಿಗೂ ಉತ್ತಮ ಸ್ಥಿತಿಯಲ್ಲಿದ್ದು, ಅದೆಷ್ಟೋ ಬಡವರ ಪಾಲಿಗೆ ಅನ್ನದಾತರೂ ಆಗಿವೆ.


    ವರದಿ: ನಾಗರಾಜ್, ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: