ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ ಇಲ್ಲಿ ಪುಟ್ಟಪುಟ್ಟ ಅಂಗನವಾಡಿ ಮಕ್ಕಳಿಗೆ ಪರಿಸರದ ಪಾಠ ಹೇಳಿಕೊಡಲಾಗುತ್ತೆ. ಗಿಡವನ್ನ ನೆಟ್ಟ ಪುಟ್ಟ ಕಂದಮ್ಮಗಳಿಗೆ ಬಹುಮಾನ ನೀಡಲಾಗುತ್ತೆ. ಅಷ್ಟೇ ಯಾಕೆ, ಮಕ್ಕಳ ಪೋಷಕರಿಗೂ ಸಸಿಗಳನ್ನು ನೀಡಿ ಜಾಗೃತಿ ಮೂಡಿಸಲಾಗುತ್ತೆ. ಇಂತಹ ವಿಶಿಷ್ಟ ಕಾರ್ಯಕ್ರಮದ ಮೂಲಕ ಇಲ್ಲೊಂದು ಗೆಳೆಯರ ಬಳಗ ಗಮನ ಸೆಳೆಯುತ್ತಿದೆ. ದಕ್ಷಿಣ ಕನ್ನಡದ (Dakshina Kannada News) ಬೆಳ್ತಂಗಡಿಯ (Belthangady News) ವೇಣೂರಿನ ಹೊಸಂಗಡಿಯಲ್ಲಿ ಹೀಗೊಂದು ಪ್ರಯತ್ನಕ್ಕೆ ಹೊಸಂಗಡಿ ಫ್ರೆಂಡ್ಸ್ ಕ್ಲಬ್ (Hosangadi Friends Club) ಮುಂದಾಗಿದೆ.
ಅದಕ್ಕಾಗಿ ಅವರು ಆಯ್ದುಕೊಂಡಿದ್ದು ಪುಟ್ಟ ಪುಟ್ಟ ಮಕ್ಕಳು ಹಾಗೂ ಮಕ್ಕಳ ಪೋಷಕರು ಆಗಮಿಸೋ ಅಂಗನವಾಡಿಗಳನ್ನು. ಹೀಗೆ ಹೊಸಂಗಡಿ ಗ್ರಾಮದಲ್ಲಿರುವ ಆರು ಅಂಗನವಾಡಿಗಳ ಆವರಣದಲ್ಲಿ ಗಿಡಗಳನ್ನ ಇದೇ ಫ್ರೆಂಡ್ಸ್ ಕ್ಲಬ್ ಮಾಡಿದೆ. ಜೊತೆಗೆ ಅದಕ್ಕೆ ಬೇಕಾದ ನೀರು, ಗೊಬ್ಬರದ ವ್ಯವಸ್ಥೆಯನ್ನೂ ಕಲ್ಪಿಸುತ್ತಿದೆ.
ಇದನ್ನೂ ಓದಿ: Hanuman Temple: ಎಳನೀರು ಪ್ರಿಯ ಈ ಹನುಮ! ಸೀಯಾಳ ಅಭಿಷೇಕ ಮಾಡಿಸಿದ್ರೆ ಇಷ್ಟಾರ್ಥ ಪ್ರಾಪ್ತಿ
ಮಕ್ಕಳಂತೆ ಗಿಡಗಳನ್ನೂ ಜೋಪಾನ ಮಾಡಿ
ಹೀಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಳೆದ ಗಿಡಗಳು ಕೆಲವು ದೊಡ್ಡದಾಗಿ ಫಲ ನೀಡುತ್ತಿದೆ. ಇನ್ನು ಪ್ಲಾಸ್ಟಿಕ್ ಬಳಸದಂತೆ ಜಾಗೃತಿ, ಸ್ವಚ್ಛತೆ ಬಗ್ಗೆಯೂ ಮಕ್ಕಳಿಗೆ ತಿಳಿಹೇಳಲಾಗುತ್ತದೆ. ಮಕ್ಕಳ ಪೋಷಕರಿಗೆ ಗಿಡಗಳನ್ನು ನೀಡಿ ನಿಮ್ಮ ಮಕ್ಕಳನ್ನು ಹೇಗೆ ಜೋಪಾನವಾಗಿ ನೋಡಿಕೊಳ್ಳುವಿರೋ ಹಾಗೆಯೇ ಈ ಗಿಡಗಳನ್ನ ಬೆಳೆಸಿ ಅಂತಾ ಮನವಿ ಮಾಡ್ಕೋತಾರೆ.
ಇದನ್ನೂ ಓದಿ: Success Story: ದಕ್ಷಿಣ ಕನ್ನಡದಲ್ಲಿ ಜೇನು ಕ್ರಾಂತಿ! ಯುವಕನಿಂದ ಇಡೀ ಊರಿಗೇ ಸಿಹಿ
ಪೋಷಕರಿಂದಲೂ ಉತ್ತಮ ಸ್ಪಂದನೆ
ಹೀಗೆ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಎಳೆಯ ಮಕ್ಕಳನ್ನೇ ಆಯ್ದುಕೊಂಡು ಅವರು ಆಗಮಿಸೋ ಅಂಗನವಾಡಿಗಳ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ಪೋಷಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ ಪುಟ್ಟ ಮಕ್ಕಳಲಿ ಮೂಡಿಸೋ ಈ ಪರಿಸರ ಜಾಗೃತಿ ದೂರದೃಷ್ಟಿಯ ಕಾರ್ಯಕ್ರಮ ಅಂದರೆ ತಪ್ಪಾಗದು.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ