Dakshina Kannada: ರೆಡ್ ಅಲರ್ಟ್! ಮಳೆಗೆ ಸಂಬಂಧಿಸಿದಂತೆ ಏನೇ ಸಮಸ್ಯೆ ಆದ್ರೂ ಈ ಸಹಾಯವಾಣಿ ಸಂಖ್ಯೆ ಸಂಪರ್ಕಿಸಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರತೀ ತಾಲೂಕು ಕೇಂದ್ರಗಳಲ್ಲಿ ಕಾಳಜಿ ಕೇಂದ್ರ ಹಾಗೂ ಹೆಲ್ಪ್ ಡೆಸ್ಕ್ ಗಳನ್ನು ತೆರೆಯಲಾಗಿದೆ.

ಧಾರಾಕಾರ ಮಳೆ

ಧಾರಾಕಾರ ಮಳೆ

  • Share this:
    ಮಂಗಳೂರು: ಕರಾವಳಿಯಾದ್ಯಂತ ಸತತ 4 ದಿನವೂ ಎಡಬಿಡದೆ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಉಳ್ಳಾಲ ಭಾಗದಲ್ಲಿ ಕಡಲ್ಕೊರೆತ (Sea Erosion) ತೀವ್ರಗೊಂಡಿದ್ದು, ಹಲವು ಮನೆಗಳಿಗೆ ಹಾನಿಯಾಗಿವೆ. ಇನ್ನೊಂದೆಡೆ ಜಿಲ್ಲೆಯ ಕುಮಾರಧಾರ, ನೇತ್ರಾವತಿ, ಫಲ್ಗುಣಿ, ಶಾಂಭವಿ ನದಿಗಳು ಉಕ್ಕಿ ಹರಿಯುತ್ತಿದ್ದು (Overflowing Rivers) ಅಪಾಯದ ಮಟ್ಟ ಮೀರುವ ಆತಂಕದಲ್ಲಿದೆ. ಈ ಮಧ್ಯೆ ಜಿಲ್ಲಾಡಳಿತ ಗುರುವಾರ (ಜುಲೈ 7) ರೆಡ್ ಅಲರ್ಟ್ (Red Alert) ಘೋಷಿಸಿದ್ದು, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ನದಿ, ಸಮುದ್ರ ತೀರಗಳಿಗೆ ತೆರಳದಂತೆ ಎಚ್ಚರಿಕೆ ರವಾನಿಸಿದೆ. ಈ ಮಧ್ಯೆ ಬಂಟ್ವಾಳ ತಾಲೂಕಿನಲ್ಲಿ ಗುಡ್ಡ ಕುಸಿತವಾಗಿ ಮೂವರು ಅಸುನೀಗಿರುವ ದಾರುಣ ಘಟನೆ ವರದಿಯಾಗಿದೆ. ಹೀಗಾಗಿ ಇಂತಹ ವಿಷಮ ಸ್ಥಿತಿಯಲ್ಲಿ ಸಾರ್ವಜನಿಕರು ಧೃತಿಗೆಡದೆ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ನೆರವನ್ನು ಪಡೆಯಬಹುದಾಗಿದೆ.

    ರಕ್ಷಣಾ ತಂಡ ಹೀಗಿವೆ: ಜೂನ್ ತಿಂಗಳಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲೆಗೆ NDRF ಹಾಗೂ SDRF ತಂಡಗಳನ್ನು ಕರೆಸಿಕೊಳ್ಳಲಾಗಿದೆ. ಸಮುದ್ರ ಪ್ರದೇಶಗಳಲ್ಲಿ ಈಗಾಗಲೇ ಒಂದು ಸುತ್ತಿನ ವಿವಿಧ ರಕ್ಷಣಾ ತಂಡಗಳ ಜೊತೆಗೆ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಅಣಕು ಕಾರ್ಯಾಚರಣೆ ನಡೆಸಲಾಗಿದೆ. NDRF ಹಾಗೂ SDRF ಪಡೆಗಳು ಜಿಲ್ಲಾ ಕೇಂದ್ರಗಳಲ್ಲಿ ಬೀಡುಬಿಟ್ಟಿದೆ. ರಕ್ಷಣಾ ತಂಡಗಳಲ್ಲಿ ಎಷ್ಟೆಷ್ಟು ಮಂದಿ ಇದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

    NDRF – 20 ಜನರ ತಂಡSDRF – 67 ಜನರ ತಂಡ

    ಅಗ್ನಿಶಾಮಕ ದಳ – ಪ್ರತೀ ತಾಲ್ಲೂಕಿನಲ್ಲಿ ಕಾರ್ಯ ಪ್ರವೃತ್ತ, ಒಟ್ಟು 120 ಮಂದಿ ಗೃಹ ರಕ್ಷಕ ದಳ – ಜಿಲ್ಲೆಯ ಪ್ರತೀ ತಾಲ್ಲೂಕಿನಲ್ಲಿ ತಲಾ 1 ತಂಡ ಸನ್ನದ್ಧವಾಗಿದೆ.

    ಇದನ್ನೂ ಓದಿ: Karnataka Weather Report: ಮೂರು ಜಿಲ್ಲೆಗೆ ರೆಡ್ ಅಲರ್ಟ್, ನಾಲ್ಕು ಜಿಲ್ಲೆಗೆ ಆರೆಂಜ್; ರಜೆ ವಿಸ್ತರಣೆ

    ಕಾಳಜಿ ಕೇಂದ್ರ - ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ತಾಲ್ಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹೀಗೆ ಜಿಲ್ಲೆಯಾದ್ಯಂತ ಒಟ್ಟು 88 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 1. ಮಂಗಳೂರು - 212. ಬಂಟ್ವಾಳ - 113. ಪುತ್ತೂರು - 074. ಬೆಳ್ತಂಗಡಿ - 245. ಸುಳ್ಯ - 086. ಮೂಡಬಿದ್ರಿ - 077. ಕಡಬ - 068. ಮುಲ್ಕಿ – 04 ಹೀಗೆ ಸಂಖ್ಯೆಗಳನ್ನು ಸಂಪರ್ಕಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರವು ಸಾರ್ವಜನಿಕರ ನೆರವಿಗಾಗಿ 24X7 ಸಹಾಯವಾಣಿ ಸಂಖ್ಯೆಯನ್ನು ತೆರೆದಿದೆ. ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಸಂಖ್ಯೆಯ ಮೂಲಕ ಸಾರ್ವಜನಿಕರು ನೆರವನ್ನು ಪಡೆಯಬಹುದಾಗಿದೆ.

    ತಾಲ್ಲೂಕು ಕಚೇರಿ ಸಹಿತ ಕಂಟ್ರೋಲ್ ರೂಂ ನ ಸಹಾಯವಾಣಿ ಸಂಖ್ಯೆ ಹೀಗಿವೆ: 

    1. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ,ಕಂಟ್ರೋಲ್ ರೂಂ            1077, 0824-2442590 & 9483908000

    2. ಮಂಗಳೂರು ಮಹಾನಗರ ಪಾಲಿಕೆ ಕಚೇರಿ 0824-2220306, 22203193. ಮೆಸ್ಕಾಂ (MESCOM) – 19124.

    3. ಮಂಗಳೂರು ತಾಲೂಕು ಕಚೇರಿ 0824-2220587/5965.

    4. ಬಂಟ್ವಾಳ ತಾಲೂಕು ಕಚೇರಿ 08255-232120/2325005.

    5. ಪುತ್ತೂರು ತಾಲೂಕು ಕಚೇರಿ 08251-230349/2327996.

    6. ಬೆಳ್ತಂಗಡಿ ತಾಲೂಕು ಕಚೇರಿ 08256-232047/2331237.

    7. ಸುಳ್ಯ ತಾಲೂಕು ಕಚೇರಿ 08257-230330/231231/2983308.

    8. ಮೂಡಬಿದ್ರಿ ತಾಲೂಕು ಕಚೇರಿ 08258-238100/2399009.

    9. ಕಡಬ ತಾಲೂಕು ಕಚೇರಿ 08251-26043510.

    10. ಮುಲ್ಕಿ ತಾಲೂಕು ಕಚೇರಿ 0824-229449611.

    11. ಉಳ್ಳಾಲ ತಾಲೂಕು ಕಚೇರಿ 0824-2204424
    Published by:Soumya KN
    First published: