Suman Talwar: ತುಳುನಾಡ ದೈವಗಳನ್ನು ನೆನೆದ ಸೂಪರ್ ಸ್ಟಾರ್! ಸುಮನ್ ತಲ್ವಾರ್​ಗೆ ಹುಟ್ಟೂರಲ್ಲಿ ಅದ್ದೂರಿ ಸನ್ಮಾನ​

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ತುಳುನಾಡಿನ ದೈವ ದೇವರನ್ನು ನೆನೆಸಿ ಮಾಡಿದ ಕೆಲಸಗಳೆಲ್ಲಾ ಯಶಸ್ವಿಯಾಗಿದೆ. ಕಾಂತಾರ ಬಂದ ಬಳಿಕ ಎಲ್ಲರಿಗೂ ದೈವಶಕ್ತಿಯ ಅರಿವಾಗಿದೆ. ಆದರೆ ನನಗೆ ಆರಂಭದ ದಿನಗಳಲ್ಲೇ ಶಕ್ತಿಯ ಅರಿವಾಗಿದೆ ಎಂದಿದ್ದಾರೆ ಸುಮನ್ ತಲ್ವಾರ್.

  • Share this:

    ಮಂಗಳೂರು: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್, ಬಹುಭಾಷಾ ನಟ ಡಾ. ಸುಮನ್ ತಲ್ವಾರ್ (Famous Actor Suman Talwar) ಅವರಿಗೆ ಮಂಗಳೂರಿನಲ್ಲಿ ಹುಟ್ಟೂರ (Mangaluru News) ಸನ್ಮಾನ ನಡೆದಿದೆ. ಬೆಳ್ಳಿಪರದೆಯ ಮೇಲೆ ಮಿಂಚಿ, ಕಡಲತಡಿಯ ಕಂಪನ್ನು ದೇಶಾದ್ಯಂತ ಪಸರಿಸಿದ ಸುಮನ್ ಅವರಿಗೆ ಜನ ಸುಮನ-ತಮ್ಮನ ಎಂಬ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿದ್ದಾರೆ.


    ಡಾ. ಸುಮನ್ ತಲ್ವಾರ್ ಹತ್ತು ಭಾಷೆಗಳಲ್ಲಿ 700 ಅಧಿಕ ಚಿತ್ರಗಳಲ್ಲಿ ನಟಿಸಿದ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. ತುಳುನಾಡಿನಲ್ಲಿ ಹುಟ್ಟಿದರೂ ಕನ್ನಡ, ತಮಿಳು, ತೆಲುಗು, ಹಿಂದಿ, ಒಡಿಸ್ಸಿ, ಭೋಜ್ ಪುರಿ, ಬಂಜಾರ, ಇಂಗ್ಲೀಷ್, ಮಲಯಾಳಂ ಸಿನಿಮಾಗಳಲ್ಲಿ ತಮ್ಮದೇ ಕಲಾಚಾತುರ್ಯ ತೋರಿಸಿದ ಡಾ. ಸುಮನ್ ತಲ್ವಾರ್​ಗೆ ಮಂಗಳೂರಿನಲ್ಲಿ ಹುಟ್ಟೂರಲ್ಲಿ ಸನ್ಮಾನ ನಡೆದಿದೆ.




    ಸಿನಿರಸಿಕರ ಮನದಲ್ಲಿ ಅಚ್ಚಳಿಯದೇ ಉಳಿದ ನಟ
    ಮಂಗಳೂರಿನ ಪುರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮಕ್ಷಮದಲ್ಲಿ ಸುಮನ್ ತಲ್ವಾರ್​ಗೆ ಹುಟ್ಟೂರ ಸನ್ಮಾನ ಮಾಡಲಾಯಿತು. ಯಾವುದೇ ಗಾಡ್ ಫಾದರ್ ಇಲ್ಲದೇ ತಮಿಳು ಮತ್ತು ತೆಲುಗಿನಲ್ಲಿ 80-90ರ ದಶಕದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ ಸುಮನ್ ತಲ್ವಾರ್, ನಾಯಕನಟನಾಗಿ, ಖಳನಟನಾಗಿ,ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿ ಸಿನಿರಸಿಕರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.


    ಇದನ್ನೂ ಓದಿ: Dakshina Kannada: ಗಂಡನ ನಿಧನದ ನಂತರ ಚುರುಮುರಿ ಬ್ಯುಸಿನೆಸ್, ಸ್ವಶ್ರಮದಿಂದ ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ ಮಹಿಳೆಯ ಸಕ್ಸಸ್ ಸ್ಟೋರಿ






    ದೈವಶಕ್ತಿಯ ಅರಿವಾಗಿದೆ ಎಂದ ನಟ
    ಸುಮನ್ ಸನ್ಮಾನದ ವೇಳೆ ಸೂಪರ್ ಸ್ಟಾರ್ ರಜಿನೀಕಾಂತ್, ಚಿರಂಜೀವಿ ವಿಡಿಯೋ ಸಂದೇಶದ ಮೂಲಕ ಶುಭ ಹಾರೈಸಿದ್ದಾರೆ. ಸನ್ಮಾನ ಸ್ವೀಕರಿಸಿ ತುಳುವಿನಲ್ಲಿ ಮಾತನಾಡಿದ ನಟ ಸುಮನ್ ತಲ್ವಾರ್, "ನನ್ನ ತಂದೆ-ತಾಯಿಯ ಪುಣ್ಯ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ತುಳುನಾಡಿನ ದೈವ ದೇವರನ್ನು ನೆನೆಸಿ ಮಾಡಿದ ಕೆಲಸಗಳೆಲ್ಲಾ ಯಶಸ್ವಿಯಾಗಿದೆ. ಕಾಂತಾರ ಬಂದ ಬಳಿಕ ಎಲ್ಲರಿಗೂ ದೈವಶಕ್ತಿಯ ಅರಿವಾಗಿದೆ. ಆದರೆ ನನಗೆ ಆರಂಭದ ದಿನಗಳಲ್ಲೇ ಶಕ್ತಿಯ ಅರಿವಾಗಿದೆ" ಎಂದು ತಿಳಿಸಿದರು.


    ಇದನ್ನೂ ಓದಿ: Dharmasthala: 1,15,000 ಜನರಿಗೆ ಹೊಸ ಜೀವನ ನೀಡಿದ ಮಂಜುನಾಥ! ಇದು ಧರ್ಮಸ್ಥಳ ಮಹಿಮೆ!




    ಸುಮನ್ ತಲ್ವಾರ್​ಗೆ ಹುಟ್ಟೂರ ಅಭಿನಂದನೆ ಹಿನ್ನೆಲೆಯಲ್ಲಿ ಸುಮನ್ ತಲ್ವಾರ್ ಅಭಿಮಾನಿಗಳು ರಕ್ತದಾನ ಶಿಬಿರ ನಡೆಸಿದರು. ಕಾರ್ಗಿಲ್​ನಲ್ಲಿ ಮಡಿದ ಸೈನಿಕರ ಕುಟುಂಬಕ್ಕೆ ಹೈದರಾಬಾದ್​ನ ತನ್ನ 175 ಎಕರೆ ಜಾಗವನ್ನು ದಾನ ಮಾಡಿದ ನಟ ಸುಮನ್ ತಲ್ವಾರ್ ಅವರ ರಾಷ್ಟ್ರ ಪ್ರೇಮಕ್ಕೆ ಕರಾವಳಿಯ ಜನ ಅಭಿಮಾನದ ಮೆಚ್ಚುಗೆ ನೀಡಿದರು.


    ವರದಿ: ಕಿಶನ್ ಶೆಟ್ಟಿ, ನ್ಯೂಸ್18 ಕನ್ನಡ, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: