Ganesh Chaturthi: ಗಣಪತಿ ಹಬ್ಬಕ್ಕೆ ಎಂದೇ ಕಬ್ಬು ಬೆಳೆಯುವ ಕ್ರೈಸ್ತರು!

ಮಂಗಳೂರು ಹೊರವಲಯದ ಮುಲ್ಕಿ ತಾಲೂಕಿನ ಬಳ್ಕುಂಜೆ ಗ್ರಾಮ ಕಬ್ಬು ಬೆಳೆಗೆ ತುಂಬಾನೇ ಫೇಮಸ್!

ಇಲ್ಲಿ ವಿಡಿಯೊ ನೋಡಿ

"ಇಲ್ಲಿ ವಿಡಿಯೊ ನೋಡಿ"

  • Share this:
    ಮಂಗಳೂರು: ಚೌತಿ ಹಬ್ಬ ಹತ್ತಿರ ಬರ್ತಿದ್ದಂತೆ ಕಬ್ಬು ಕಟಾವು ಜೋರಾಗಿದೆ. ಕರಾವಳಿಯಲ್ಲಿ ಕಬ್ಬು ಇಲ್ದೇ ಗಣೇಶ ಚತುರ್ಥಿ (Ganesh Chaturthi) ಆಗಲ್ಲ ಅನ್ನೋವಷ್ಟರ ಮಟ್ಟಿಗೆ ಹಬ್ಬ ಆಚರಿಸಲಾಗ್ತದೆ. ಕರಾವಳಿ ಭಾಗದಲ್ಲಿ ಗಣಪತಿಗೆ ಕಬ್ಬು (Sugarcane) ಸಮರ್ಪಿಸುವ ಸಂಪ್ರದಾಯವಿದೆ. ಮಾತ್ರವಲ್ದೇ ಹಳ್ಳಿಯ ರೈತರು ಕಬ್ಬು ತುಂಡುಗಳಲ್ಲೇ ಸಾಂಪ್ರದಾಯಿಕ ಗಣಪತಿ (Ganapathi Idol) ರಚಿಸುವ ಪದ್ಧತಿಯೂ ಇದೆ. ಅದ್ರಲ್ಲೂ ಚೌತಿ ಹಬ್ಬಕ್ಕಾಗಿಯೇ (Ganesh Festival)  ಕಬ್ಬು ಬೆಳೆಯೋ ಗ್ರಾಮವೊಂದು ಇಲ್ಲಿದ್ದು ಅದು ಮತ್ತೊಂದು ವಿಶೇಷ. ಈ ಊರು ಇರುವುದಾದರೂ ಎಲ್ಲಿ? ಈ ಊರಿನ ವಿಶೇಷತೆಯೇನು? ಇಲ್ಲಿ ಬೆಳೆವ ಕಬ್ಬಿನ ವಿಶೇಷತೆಯೇನು? ಎಲ್ಲ ವಿವರ ಇಲ್ಲಿದೆ.



    ಕರಾವಳಿಯ ಕಬ್ಬು ಗ್ರಾಮ
    ಮಂಗಳೂರು ಹೊರವಲಯದ ಮುಲ್ಕಿ ತಾಲೂಕಿನ ಬಳ್ಕುಂಜೆ ಗ್ರಾಮ ಕಬ್ಬು ಬೆಳೆಗೆ ತುಂಬಾನೇ ಫೇಮಸ್. ಇಲ್ಲಿನ ರೈತರು ಹಲವು ವರ್ಷಗಳಿಂದ ಸುಮಾರು 30 ಎಕ್ರೆ ಪ್ರದೇಶದಲ್ಲಿ ಕಬ್ಬನ್ನೇ ಬೆಳೆದುಕೊಂಡು ಬಂದಿದ್ದಾರೆ. ಪ್ರತಿ ಎಕ್ರೆ 10 ಸಾವಿರದಂತೆ ಕಬ್ಬು ಬೆಳೆಯುವ ರೈತರು, ಅದಕ್ಕಾಗಿ ಅಕ್ಟೋಬರ್ ತಿಂಗಳಲ್ಲಿ ಬಿತ್ತನೆ ನಡೆಸಿರುತ್ತಾರೆ.

    ಎಲ್ಲರಲ್ಲೂ ಮನೆ ಮಾಡಿದ ಸಂಭ್ರಮ
    ಇದೀಗ ಆ ಬೆಳೆಗಳು ಕಟಾವಿಗೆ ಬಂದಿದ್ದು, ಕಳೆದ ಬಾರಿಯಂತೆ ಕೊರೊನಾ ಕೂಡಾ ಅಡ್ಡಿಯಾಗದಿರುವ ಕಾರಣ, ಕಬ್ಬು ಖರೀದಿದಾರರಲ್ಲೂ ಸಂತಸ ಮನೆ ಮಾಡಿದೆ. ಜೊತೆಗೆ, ಬೆಳೆದ ಬೆಳೆಗೆ ಉತ್ತಮ ದರವೂ ಸಿಕ್ಕಿದ್ದು ಕೃಷಿ ಬೆಳೆಗಾರರಲ್ಲೂ ಸಂಭ್ರಮ ಮನೆ ಮಾಡುವಂತೆ ಮಾಡಿದೆ.



    ಈ ಬಾರಿ ಉತ್ತಮ ಬೆಲೆ
    ಕರಾವಳಿಯಲ್ಲಿ ಸಾಮಾನ್ಯವಾಗಿ ಭತ್ತ, ಅಡಿಕೆ ಬೆಳೆದ್ರೆ, ಬಳ್ಕುಂಜೆ ಭಾಗದ ಮಣ್ಣು ಕಬ್ಬು ಬೆಳೆಗೆ ಪೂರಕವಾಗಿದೆ. ಹಾಗಾಗಿ ಇಲ್ಲಿನ ಸುಮಾರು 75 ಕುಟುಂಬಗಳು ಕಬ್ಬು ಬೆಳೆಯನ್ನೇ ಅವಲಂಬಿಸಿದೆ. ಜೊತೆಗೆ ಭತ್ತಕ್ಕೆ ಹೋಲಿಸಿದ್ರೆ ಕಬ್ಬು ಲಾಭದಾಯಕವೂ ಆಗಿದ್ದು, ಅದಕ್ಕಾಗಿಯೇ ಹಲವು ಮಂದಿ ಕಬ್ಬು ಬಿತ್ತನೆ ಸಮಯದಲ್ಲಿ ಸಾಲ ಸೋಲ ಮಾಡಿಯಾದ್ರೂ ಕಬ್ಬು ಬೆಳೆದೇ ಬೆಳೆಯುತ್ತಾರೆ. ಈ ಬಾರಿ ಪ್ರತಿ ಕಬ್ಬಿಗೆ 24 ರಿಂದ 25 ರೂಪಾಯಿ ಬೆಲೆ ಸಿಕ್ಕಿದ್ದು ರೈತರು ಖುಷಿಯಾಗಿದ್ದಾರೆ.

    ಇದನ್ನೂ ಓದಿ: Ganesh Chaturthi: ಮಂಗಳೂರು ಗಣಪನ ಅಮೆರಿಕಾ ಪ್ರಯಾಣ!



    ಚೌತಿ ಹಬ್ಬಕ್ಕಾಗಿಯೇ ಕಬ್ಬು
    ಬಳ್ಕುಂಜೆಯಲ್ಲಿನ ಕಬ್ಬು ಚೌತಿ ಹಬ್ಬಕ್ಕೆಂದೇ ಬೆಳೆಯಲಾಗುತ್ತದೆ. ಅಲ್ಲದೇ, ಕರಾವಳಿಯ ಉಭಯ ಜಿಲ್ಲೆಗಳಿಗೂ ಇಲ್ಲಿನದ್ದೇ ಕಬ್ಬು ಸರಬರಾಜಾಗುತ್ತದೆ.

    Balkunje, Karnataka 574154 ಕರಾವಳಿಯ ಕಬ್ಬು ಗ್ರಾಮಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]

    ಇದನ್ನೂ ಓದಿ: Mangaluru Viral News: 121 ಬಗೆಯ ಭಕ್ಷ್ಯ ನೈವೇದ್ಯ! ಮಂಗಳೂರಿನ ಭಕ್ತೆಗೆ ಕೃಷ್ಣ ಒಲಿಯದಿರಲು ಸಾಧ್ಯವೇ?

    ಕರಾವಳಿಯ ಕಬ್ಬಿನ ಗ್ರಾಮಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
    ಇನ್ನುಳಿದಂತೆ ಇಲ್ಲಿನ ಕಬ್ಬನ್ನು ಕ್ರೈಸ್ತರ ತೆನೆ ಹಬ್ಬಕ್ಕೂ ಬಳಸಲಾಗುತ್ತದೆ. ಒಟ್ಟಿನಲ್ಲಿ ಕರಾವಳಿಯಲ್ಲಿ ಚೌತಿ ಹಬ್ಬಕ್ಕೆ ಗಣಪ ಎಷ್ಟು ಮುಖ್ಯನೋ, ಅಷ್ಟೇ ಮುಖ್ಯ ಈ ಕಬ್ಬು ಕೂಡಾ.

    ವರದಿ: ಇರ್ಷಾದ್ ಕಿನ್ನಿಗೋಳಿ
    Published by:guruganesh bhat
    First published: