Dakshina Kannada: ಫಸ್ಟ್‌ ಕ್ಲಾಸ್​ನಲ್ಲಿ ಪಿಯುಸಿ ಪಾಸ್‌ ಆದ ಗ್ರಾಮ ಪಂಚಾಯತ್ ಅಧ್ಯಕ್ಷೆ!

ಗ್ರಾಮ ಪಂಚಾಯತ್ ಅಧ್ಯಕ್ಷೆ

ಗ್ರಾಮ ಪಂಚಾಯತ್ ಅಧ್ಯಕ್ಷೆ

ಎರಡು ದಶಕದ ಬಳಿಕ ಪಿಯುಸಿ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಉತ್ತೀರ್ಣರಾಗಿದ್ದಾರೆ.

  • News18 Kannada
  • 4-MIN READ
  • Last Updated :
  • Dakshina Kannada, India
  • Share this:

ದಕ್ಷಿಣ ಕನ್ನಡ: ವಿದ್ಯೆಗೆ ವಯಸ್ಸಿನ ಹಂಗಿಲ್ಲ, ವಿದ್ಯೆಗೆ ಕೊನೆಯೆಂಬುದಿಲ್ಲ. ಅದೇನಿದ್ದರೂ ಕಲಿಯುವವನ ಮನಸ್ಸು, ಛಲವನ್ನಷ್ಟೇ ಹೊಂದಿರುತ್ತದೆ. ಅದ್ಯಾವುದೋ ಸಂದಿಗ್ಧತೆಗೆ ಸಿಲುಕಿ ಶಿಕ್ಷಣ ಮೊಟಕುಗೊಳಿಸಿರುವ ಅದೆಷ್ಟೋ ಮಂದಿಯ ನಡುವೆ ದಕ್ಷಿಣ ಕನ್ನಡ ಜಿಲ್ಲೆ (Dakshina Kannada News) ಗ್ರಾಮ ಪಂಚಾಯತ್‌ ಅಧ್ಯಕ್ಷೆ ಓರ್ವರು ಮಾದರಿಯಾಗಿದ್ದಾರೆ. ಬಡತನದಿಂದ ಮೊಟಕುಗೊಳಿಸಿದ್ದ ಶಿಕ್ಷಣವನ್ನು ಮತ್ತೆ ಮುಂದುವರೆಸಿದ್ದಾರೆ. ಎರಡೇ ವರ್ಷದಲ್ಲಿ ಎಸ್‌ಎಸ್‌ಎಲ್​ಸಿ, ಪಿಯುಸಿ ಪರೀಕ್ಷೆ ಉತ್ತೀರ್ಣ ಆಗಿ (Positive Story) ಮಾದರಿಯಾಗಿದ್ದಾರೆ.


ದ್ವಿತೀಯ ಪಿಯುನಲ್ಲಿ ಫಸ್ಟ್‌ ಕ್ಲಾಸ್‌
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಭಾರತಿ ಭಟ್‌ ಅವರು 24 ವರ್ಷಗಳ ಬಳಿಕ ದ್ವಿತೀಯ ಪಿಯು ಪರೀಕ್ಷೆಯನ್ನು ಖಾಸಗಿಯಾಗಿ ಬರೆದು 421 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಕಮರಿ ಹೋಗಿದ್ದ ಶಿಕ್ಷಣದ ಕನಸು ಎರಡು ದಶಕಗಳ ಬಳಿಕ ನನಸು ಮಾಡಿಕೊಂಡಿದ್ದಾರೆ.




ಬಡತನದಿಂದ ಶಿಕ್ಷಣ ತೊರೆದಿದ್ದರು
ಭಾರತಿ ಭಟ್‌ ಅವರು ಬಾಲ್ಯದಲ್ಲಿಯೇ ಶಿಕ್ಷಣ ಬಗ್ಗೆ ಆಸಕ್ತರಾಗಿದ್ದರು. ಆದರೆ ಬಡತನ ಅವರ ಶಿಕ್ಷಣ ಕನಸಿಗೆ ಕೊಳ್ಳಿಯಿಟ್ಟಿತ್ತು. ಅದರಲ್ಲೂ 1997-98 ರಲ್ಲಿಯೇ 8ನೇ ತರಗತಿ ಕಲಿಯುತ್ತಿದ್ದ ವೇಳೆ ಭಾರತಿ ಭಟ್‌ ಅವರ ತಂದೆಯವರ ವಿಯೋಗದಿಂದಾಗಿ ಶಿಕ್ಷಣ ಮೊಟಕುಗೊಳಿಸುವಂತಾಗಿತ್ತು. ಅಲ್ಲಿಗೆ ಬಹುತೇಕ ಕಮರಿ ಹೋಗಿತ್ತು.




ಮತ್ತೆ ಚಿಗುರೊಡೆದ ಆಸೆ
ಭಾರತಿ ಭಟ್‌ ಅವರ ಶಿಕ್ಷಣ ಪಡೆಯುವ ಕನಸು ಬಹುತೇಕ ಮುಗಿದೇ ಹೋಗಿತ್ತು ಅಂತಾ ಅವರೇ ಖುದ್ದು ಅಂದುಕೊಂಡಿದ್ದರು.  ಮುಂದೆ ವೆಂಕಟರಮಣ ಭಟ್‌ ಅವರ ಜೊತೆ ಮದುವೆಯೂ ಆಯ್ತು. ಆದರೆ ಮದುವೆಯಿಂದ ಅವರ ಶಿಕ್ಷಣದ ಕನಸು ಕನಸಾಗೇ ಉಳಿಯಲಿಲ್ಲ!


ಇದನ್ನೂ ಓದಿ: Mangaluru Viral News: ಬೇಸಿಗೆ ರಜೆಯಲ್ಲಿ ಬಾವಿ ತೋಡಿದ PUC ವಿದ್ಯಾರ್ಥಿ!




ಆದರೆ ಅದೃಷ್ಟ ಎಂಬಂತೆ ಕಳೆದ ಬಾರಿ ಪಾಣಾಜೆ ಗ್ರಾಪಂ ಸದಸ್ಯೆರಾಗಿ ಆಯ್ಕೆಯಾದ ಅವರು, ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ಹೀಗೆ ಎರಡು ವರ್ಷದ ಹಿಂದೆ ಅಧ್ಯಕ್ಷೆ ಆಗುತ್ತಲೇ ಅವರ ಶಿಕ್ಷಣದ ಆಸೆ ಮತ್ತೆ ಜೀವಂತಗೊಂಡಿದೆ. ಖಾಸಗಿಯಾಗಿ 2021-22ನೇ ಸಾಲಿನಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು ಎಸ್‌ಎಸ್ಎಲ್‌ಸಿಯನ್ನು ಶೇಕಡಾ 54 ಅಂಕದೊಂದಿಗೆ ಉತ್ತೀರ್ಣರಾಗಿದ್ದರು.




ದ್ವಿತೀಯ ಪಿಯು ಸಾಧನೆ
ಅದಾದ ಮರು ವರ್ಷದಲ್ಲೇ ಮತ್ತೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಭಾರತಿ ಭಟ್‌ ಅವರು 421 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಷ್ಟಾಗುತ್ತಲೇ ಮುಂದೆ ಡಿಗ್ರಿ ಪೂರೈಸುವ ಇವರ ಕನಸಿಗೆ ಮತ್ತಷ್ಟು ಹುರುಪು ಬಂದಿದೆ.


ಇದನ್ನೂ ಓದಿ: Puttur: 80 ಲಕ್ಷ ಲಾಟರಿ ಗೆದ್ದ ಪುತ್ತೂರಿನ ಟೈಲರ್, ಜಾಕ್​ಪಾಟ್ ಅಂದ್ರೆ ಇದು!


ಹೀಗೆ ಭಾರತಿ ಭಟ್‌ ಅವರು 24 ವರ್ಷಗಳ ಬಳಿಕ ತಮ್ಮ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣರಾಗುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

First published: