• Home
  • »
  • News
  • »
  • mangaluru
  • »
  • Dakshina Kannada: ಮುಚ್ಚಿ ಹೋಗ್ತಿದ್ದ ಸರ್ಕಾರಿ ಕನ್ನಡ ಶಾಲೆಗೆ ಮರುಜೀವ, ಈಗ ವಿದ್ಯಾರ್ಥಿಗಳ ಸಂಖ್ಯೆ ಡಬಲ್!

Dakshina Kannada: ಮುಚ್ಚಿ ಹೋಗ್ತಿದ್ದ ಸರ್ಕಾರಿ ಕನ್ನಡ ಶಾಲೆಗೆ ಮರುಜೀವ, ಈಗ ವಿದ್ಯಾರ್ಥಿಗಳ ಸಂಖ್ಯೆ ಡಬಲ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

2015-16 ರ ಹೊತ್ತಿಗೆ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 44 ಮಕ್ಕಳಿದ್ದು ಇನ್ನೇನ್ ಕೆಲವೇ ಸಮಯದಲ್ಲಿ ಮುಚ್ಚಿ ಹೋಗುತ್ತೆ ಅನ್ನೋ ಆತಂಕ ಎದುರಾಗಿತ್ತು.

  • News18 Kannada
  • Last Updated :
  • Dakshina Kannada, India
  • Share this:

    ದಕ್ಷಿಣ ಕನ್ನಡ: ಚೆಂದದ ಸ್ಕೂಲ್ ಕ್ಯಾಂಪಸ್, ಕ್ಲಾಸ್ ರೂಂ ತುಂಬಾ ಚಿಣ್ಣರ ಕಲರವ. ಶಾಲೆ ಸುತ್ತಲೂ ವಿವಿಧ ಮರ ಗಿಡ. ಹೌದು, ಹೀಗೊಂದು ಊರ ದಾನಿಗಳಿಂದ, ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಮುಚ್ಚಿ ಹೋಗುವಂತಿದ್ದ ಶಾಲೆಯಲ್ಲೀಗ (Government School) ಮಕ್ಕಳ ಸಂಖ್ಯೆ ಬಲ ತುಂಬಿದೆ. ಶಾಲಾಡಳಿತ ಮಂಡಳಿಯೂ ಖುಷಿ ಖುಷಿಯಾಗಿದೆ.  ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವದಿಂದ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಸಾಲು ಸಾಲು ಕನ್ನಡ ಶಾಲೆಗಳು (Kannada Schools)  ಬಾಗಿಲು ಮುಚ್ಚಿಕೊಂಡಿದ್ದವು. ಅಂತಹದ್ದೇ ಪರಿಸ್ಥಿತಿಗೆ ಜಿಲ್ಲೆಯ ಬಂಟ್ವಾಳ ತಾಲೂಕಿನ (Bantwal News) ವೀರಕಂಭದ ಮಜಿಯ ಈ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೂ ಎದುರಾಗಿತ್ತು.


    2015-16 ರ ಹೊತ್ತಿಗೆ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 44 ಮಕ್ಕಳಿದ್ದು ಇನ್ನೇನ್ ಕೆಲವೇ ಸಮಯದಲ್ಲಿ ಮುಚ್ಚಿ ಹೋಗುತ್ತೆ ಅನ್ನೋ ಆತಂಕ ಎದುರಾಗಿತ್ತು. ಈ ಸಮಯದಲ್ಲಿ ಶಾಲಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿಗಳೆಲ್ಲರೂ ಸೇರಿ ಸಭೆ ನಡೆಸಿ, ಸರ್ವೆಗೆ ಮುಂದಾದರು. ಮಕ್ಕಳನ್ನ ಸರಕಾರಿ ಶಾಲೆಗೆ ಕಳುಹಿಸಿ ಕೊಡುವಂತೆ ಗ್ರಾಮಸ್ಥರನ್ನು ಪ್ರೇರೇಪಿಸಿದರು.


    ಬದಲಾಗಿದೆ ಶಾಲೆಯ ವಾತಾವರಣ!
    ಇದೆಲ್ಲಕ್ಕೂ ಜಾಸ್ತಿ, ಇದೇ ಶಾಲೆಯ ಹಿರಿಯ ವಿದ್ಯಾರ್ಥಿ, ಮಾತಾ ಡೆವಲಪರ್ಸ್ ಇದರ ಆಡಳಿತ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಬಂಟ್ವಾಳದ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಸರಕಾರಿ ಶಾಲೆಯ ಅಭಿವೃದ್ಧಿಗೆ ಹಲವು ಚಟುವಟಿಕೆ ಹಾಕಿಕೊಂಡರು. ಸಂತೋಷ್ ಕುಮಾರ್ ಶೆಟ್ಟಿ ಅವರಂತೂ ಈ ಶಾಲೆಯನ್ನ ಸಂಪೂರ್ಣ ದತ್ತು ಪಡೆದು ಶಿಕ್ಷಕರ ನೇಮಕಾತಿ ಸಹಿತ ಹಲವು ಅಭಿವೃದ್ಧಿ ಕಾರ್ಯಕ್ರಮ ಹಾಕಿಕೊಂಡರು. ಯಾವಾಗ ಎಲ್ ಕೆಜಿ, ಯುಕೆಜಿ ಆರಂಭಿಸಿದರೋ ಅಂದಿನಿಂದ ಶಾಲೆಯ ವಾತಾವರಣವೇ ಬದಲಾಯಿತು.




    ಇಂಗ್ಲೀಷ್ ಮೀಡಿಯಂಗೂ ಸಿಕ್ಕಿದೆ ಅನುಮತಿ
    ಅಷ್ಟೇ ಅಲ್ಲ, ಊರ ದಾನಿಗಳು ಈ ಶಾಲೆಯನ್ನ ಕೈ ಬಿಟ್ಟಿಲ್ಲ. ಎಲ್ಲರೂ ಜೊತೆ ಸೇರಿಕೊಂಡು ಶಾಲೆಗೆ ವಿನೂತನ ಸ್ಪರ್ಶ ನೀಡಿದರು. ಮಕ್ಕಳನ್ನ ಸೆಳೆಯಲು ಬೇಕಾದ ವಾತಾವರಣ ನಿರ್ಮಿಸಿದರು. ಎಂಆರ್ ಪಿಎಲ್ ಸಂಸ್ಥೆಯೂ ಭರಪೂರ ಕೊಡುಗೆ ನೀಡಿದ್ದು, ಸರಿ ಸುಮಾರು 64.50 ಲಕ್ಷ ರೂಪಾಯಿ ವೆಚ್ಚದಲ್ಲಿ ಹತ್ತು ಹೊಸ ಕೊಠಡಿ ನಿರ್ಮಿಸಿತ್ತು. ಜೊತೆಗೆ ಸರಕಾರದಿಂದ ಆಂಗ್ಲ ಮಾಧ್ಯಮ ವಿಭಾಗಕ್ಕೂ ಅನುಮತಿ ಸಿಕ್ಕಿದ ಮೇಲಂತೂ ವಿದ್ಯಾರ್ಥಿಗಳ ಸಂಖ್ಯೆ ಡಬಲ್ ಆಗಿವೆ.


    ಇದನ್ನೂ ಓದಿ: KT ಚಹಾ ಅಂದ್ರೇನು? ಅದ್ಭುತ ರುಚಿ ಹಿಂದಿನ ಗುಟ್ಟು ಹೀಗಿದೆ ನೋಡಿ


    ಹೀಗೆ ಸದ್ಯ ವೀರಕಂಭದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ 200 ದಾಟಿವೆ. ಶಾಲೆಯ ವಾತಾವರಣ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವಂತಿದೆ. ಶಾಲೆಯ ಆವರಣದಲ್ಲಿಯೇ ಅಡಿಕೆ, ಸಪೋಟ, ತೆಂಗು, ಬಾಳೆ ತೋಟಗಳನ್ನು ಬೆಳೆಯಲಾಗಿದೆ.


    ಇದನ್ನೂ ಓದಿ: Arecanut Farmers: ಅಡಿಕೆ ತೋಟದಲ್ಲಿ ಡ್ರೋನ್ ಸದ್ದು! ಎಲೆಚುಕ್ಕಿ ರೋಗಕ್ಕೆ ಹೊಸ ಪರಿಹಾರ!


    ಒಟ್ಟಿನಲ್ಲಿ ಇನ್ನೇನ್ ಕೆಲವೇ ಸಮಯದಲ್ಲಿ ಮುಚ್ಚಿ ಹೋಗುತ್ತೆ ಅನ್ನೋ ಆತಂಕದಲ್ಲಿದ್ದ ಶಾಲೆಗೆ ಹೊಸ ರಂಗು ಬಂದಿದೆ. ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲಿದೆ. ಸರಕಾರಿ ಶಾಲೆ ಹೀಗೆ ಸದಾ ಬೆಳೆಯುತ್ತಿರಲಿ, ಜ್ಞಾನಸುಧೆ ಹರಿಸುತ್ತಿರಲಿ ಅನ್ನೋ ಹಾರೈಕೆಯೂ ನಮ್ಮದಾಗಲಿ.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: