• Home
  • »
  • News
  • »
  • mangaluru
  • »
  • Surathkal Toll Gate: ಸುರತ್ಕಲ್ ಟೋಲ್ ರದ್ದಾದ್ರೂ ನಿಲ್ಲದ ಸುಲಿಗೆ, ಹೆಜಮಾಡಿಯಲ್ಲಿ ಹೆಚ್ಚು ಹಣ ವಸೂಲಿ

Surathkal Toll Gate: ಸುರತ್ಕಲ್ ಟೋಲ್ ರದ್ದಾದ್ರೂ ನಿಲ್ಲದ ಸುಲಿಗೆ, ಹೆಜಮಾಡಿಯಲ್ಲಿ ಹೆಚ್ಚು ಹಣ ವಸೂಲಿ

ಸುರತ್ಕಲ್ ಟೋಲ್

ಸುರತ್ಕಲ್ ಟೋಲ್

ಹೆಜಮಾಡಿ ಟೋಲ್​ನಲ್ಲಿ ಲಘು ವಾಹನಗಳಿಗೆ 40 ರೂಪಾಯಿ ದರ ನಿಗದಿಪಡಿಸಲಾಗಿತ್ತು. ಆದರೆ ಸುರತ್ಕಲ್​ ಟೋಲ್ ರದ್ದುಗೊಳಿಸಿದ ನಂತರ ಹೆಜಮಾಡಿ ಟೋಲ್​ನಲ್ಲಿ ದರ ಹೆಚ್ಚಿಲಾಗಿದೆ.

  • News18 Kannada
  • Last Updated :
  • Mangalore, India
  • Share this:

ಮಂಗಳೂರು: ಸುರತ್ಕಲ್ ಟೋಲ್ ರದ್ದಾದರೂ (Surathkal Toll Gate) ಮತ್ತೆ ಪ್ರಯಾಣಿಕರಿಗೆ ಟೋಲ್ (Surathkal Toll) ಬರೆಯ ಹೊರೆ ಬೀಳುತ್ತಿದೆ. ಸುರತ್ಕಲ್ ಟೋಲ್ ದರ ಸೇರಿಸಿ ಹೆಜಮಾಡಿ ಟೋಲ್​ನಲ್ಲಿ (Hejamadi Toll) ವಸೂಲಿ ಮಾಡಲಾಗುತ್ತಿದೆ. ಇದರಿಂದ ಕರಾವಳಿಯಲ್ಲಿ ರಸ್ತೆ ಸಂಚಾರ ದುಬಾರಿಯಾಗಿ ಪರಿಣಿಮಿಸುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಿಸೆಂಬರ್ 1 ರಿಂದ ನೂತನ ದರ ನಿಗದಿ ಮಾಡಿದೆ. ಸುರತ್ಕಲ್​ ಟೋಲ್​ನಲ್ಲಿ ಕಾರು, ವ್ಯಾನ್ ಸಹಿತ ಲಘು ವಾಹನಗಳಿಗೆ 60 ರೂಪಾಯಿ ದರವಿತ್ತು. ಹೆಜಮಾಡಿ ಟೋಲ್​ನಲ್ಲಿ ಲಘು ವಾಹನಗಳಿಗೆ 40 ರೂಪಾಯಿ ದರ ನಿಗದಿಪಡಿಸಲಾಗಿತ್ತು. ಆದರೆ ಸುರತ್ಕಲ್​ ಟೋಲ್ ರದ್ದುಗೊಳಿಸಿದ ನಂತರ ಹೆಜಮಾಡಿ ಟೋಲ್​ನಲ್ಲಿ ದರ ಹೆಚ್ಚಿಲಾಗಿದೆ.


ಟೋಲ್ ದರವನ್ನು ಪರಿಷ್ಕರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಿಸೆಂಬರ್ 1 ರಿಂದ ಹೆಜಮಾಡಿ ಟೋಲ್ ನಲ್ಲಿ ಸಿಂಗಲ್ ಟ್ರಿಪ್​ಗೆ ಲಘು ವಾಹನಗಳಿಗೆ 100 ರೂಪಾಯಿ ದರ ನಿಗದಿಪಡಿಸಲಾಗಿದೆ. ರಿಟರ್ನ್ ಟ್ರಿಪ್ ದರ 90 ಮತ್ತು 65 ಸೇರಿ ಒಟ್ಟು 155 ರೂಪಾಯಿ ದರ ಲಘು ವಾಹನಗಳಿಗೆ ವಸೂಲಿ ಮಾಡಲು ನಿರ್ಧರಿಸಲಾಗಿದೆ.


ಲಘು ವಾಣಿಜ್ಯ ವಾಹನಕ್ಕೆ ಹೆಜಮಾಡಿ ಟೋಲ್ ನಲ್ಲಿ 170 ರೂಪಾಯಿ, ಬಸ್​ಗಳಿಗೆ 355 ರೂಪಾಯಿ ನಿಗದಿ ಮಾಡಲಾಗಿದೆ.


ಬ್ರಹತ್ ಮಲ್ಟಿಆಕ್ಸಲ್ ವಾಹನಗಳಿಗೆ 550 ರೂಪಾಯಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಧಾಇಕಾರ ನಿಗದಿಪಡಿಸಿದೆ.


ಅತೀ ಗಾತ್ರದ ವಾಹನಗಳಿಗೆ 675 ರೂಪಾಯಿ ಟೋಲ್ ರೂಪಾಯಿಯನ್ನು ಹೆಜಮಾಡಿ ಟೋಲ್​ನಲ್ಲಿ ಫಿಕ್ಸ್ ಮಾಡಲಾಗಿದೆ.


ನವೆಂಬರ್ 14ರಂದು ಸುರತ್ಕಲ್ ಟೋಲ್ ಗೇಟ್  ರದ್ದು ಘೋಷಣೆ
ನವೆಂಬರ್ 14ರಂದು ಸುರತ್ಕಲ್ ಟೋಲ್ ಗೇಟ್  ರದ್ದುಗೊಳಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸುವ ಕುರಿತು ಮಾಹಿತಿ ನೀಡಿದ್ದರು. ಕಳೆದ ಕೆಲವು ದಿನಗಳಿಂದ ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸುವ ಕುರಿತು ಹಲವು ಸಂಘಟನೆಗಳು ಹೋರಾಟ ನಡೆಸಿದ್ದರು. ಆದರೆ ಇದೀಗ ಸುರತ್ಕಲ್ ಟೋಲ್ ಗೇಟ್ ರದ್ದಿನ ನಂತರ ಹೆಜಮಾಡಿ ಟೋಲ್​ನಲ್ಲಿ ದರ ಹೆಚ್ಚಳ ಮಾಡಲಾಗಿದೆ.


ಇದನ್ನೂ ಓದಿ: Kambala Calendar: ಕಂಬಳ ಸೀಸನ್ ಶುರು! ಇಲ್ಲಿದೆ ನೋಡಿ ಟೈಮ್​ ಟೇಬಲ್


60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 4 ಟೋಲ್ ಗೇಟ್​ಗಳು ಇದ್ದು, ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಸುರತ್ಕಲ್ ಟೋಲ್ ಗೇಟ್ ನಡೆಯುತ್ತಿದೆ ಎಂದು ಹೋರಾಟ ಮಾಡಲಾಗಿತ್ತು. ಟೋಲ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಟೋಲ್ ಗೇಟ್ ತೆರವು ಮಾಡಬೇಕೆಂದು ಪ್ರತಿಭಟನೆ ನಡೆಸಿತ್ತು.


ತಾಂತ್ರಿಕ ಅಂಶಗಳ ಕಾರಣದಿಂದ ಟೋಲ್ ರದ್ದು ತಡವಾಗಿತ್ತು
ಪ್ರತಿಭಟನಾಕಾರರ ಒತ್ತಡಕ್ಕೆ ಟೋಲ್ ಸಂಗ್ರಹವನ್ನು ಸರ್ಕಾರ ಹಿಂತೆಗೆದುಕೊಂಡಿತ್ತು. ತಾಂತ್ರಿಕ ಅಂಶಗಳ ಕಾರಣ ಟೋಲ್ ರದ್ದು ತಡವಾಗಿತ್ತು. ಇದೀಗ ಟೋಲ್ ತೆರವಿನ ತಾಂತ್ರಿಕ ಅಂಶ ಪೂರ್ಣವಾಗಿರುವ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.


ಟೋಲ್ ವಿರೋಧಿ ಹೋರಾಟ ಸಮಿತಿಯಿಂದ ಅಹೋರಾತ್ರಿ ಹೋರಾಟ
ಅಕ್ಟೋಬರ್ 28ರಿಂದ ಟೋಲ್​ಗೇಟ್ ವಿರೋಧ ಸಮಿತಿ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿತ್ತು. ಟೋಲ್ ವಿರೋಧಿ ಹೋರಾಟ ಸಮಿತಿಯ ಸತತ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು ಟೋಲ್ ಗೇಟ್​ನ್ನು ರದ್ದುಗೊಳಿಸಿತ್ತು.


ಇದನ್ನೂ ಓದಿ: ಮಹತ್ವದ ಮಾಹಿತಿ ಪ್ರಕಟಿಸಿದ KSRTC, ಹೊಸ ಟಿಕೆಟ್ ದರ ವಿವರ ಹೀಗಿದೆ


ಈ ಕುರಿತು ಮಾಹಿತಿ ನೀಡಿರುವ ಸಂಸದ ನಳಿನ್ ಕುಮಾರ್ ಕಟೀಲ್, ಈ ಮುನ್ನವೇ ಸುರತ್ಕಲ್ ಟೋಲ್ ಗೇಟ್ ರದ್ದುಗೊಳ್ಳುವುದು ತಾಂತ್ರಿಕ ಅಂಶಗಳಿಂದ ನಿಧಾನವಾಗಿತ್ತು, ಆದರೆ ಇದೀಗ ಟೋಲ್ ಗೇಟ್ ರದ್ದುಗೊಳಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದರು. ಆದರೆ ಹೆಜಮಾಡಿ ಟೋಲ್​ನಲ್ಲಿ ಸರತ್ಕಲ್ ಟೋಲ್ ದರವನ್ನೂ ಸೇರಿಸಿ ಸುಲಿಗೆ ಮಾಡಲಾಗುತ್ತಿದ್ದು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗಳು ನಡೆಯುತ್ತಿವೆ.

Published by:ಗುರುಗಣೇಶ ಡಬ್ಗುಳಿ
First published: