ಮಂಗಳೂರು: ಒಣ ಮೀನು ಪ್ರಿಯರಿಗೆ ಒಣ ಮೀನು (Dry Fish) ಸಿಕ್ಕಾರೆ ಆಯ್ತು, ಒಂದು ಚಂದದ ಮಸಾಲೆ ರೆಡಿ ಮಾಡಿ ಒಣ ಮೀನು ಸಾರು ಮಾಡುತ್ತಾರೆ. ಆದರೆ ಒಣ ಮೀನು ರೆಡಿ ಮಾಡೋ ಪ್ರಕ್ರಿಯೆಯನ್ನ ನೀವು ನೋಡಿದ್ರೆ ಮೀನು ತಿನ್ನೋ ಆಸೆಯನ್ನೇ ಬಿಟ್ಟುಬಿಡ್ತೀರ! ಹೌದು, ಒಣ ಮೀನು ಖರೀದಿ ಮಾಡುವವರು ಅದನ್ನು ಯಾವ ರೀತಿ ಸಂಸ್ಕರಣೆ ಮಾಡಿರುತ್ತಾರೆ ಎಂದು ಯೋಚಿಸಿರುವುದಿಲ್ಲ.
ಮಂಗಳೂರಿನ ಬಹುತೇಕ ಮೀನುಗಾರ ಕುಟುಂಬಗಳೂ ಒಣ ಮೀನು ಉದ್ಯಮವನ್ನು ಮಾಡುತ್ತವೆ. ಹಸಿ ಮೀನನ್ನು ಉಪ್ಪಿನಲ್ಲಿ ಶೇಖರಿಸಿ ಕೊಳೆಸಿ ಒಣ ಮೀನು ತಯಾರಿಸಲಾಗುತ್ತದೆ. ಬಯಲು ಪ್ರದೇಶಗಳಲ್ಲಿ ಈ ಒಣ ಮೀನನ್ನು ವಿಶಾಲವಾಗಿ ಒಣಗಿಸಲು ಹರಡಲಾಗುತ್ತದೆ. ಆ ಸಂದರ್ಭದಲ್ಲಿ ಈ ಮೀನುಗಳಿಗೆ ಯಾವುದೇ ಸುರಕ್ಷತೆ ಇಲ್ಲ. ತಿನ್ನುವ ಒಣ ಮೀನಿನ ಮೇಲೆ ನಾಯಿ, ಕಾಗೆಗಳು ಓಡಾಡುತ್ತವೆ.
ಹಳೆ ಪದ್ಧತಿ ಬಿಟ್ಬಿಡಿ ಎಂದ ಅಧಿಕಾರಿಗಳು
ಈ ಕಾರಣದಿಂದ ಒಣಗಿದ ಮೀನು ಶುಚಿತ್ವ ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದಿದೆ. ಮೀನುಗಾರರಿಗೆ ಈ ಬಗ್ಗೆ ತಿಳಿವಳಿಕೆ ನೀಡಲು ಆಹಾರ ಇಲಾಖೆಯೂ ಸೂಚನೆ ನೀಡಿದೆ. ಮೀನುಗಾರರು ಹಳೆಯ ಪದ್ಧತಿಯನ್ನು ಮುಂದುವರಿಸಿದ್ದಾರೆ. ಆದರೆ ಈ ಮೀನು ಒಣಗಿಸಲು ಹಳೆಯ ಪದ್ಧತಿಯನ್ನು ಮುಂದುವರಿಸುವಂತಿಲ್ಲ ಎಂದು ಆದೇಶ ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳ ತಂಡ ತಪಾಸಣೆ ಮಾಡಲಿದೆ. ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಡಾ.ಪ್ರವೀಣ್ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: Puttur: ಐಸ್ ಕ್ಯಾಂಡಿ ಮಾರಿ 15 ಲಕ್ಷ ಆದಾಯ! ಸೂಜಿಮೆಣಸಿಂದಲೂ ಐಸ್ಕ್ರೀಮ್ ತಯಾರಿ
ಒಣ ಮೀನು ತಯಾರಿಸುವ ಯಂತ್ರ ಖರೀದಿಗೆ ಸಬ್ಸಿಡಿ
ಮೀನುಗಾರರಿಗೆ ಒಣ ಮೀನು ತಯಾರಿಸಲು ಈಗಾಗಲೇ ಸರ್ಕಾರದ ಸಬ್ಸಿಡಿಯೊಂದಿಗೆ ಯಂತ್ರಗಳ ಸವಲತ್ತನ್ನು ನೀಡಲಾಗಿದೆ. ಆದರೆ ಹಣ ಖರ್ಚಾಗುತ್ತದೆ ಎಂದು ಮೀನುಗಾರರು ಯಂತ್ರ ಖರೀದಿಗೆ ಮುಂದಾಗುತ್ತಿಲ್ಲ.
ಇದನ್ನೂ ಓದಿ: Dakshina Kannada: ರಾತ್ರೋ ರಾತ್ರಿ ನಡೆಯಿತು ಪೈಥಾನ್ ಆಪರೇಷನ್! ಒಟ್ಟು ನಾಲ್ಕು ಹೆಬ್ಬಾವುಗಳು ಸ್ವಾಮೀ!
ಈ ಬಗ್ಗೆ ಮೀನುಗಾರರಿಗೆ ಸೂಕ್ತ ಮಾಹಿತಿಯನ್ನು ನೀಡುತ್ತೇವೆ. ಆದರೆ ಮತ್ತೆ ಹಳೆಯ ಪದ್ಧತಿಯ ಪ್ರಕಾರವೇ ಒಣ ಮೀನು ತಯಾರಿಗೆ ಮುಂದಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ