• Home
  • »
  • News
  • »
  • mangaluru
  • »
  • Surathkal Toll Gate: ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ರದ್ದು

Surathkal Toll Gate: ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ರದ್ದು

ಸುರತ್ಕಲ್ ಟೋಲ್ ಗೇಟ್

ಸುರತ್ಕಲ್ ಟೋಲ್ ಗೇಟ್

ಕಳೆದ ಕೆಲವು ದಿನಗಳಿಂದ ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸುವ ಕುರಿತು ಹಲವು ಸಂಘಟನೆಗಳು ಹೋರಾಟ ನಡೆಸಿದ್ದರು.

  • News18 Kannada
  • Last Updated :
  • Mangalore, India
  • Share this:

    ಮಂಗಳೂರು: ಸುರತ್ಕಲ್ ಟೋಲ್ ಗೇಟ್ (Surathkal Toll Gate)  ರದ್ದುಗೊಳಿಸುವುದಾಗಿ ಅಧಿಕೃತವಾಗಿ ಘೊಷಣೆ ಮಾಡಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ (MP Nalin Kumar Kateel)  ಟ್ವೀಟ್ ಮೂಲಕ ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸುವ ಕುರಿತು ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸುವ ಕುರಿತು ಹಲವು ಸಂಘಟನೆಗಳು ಹೋರಾಟ ನಡೆಸಿದ್ದರು.


    60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 4 ಟೋಲ್ ಗೇಟ್​ಗಳು ಇದ್ದು, ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಸುರತ್ಕಲ್ ಟೋಲ್ ಗೇಟ್ ನಡೆಎಯುತ್ತಿದೆ ಎಂದು ಹೋರಾಟ ಮಾಡಲಾಗಿತ್ತು. ಟೋಲ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಟೋಲ್ ಗೇಟ್ ತೆರವು ಮಾಡಬೇಕೆಂದು ಪ್ರತಿಭಟನೆ ನಡೆಸಿತ್ತು.


    ತಾಂತ್ರಿಕ ಅಂಶಗಳ ಕಾರಣದಿಂದ ಟೋಲ್ ರದ್ದು ತಡವಾಗಿತ್ತು
    ಪ್ರತಿಭಟನಾಕಾರರ ಒತ್ತಡಕ್ಕೆ ಟೋಲ್ ಸಂಗ್ರಹವನ್ನು ಸರ್ಕಾರ ಹಿಂತೆಗೆದುಕೊಂಡಿದೆ. ತಾಂತ್ರಿಕ ಅಂಶಗಳ ಕಾರಣ ಟೋಲ್ ರದ್ದು ತಡವಾಗಿತ್ತು. ಇದೀಗ ಟೋಲ್ ತೆರವಿನ ತಾಂತ್ರಿಕ ಅಂಶ ಪೂರ್ಣವಾಗಿರುವ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.


    ಇದನ್ನೂ ಓದಿ: ಮಹತ್ವದ ಮಾಹಿತಿ ಪ್ರಕಟಿಸಿದ KSRTC, ಹೊಸ ಟಿಕೆಟ್ ದರ ವಿವರ ಹೀಗಿದೆ


    ಟೋಲ್ ವಿರೋಧಿ ಹೋರಾಟ ಸಮಿತಿಯಿಂದ ಅಹೋರಾತ್ರಿ ಹೋರಾಟ
    ಅಕ್ಟೋಬರ್ 28ರಿಂದ ಟೋಲ್​ಗೇಟ್ ವಿರೋಧ ಸಮಿತಿ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿತ್ತು. ಟೋಲ್ ವಿರೋಧಿ ಹೋರಾಟ ಸಮಿತಿಯ ಸತತ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು ಟೋಲ್ ಗೇಟ್​ನ್ನು ರದ್ದುಗೊಳಿಸಿದೆ.


    ಇದನ್ನೂ ಓದಿ: Kambala Calendar: ಕಂಬಳ ಸೀಸನ್ ಶುರು! ಇಲ್ಲಿದೆ ನೋಡಿ ಟೈಮ್​ ಟೇಬಲ್


    ಈ ಕುರಿತು ಮಾಹಿತಿ ನೀಡಿರುವ ಸಂಸದ ನಳಿನ್ ಕುಮಾರ್ ಕಟೀಲ್, ಈ ಮುನ್ನವೇ ಸುರತ್ಕಲ್ ಟೋಲ್ ಗೇಟ್ ರದ್ದುಗೊಳ್ಳುವುದು ತಾಂತ್ರಿಕ ಅಂಶಗಳಿಂದ ನಿಧಾನವಾಗಿತ್ತು, ಆದರೆ ಇದೀಗ ಟೋಲ್ ಗೇಟ್ ರದ್ದುಗೊಳಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: