• Home
  • »
  • News
  • »
  • mangaluru
  • »
  • Fearless Belt: ಮಹಿಳೆಯರ ಸುರಕ್ಷತೆಗೆ ಫಿಯರ್​ಲೆಸ್ಟ್ ಬೆಲ್ಟ್! ಕಿರುಕುಳ ಕೊಟ್ಟವರಿಗೆ ಶಾಕ್

Fearless Belt: ಮಹಿಳೆಯರ ಸುರಕ್ಷತೆಗೆ ಫಿಯರ್​ಲೆಸ್ಟ್ ಬೆಲ್ಟ್! ಕಿರುಕುಳ ಕೊಟ್ಟವರಿಗೆ ಶಾಕ್

ಇದೇ ನೋಡಿ ಫಿಯರ್​ಲೆಸ್ ಬೆಲ್ಟ್

ಇದೇ ನೋಡಿ ಫಿಯರ್​ಲೆಸ್ ಬೆಲ್ಟ್

ಅಪಾಯ ಸಂಭವಿಸಿದಾಗ ಬೆಲ್ಟ್ ಬಟನ್ ಪ್ರೆಸ್ ಮಾಡಿದರೆ ಸಾಕು, ಕಿರುಕುಳ ನೀಡಲು ಬಂದವನಿಗೆ 5 ವೋಲ್ಟ್ ಕರೆಂಟ್ ಶಾಕ್ ಹೊಡೆಯುತ್ತೆ.

  • News18 Kannada
  • Last Updated :
  • Dakshina Kannada, India
  • Share this:

    ಮಂಗಳೂರು: ಸೊಂಟಕ್ಕೆ ಕಟ್ಟಿಕೊಳ್ಳೋ ಬೆಲ್ಟ್, ಅದರ ಮೇಲೆ ನಾಲ್ಕಾರು ಬಣ್ಣಬಣ್ಣದ ಬಟನ್​ಗಳು. ಅರೇ! ಇದೇನಿದು ಬೆಲ್ಟ್ ಬಗ್ಗೆ ಹೇಳ್ತಿದ್ದಾರೆ ಅಂದ್ಕೊಂಡ್ರಾ? ಇದು ಸಾಮಾನ್ಯ ಬೆಲ್ಟ್ ಆಗಿದ್ರೆ ಇಷ್ಟು ಸುದ್ದಿ ಆಗ್ತಿರ್ಲಿಲ್ಲ. ಅಷ್ಟು ಮಹತ್ವ ಹೊಂದಿರೋ ಬ್ಯಾಗ್ ಬಗ್ಗೆ ನಾವ್ ಹೇಳ್ತೀವಿ ಕೇಳಿ. ಮಹಿಳೆಯರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಮಹಿಳೆಯರು (Woman Safety) ಎಷ್ಟೆ ಸೆಲ್ಪ್ ಡಿಫೆನ್ಸ್ (Self Defence) ಕಲಿತರು ಕೀಚಕರು ಮಹಿಳೆಯರನ್ನ‌ ಕೆಣಕುತ್ತಲೇ ಇರ್ತಾರೆ, ಇಂತಹ ಕೀಚಕರಿಗೆ ಶಾಕ್ ಕೊಟ್ರೆ ಹೇಗಿರುತ್ತೆ?‌ ಇದನ್ನೇ ಮಾಡ್ತಿದೆ ದಾವಣಗೆರೆ ಯುವಕರು ಕಂಡು ಹಿಡಿದ ಈ ಬೆಲ್ಟು! ಅದೆನಪ್ಪಾ ಇದು ಶಾಕ್ ಕೊಡೋ ಬೆಲ್ಟು! (Fearless Belt) ಇದೇನಪ್ಪಾ ಅಂತಿರಾ? ಇಲ್ಲಿದೆ ನೋಡಿ ಆನ್ಸರ್!


    ಬೊಂಬೆಯ ಸೊಂಟದಲ್ಲಿರೋ ಬೆಲ್ಟ್ ಇದೆಯಲ್ವ? ಅದಕ್ಕಾಗಿ ಇಷ್ಟೊಂದು ಎಕ್ಸ್ ಪ್ನೇಶನ್.. ಹಾಗಿದ್ರೆ ಈ ಬೆಲ್ಟ್ ನಲ್ಲಿ ಅಂತದ್ದೇನಿದೆ ಅಂತೀರಾ? ಯೆಸ್, ಆ ಬಗೆಗಿನ ಕಥೆಯನ್ನ ನಾವು ಹೇಳ್ತೀವಿ ನೋಡಿ.


    ಈ ಬೆಲ್ಟ್ ಸೊಂಟದಲ್ಲಿದ್ರೆ ಸಾಕು!
    ಹೌದು, ಇದು ಅಂತಿಂತ ಬೆಲ್ಟ್ ಅಲ್ಲ.. ಮಹಿಳೆಯರ ಮಾನ ಪ್ರಾಣ ಕಾಪಾಡಬಲ್ಲ ಬೆಲ್ಟ್! ಅಷ್ಟೇ ಯಾಕೆ ಕೀಚಕರಿಗೆ ಕರೆಂಟ್ ಶಾಕ್ ಕೊಡಬಲ್ಲ ಅದ್ಭುತ ಬೆಲ್ಟ್ ಇದು. ದಾವಣಗೆರೆಯ ನಾಲ್ವರ ಯುವ ತಂಡವೊಂದು ಈ ಬೆಲ್ಟ್​ಗೆ ರೂಪುಕೊಟ್ಟಿದ್ದು ಇದು ಸೊಂಟದಲ್ಲಿದ್ರೆ ಸಾಕು ಹೆಣ್ಮಕ್ಕಳ ಮೇಲೆರಗಿ ಬರುವ ಅದ್ಯಾವ ಕೀಚಕನಾದರೂ ಓಡಿ ಹೋಗೋದು ಗ್ಯಾರಂಟಿ.


    3 ತಿಂಗಳ ಪರಿಶ್ರಮದ ಫಲ ಇದು
    ದಾವಣಗೆರೆ ಜಿ.ಎಂ.ಐ.ಟಿ. ಕಾಲೇಜಿನ ತೃತೀಯ ವರ್ಷದ ಇಲೆಕ್ಟ್ರಾನಿಕ್ ಹಾಗೂ ಕಮ್ಯುನಿಕೇಶನ್ ವಿದ್ಯಾರ್ಥಿಗಳ ಪರಿಶ್ರಮದ ಫಲವಿದು. ಕಾರ್ತಿಕ್, ದೀಪ್ತಿ, ಜಾಫರ್ ಹಾಗೂ ದರ್ಶನ್ ಎಂಬುವರು 3 ತಿಂಗಳು ಕಷ್ಟಪಟ್ಟು ಈ ಬೆಲ್ಟ್ ಕಂಡುಹಿಡಿದಿದ್ದಾರೆ. ಬ್ಯಾಟರಿ ಚಾಲಿತ ಈ ಫಿಯರ್ ಲೆಸ್ ಬೆಲ್ಟ್ ನಲ್ಲಿ ಕರೆಂಟ್ ಶಾಕ್ ಮತ್ತು ಜಿಪಿಎಸ್ ಅಳವಡಿಸಲಾಗಿದೆ.


    ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ


    ಅಪಾಯ ಸಂಭವಿಸಿದಾಗ ಬೆಲ್ಟ್ ಬಟನ್ ಪ್ರೆಸ್ ಮಾಡಿದರೆ ಸಾಕು, ಕಿರುಕುಳ ನೀಡಲು ಬಂದವನಿಗೆ 5 ವೋಲ್ಟ್ ಕರೆಂಟ್ ಶಾಕ್ ಹೊಡೆಯುತ್ತೆ. ನೀವು ಇರುವ ಲೈವ್ ಲೊಕೇಶನ್ ಸಂಬಂಧಪಟ್ಟವರಿಗೆ ತಲುಪುತ್ತೆ. ಹಾಗಂತ ಇದನ್ನ ಧರಿಸೋರಿಗೆ ಏನೂ ಆಗದು ಅನ್ನೋದೆ ಈ ಫಿಯರ್ ಲೆಸ್ ಬೆಲ್ಟ್ ನ ವಿಶೇಷ.


    ಇದನ್ನೂ ಓದಿ: Mushroom Pickle: ಸಖತ್ ಟೇಸ್ಟಿ ಈ ಅಣಬೆ ಉಪ್ಪಿನಕಾಯಿ, ನೀವೂ ಸವಿದು ನೋಡಿ


    ಹೀಗೆ ದಾವಣಗೆರೆಯ ವಿದ್ಯಾರ್ಥಿಗಳ ಈ ಸಂಶೋಧನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗುತ್ತಿದೆ. ಮುಂದೆ ಇದನ್ನ ಅಭಿವೃದ್ಧಿಪಡಿಸುವ ಇರಾದೆಯನ್ನೂ ಈ ವಿದ್ಯಾರ್ಥಿಗಳು ಹೊಂದಿದ್ದಾರೆ. ಮಹಿಳಾ ರಕ್ಷಣೆಗೆ ಮಹತ್ವದ ನಾಂದಿ ಹಾಡಲಿ ಅನ್ನೋ ಹಾರೈಕೆ ನಮ್ಮದು.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು