ದಕ್ಷಿಣ ಕನ್ನಡ: ಝಗಮಗಿಸುವ ಮಸೀದಿ, ಸುಂದರ ಅಲಂಕಾರದ ನಡುವೆ ಮಸೀದಿ ವೀಕ್ಷಿಸುತ್ತಿರುವ ಸಾರ್ವಜನಿಕರು. ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಬಂಟ್ವಾಳ (Bantwal News) ಇಡೀ ಜಿಲ್ಲೆಯಲ್ಲಿಯೇ ಕೋಮುಸೂಕ್ಷ್ಮ ಪ್ರದೇಶ ಎಂಬ ಕುಖ್ಯಾತಿ ಪಡೆದಿದೆ. ಆದರೆ ಇದೀಗ ಅದೇ ಬಂಟ್ವಾಳದ ಮಸೀದಿ ಈಗ ಸಾಮರಸ್ಯದ (Communal Harmony) ಗೂಡಾಗಿದೆ.
ಬಂಟ್ವಾಳ ತಾಲೂಕಿನ ಮೂಲರಪಟ್ಣದ ಮೊಹಿಯದ್ದೀನ್ ಜುಮಾ ಮಸ್ಜಿದ್ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಕೇಂದ್ರವಾಗಿದೆ.
ಊರವರಿಂದ ಹಲವು ಕೊಡುಗೆ
ಊರವರ ಅಳಿಲ ಸೇವೆಯಿಂದ ಸುಂದರ ಮಸೀದಿ ನಿರ್ಮಾಣವಾದರೆ, ಮಸೀದಿ ನಿರ್ಮಾಣಕ್ಕೆ ಮರ ಮಟ್ಟುಗಳನ್ನು ಹಿಂದೂಗಳು ನೀಡಿದರೆ, ಹಿಂದೂ ಬಡಗಿ ರತ್ನಾಕರ್ ಕೆತ್ತನೆಯಲ್ಲಿ ಮಸೀದಿ ಆಕರ್ಷಕವಾಗಿ ಮೂಡಿ ಬಂದಿದೆ.
800 ವರ್ಷಗಳ ಇತಿಹಾಸವಿದೆ!
ಮೂಲರಪಟ್ಣದ ಮೊಹಿಯದ್ದೀನ್ ಜುಮಾ ಮಸೀದಿಗೆ 800 ವರ್ಷಗಳ ಇತಿಹಾಸವಿದೆ.ಇದೀಗ ಈ ಮಸೀದಿ ಸೌಹಾರ್ದತೆಯ ಕೇಂದ್ರಬಿಂದುವಾಗಿದೆ. ಮಸೀದಿಯನ್ನು ಇತ್ತೀಚೆಗೆ ನವೀಕರಿಸಲಾಗಿದ್ದು, ಮಸೀದಿ ನವೀಕರಣಕ್ಕೆ ಹಿಂದೂಗಳು ಮರ ನೀಡಿದರೆ, ಬಡಗಿ ರತ್ನಾಕರ್ ಕೈಯಿಂದ ಮಸೀದಿ ಒಳಗೆ ಆಕರ್ಷಕ ಕೆತ್ತನೆ ಮೂಡಿ ಬಂದಿದೆ.
ಬಡಿಗಿ ರತ್ನಾಕರ್ ಅವರ ಕೆಲಸಕ್ಕೆ ಮೆಚ್ಚುಗೆ
ಮರದ ಕೆತ್ತನೆಯಲ್ಲಿ ನುರಿತರಾಗಿರುವ ರತ್ನಾಕರ್, ಮಸೀದಿಯ ಕೆತ್ತನೆ ಕೆಲಸ ಮಾಡಿದ್ದು ಇದೇ ಮೊದಲ ಬಾರಿ. ಅಳುಕಿನಿಂದಲೇ ಕೆಲಸ ಆರಂಭಿಸಿದ ರತ್ನಾಕರ್ ಕೆತ್ತನೆ ಕೆಲಸಕ್ಕೆ ಈಗ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಫೋನ್ ಮತ್ತು ವಾಚ್ ಗಿಫ್ಟ್
ಬಡಗಿ ರತ್ನಾಕರ್ ಅವರ ಆಕರ್ಷಕ ಕೆತ್ತನೆ ಕೆಲಸಕ್ಕೆ ಮಸೀದಿ ಆಡಳಿತ ಮಂಡಳಿ ರತ್ನಾಕರ್ ಅವರಿಗೆ ಐಫೋನ್ ಮತ್ತು ವಾಚ್ ಗಿಫ್ಟ್ ನೀಡಿ ಕೃತಜ್ಞತೆ ಸಲ್ಲಿಸಿದೆ.
ಇದನ್ನೂ ಓದಿ: Vande Bharat Express Train: ಕರ್ನಾಟಕದ ಈ ನಗರಕ್ಕೆ 2ನೇ ವಂದೇ ಭಾರತ್ ರೈಲು ಬರೋದು ಪಕ್ಕಾ
ಮಸೀದಿ ಉದ್ಘಾಟನೆಯ ದಿನ ನೋಡ ಬನ್ನಿ ನಮ್ಮೂರ ಮಸೀದಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಮಸೀದಿಯ ಸುಂದರ ಕೆತ್ತನೆ ನೋಡಲು ಹಿಂದೂ, ಮುಸ್ಲಿ, ಕ್ರ್ರೈಸ್ತರೆನ್ನದೇ ಎಲ್ಲರೂ ಆಗಮಿಸಿದ್ದರು.
ನೂತನ ಮಸೀದಿಯ ಸೌಂದರ್ಯ ನೋಡಿ ಕಣ್ತುಂಬಿಕೊಂಡರಲ್ಲದೇ ಈ ಸೌಂದರ್ಯವನ್ನು ತಮ್ಮ ಮೊಬೈಲ್ಗಳಲ್ಲೂ ಸೆರೆಹಿಡಿದಿದ್ದಾರೆ.
ಒಟ್ಟಿನಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಸೌಹಾರ್ದತೆ ಕದಡುತ್ತಿರುವ ಜಿಲ್ಲೆಯಲ್ಲಿ ಇಂತಹ ಸಾಮರಸ್ಯದ ನಿದರ್ಶನಗಳು ಜಿಲ್ಲೆಯಲ್ಲಿ ಸಾಮರಸ್ಯ ಇನ್ನೂ ಜೀವಂತವಾಗಿದೆ ಎಂಬುವುದನ್ನು ನಿರೂಪಿಸಿದೆ.
ಇದನ್ನೂ ಓದಿ: Kateel Elephant: ಕಟೀಲು ಭಕ್ತರಿಗೆ ಬೋನಸ್ ಮಹಾಲಕ್ಷ್ಮಿಯ ಲೀಲೆಗಳು!
ಸಾಮರಸ್ಯದ ಸಂಕೇತವಾಗಿರುವ ಊರವರ ಸಹಬಾಳ್ವೆ ಯ ಜೀವನ ಇಡೀ ಜಿಲ್ಲೆ ಗೆ ಪಸರಿಸಲಿ ಎಂಬುವುದೇ ನಮ್ಮ ಆಶಯ.
ವರದಿ: ಕ್ಯಾಮೆರಾ ಮ್ಯಾನ್ ನಿಖಿಲ್ ಸುವರ್ಣ ಜೊತೆ ಕಿಶನ್ ಶೆಟ್ಟಿ ನ್ಯೂಸ್18 ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ