Ganesh Chaturthi: ಮಂಗಳೂರು ಗಣಪನ ಅಮೆರಿಕಾ ಪ್ರಯಾಣ!

ಈ ಕುಟುಂಬದವರು ಡಾಕ್ಟರ್, ಇಂಜಿನಿಯರ್ ಯಾರೇ ಇರಲಿ ಚೌತಿ ಹಬ್ಬಕ್ಕೂ ಕೆಲ ದಿನಗಳ ಮುನ್ನ ಬಂದು ಫೈನಲ್ ಟಚ್ ಅಪ್ ಕೊಡಲು ಹಾಜರಾಗ್ತಾರೆ!

ಗಣಪನ ವಿದೇಶ ಪ್ರಯಾಣ!

"ಗಣಪನ ವಿದೇಶ ಪ್ರಯಾಣ!"

  • Share this:
    ಮಂಗಳೂರು: ಗಣೇಶ ಹಬ್ಬಕ್ಕೆ (Ganesh Chaturthi) ಭರ್ಜರಿ ತಯಾರಿ ಆರಂಭವಾಗಿದೆ. ಮೊದಲೊಂದಿಪೆ ನಿನಗೆ ಗಣನಾಥ ಅನ್ನೋದಕ್ಕೆ ಇಡೀ ಜಗತ್ತೇ ಸಿದ್ಧವಾಗಿ ನಿಂತಿದೆ. ಕರಾವಳಿ ಮಂಗಳೂರಲ್ಲಿ (Mangaluru) ತಯಾರಾಗೋ ಗಣೇಶನಿಗೆ ಅಮೆರಿಕಾದಲ್ಲೂ ಪೂಜೆ ಪುನಸ್ಕಾರ ನಡೆಯಲಿದೆ. ಈಗಾಗಲೇ ಇಲ್ಲಿ ತಯಾರಾದ ವಿಘ್ನ ವಿನಾಯಕನ ಮೂರ್ತಿ ಚಿಕಾಗೋ (Mangaluru To Chicago) ಸೇರಿದೆ. ಕರಾವಳಿ ಪ್ರತಿಷ್ಟಿತ ಈ ಕುಟುಂಬ ಕಳೆದ ನಾಲ್ಕು ತಲೆಮಾರುಗಳಿಂದ ಗಣೇಶ ವಿಗ್ರಹದ (Ganesh Idol Making) ತಯಾರಿಯಲ್ಲಿ ತೊಡಗಿಸಿಕೊಂಡಿದ್ದು ಇನ್ನೊಂದು ವಿಶೇಷ. ಹಾಗಾದರೆ ಈ ವಿದೇಶ ಪ್ರಯಾಣ ಮಾಡುವ ಗಣಪತಿ ತಯಾರು ಮಾಡುವವರು ಯಾರು? ಏನಿವರ ಹಿನ್ನೆಲೆ? ವಿಶೇಷತೆ? ಎಲ್ಲ ವಿವರ ಇಲ್ಲಿದೆ ನೋಡಿ.

    ನಾಲ್ಕು ತಲೆಮಾರಿನ ಇತಿಹಾಸ
    ಸಾಲು ಸಾಲಾಗಿ ಸುಣ್ಣ ಬಣ್ಣ ಬಳಿದು ಆಕರ್ಷಕವಾಗಿ ಕಾಣುತ್ತಿರೋ ಈ ಗಣೇಶ ತಯಾರಿಕೆಯ ಈ ಮನೆತನಕ್ಕೆ ನಾಲ್ಕು ತಲೆಮಾರಿನ ಇತಿಹಾಸವಿದೆ. ಮಂಗಳೂರಿನ ಮಣ್ಣಗುಡ್ಡ ನಿವಾಸಿ ರಾಮಚಂದ್ರ ರಾವ್ ಅವರ ಮುಂದಾಳತ್ವದಲ್ಲಿ ವರ್ಷಂಪ್ರತಿ ಗಣಪನ ಮೂರ್ತಿ ತಯಾರಿಕಾ ಕಾರ್ಯವನ್ನು ಅವರ ಮನೆಮಂದಿಯೆಲ್ಲಾ ಸೇರಿ ಮಾಡುತ್ತಾರೆ.

    ಡಾಕ್ಟರ್,ಇಂಜಿನಿಯರ್..ಯಾರೇ ಇದ್ದರೂ ಸರಿ
    ಅವರ ತಂದೆ ಮೋಹನ್ ರಾವ್ ಅವರಿಂದ ಗಣೇಶ ವಿಗ್ರಹ ತಯಾರಿ ಆರಂಭವಾಗಿದ್ದು, ಆ ಬಳಿಕ ಅವರ ನಾಲ್ವರು ಮಕ್ಕಳು, ಆ ಬಳಿಕ ಅವರ ಮಕ್ಕಳು ಇದೀಗ ಮೊಮ್ಮಕ್ಕಳು ಸೇರಿ ನಾಲ್ಕು ತಲೆಮಾರುಗಳಿಂದ ಈ ಕಾರ್ಯದಲ್ಲಿ ನಿರತವಾಗಿದೆ. ಡಾಕ್ಟರ್, ಇಂಜಿನಿಯರ್ ಯಾರೇ ಇರಲಿ ಚೌತಿ ಹಬ್ಬಕ್ಕೂ ಕೆಲ ದಿನಗಳ ಮುನ್ನ ಬಂದು ಫೈನಲ್ ಟಚ್ ಅಪ್ ಕೊಡಲು ಹಾಜರಾಗುವರು.

    ಅಮೆರಿಕಾ ತಲುಪಿದ ಗಣನಾಥ
    ಪರಿಸರ ಮಾರಕ ಬಣ್ಣಗಳನ್ನು ಬಳಸದೇ, ಬೇಡಿಕೆ ಇರುವಷ್ಟರ ಮಟ್ಟಿಗೆ 235 ಗಣಪನನ್ನು ಈ ಕುಟುಂಬ ತಯಾರಿಸಿದೆ. ಇಲ್ಲಿರೋ ಪ್ರತಿಯೊಂದು ಗಣಪನೂ ಆವೆಮಣ್ಣಿನಲ್ಲಿಯೇ ತಯಾರಾಗಿದ್ದಾನೆ.

    ಇದನ್ನೂ ಓದಿ: Udupi Krishna Janmashtami: ಕೃಷ್ಣನ ನೋಡಿರೋ, ನಮ್ಮ ಮುದ್ದು ದೇವರ ನೋಡಿರೋ!

    ಮಂಗಳೂರು ನಗರದ ಆಸುಪಾಸಿನಲ್ಲಿ ಕೂರಿಸುವ ಪ್ರಖ್ಯಾತ ಸಾರ್ವಜನಿಕ ಗಣಪನನ್ನು ಈ ಕುಟುಂಬವೇ ತಯಾರಿಸುತ್ತದೆ. ಜೊತೆಗೆ ಚಿಕಾಗೊದಲ್ಲಿರುವ ಶೆರ್ಲೆಕರ್ ಕುಟುಂಬವೂ ಇಲ್ಲಿಂದಲೇ ಅಮೆರಿಕಾಕ್ಕೆ ವಿಮಾನ ಮೂಲಕ ಗಣಪತಿ ಮೂರ್ತಿ ತರಿಸಿಕೊಳ್ಳುತ್ತದೆ.

    ಇದನ್ನೂ ಓದಿ: Mangaluru Viral News: 121 ಬಗೆಯ ಭಕ್ಷ್ಯ ನೈವೇದ್ಯ! ಮಂಗಳೂರಿನ ಭಕ್ತೆಗೆ ಕೃಷ್ಣ ಒಲಿಯದಿರಲು ಸಾಧ್ಯವೇ?

    ಒಟ್ಟಿನಲ್ಲಿ ಆಧುನಿಕತೆ ನಡುವೆಯೂ ತಮ್ಮ ಹಿರಿಯರು ಹಾಕಿಕೊಟ್ಟ ಪರಂಪರೆಯನ್ನು ಈ ಕುಟುಂಬವು ಕಳೆದ 93 ವರ್ಷಗಳಿಂದ ಪಾಲಿಸುತ್ತ ಬಂದಿರುವುದು ವಿಶೇಷವೇ ಸರಿ.

    ವರದಿ: ಇರ್ಷಾದ್ ಕಿನ್ನಿಗೋಳಿ
    Published by:guruganesh bhat
    First published: