• Home
  • »
  • News
  • »
  • mangaluru
  • »
  • Human Waste: ಹೊಲಸು ಎಂದು ಮೂಗು ಸಿಂಡರಿಸಬೇಡಿ, ಮಾನವ ತ್ಯಾಜ್ಯದಿಂದ ಆದಾಯ ಗಳಿಸ್ತಿದೆ ದಕ್ಷಿಣ ಕನ್ನಡದ ಈ ಸಂಸ್ಥೆ!

Human Waste: ಹೊಲಸು ಎಂದು ಮೂಗು ಸಿಂಡರಿಸಬೇಡಿ, ಮಾನವ ತ್ಯಾಜ್ಯದಿಂದ ಆದಾಯ ಗಳಿಸ್ತಿದೆ ದಕ್ಷಿಣ ಕನ್ನಡದ ಈ ಸಂಸ್ಥೆ!

X
ಇಲ್ಲಿ ವಿಡಿಯೋ ನೊಡಿ

"ಇಲ್ಲಿ ವಿಡಿಯೋ ನೊಡಿ"

ಈ ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳ ಊಟಕ್ಕಾಗಿ ಬಳಸುವ ತರಕಾರಿ, ತೆಂಗಿನ ಕಾಯಿಗಳೆಲ್ಲವೂ ಶುದ್ಧೀಕರಿಸಿದ ನೀರಿನಿಂದ ಬೆಳೆದ ಗಿಡ, ಮರಗಳದ್ದಾಗಿದೆ!

  • News18 Kannada
  • Last Updated :
  • Dakshina Kannada, India
  • Share this:

    ಮಾನವ ತ್ಯಾಜ್ಯ ಅಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ಸಂಸ್ಥೆ ಅದ್ರಿಂದಲೇ ಆದಾಯ ಗಳಿಸ್ತಿದೆ. ನಿಜ, ಇಲ್ಲಿ ನೀವ್ ನೋಡ್ತಿರೋ ಈ ತ್ಯಾಜ್ಯ ನೀರೆಲ್ಲವೂ ಪರಿಷ್ಕರಣೆಯಾಗುತ್ತೆ. ಅಷ್ಟೇ ಅಲ್ಲ ಮರುಬಳಕೆ ಆಗಿ ಉತ್ತಮ ಆದಾಯದ ಮೂಲವಾಗಿಯೂ ಬದಲಾಗುತ್ತೆ. ಇದೆಲ್ಲವೂ ಹೇಗೆ ಅಂತೀರಾ? ಹೇಳ್ತೀವಿ ನೋಡಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಎಕ್ಸಲೆಂಟ್ ಸಂಸ್ಥೆ ಶಿಕ್ಷಣಕ್ಕೆ ಎಷ್ಟು ಹೆಸರುವಾಸಿಯೋ ತ್ಯಾಜ್ಯ ವಿಲೇವಾರಿಗೂ ಅಷ್ಟೇ ಫೇಮಸ್. ಇದ್ರಿಂದ ಉತ್ತಮ ಸದುಪಯೋಗ ಪಡೆಯಬಹುದು ಅನ್ನೋದನ್ನ ಈ ಸಂಸ್ಥೆ ತೋರಿಸಿಕೊಟ್ಟಿದೆ.


    ಸಂಸ್ಥೆಯಲ್ಲಿ ಅಳವಡಿಸಲಾದ ಸಿವೇಜ್ ಟ್ರೀಟ್ಮೆಂಟ್ ಪ್ಲಾಂಟ್ ದಿನಕ್ಕೆ ನಾಲ್ಕು ಲಕ್ಷ ಲೀಟರ್ ಸೀವೇಜ್ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಸುಮಾರು ಒಂದೂವರೆ ಲಕ್ಷ ಲೀಟರ್ ತ್ಯಾಜ್ಯವನ್ನು ಎಂಟು ಗಂಟೆಗಳ ಅವಧಿಯಲ್ಲಿ ಶುದ್ಧೀಕರಣಗೊಳಿಸುತ್ತದೆ. ಹೀಗೆ ಸ್ವಚ್ಛಗೊಳಿಸಲ್ಪಟ್ಟ ನೀರನ್ನ ಮತ್ತೆ ಕ್ಯಾಂಪಸ್ ಒಳಗೇ ಇರುವ ತೆಂಗು, ಮಾವು, ತರಕಾರಿ ಗಿಡಗಳಿಗೆ ಸಿಂಪಡಿಸುವ ಮೂಲಕ ಉತ್ತಮ ಇಳುವರಿ ಪಡೆಯಲಾಗ್ತಿದೆ.


    ಲಕ್ಷಾಂತರ ರೂಪಾಯಿ ಉಳಿತಾಯ!
    ಈ ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳ ಊಟಕ್ಕಾಗಿ ಬಳಸುವ ತರಕಾರಿ, ತೆಂಗಿನ ಕಾಯಿಗಳೆಲ್ಲವೂ ಶುದ್ಧೀಕರಿಸಿದ ನೀರಿನಿಂದ ಬೆಳೆದ ಗಿಡ, ಮರಗಳದ್ದಾಗಿದೆ. ಕಾಲೇಜಿನಲ್ಲಿಯೇ ಇಂತಹ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡಿದ್ದರಿಂದ ವರ್ಷಕ್ಕೆ ಲಕ್ಷಾಂತರ ರೂಪಾಯಿ ವೃಥಾ ಖರ್ಚನ್ನ ಸಂಸ್ಥೆಯು ಉಳಿಸುತ್ತಿದೆ.


    ಇದನ್ನೂ ಓದಿ: Success Story: ಕೆಲಸ ಸಿಕ್ಕರೂ ಕೃಷಿ! ಲಕ್ಷ ಲಕ್ಷ ಆದಾಯ ಗಳಿಸಿದ ಪಾರ್ಟ್​ ಟೈಮ್ ರೈತ


    ದಿನನಿತ್ಯ ತೋಟಗಳಿಗೂ ಬಳಕೆ
    ಹಾಗಂತ ತ್ಯಾಜ್ಯ ರೂಪದಲ್ಲಿರುವ ನೀರನ್ನು ಶುದ್ಧೀಕರಣ ಮಾಡುವುದು ಸುಲಭದ ಮಾತಲ್ಲ. ತ್ಯಾಜ್ಯ ನಿರ್ವಹಣೆಗಾಗಿ ಬಾರ್ ಸ್ಕ್ರೀನ್ ಚೇಂಬರ್​ಗಳಿದ್ದು, ಇಲ್ಲಿ ಭರ್ತಿಯಾಗುವ ನೀರಿಗೆ ಆಕ್ಸಿಜನ್ ನೀಡಲಾಗುತ್ತೆ. ನಂತರ ಮಾನವ ತ್ಯಾಜ್ಯದಿಂದ ನೀರನ್ನ ವಿಂಗಡಿಸಲಾಗುತ್ತದೆ. ಹೀಗೆ ಬೇರ್ಪಟ್ಟ ನೀರು ತೋಟಗಳಿಗೆ ದಿನನಿತ್ಯ ಬಳಕೆಯಾದರೆ ಉಳಿದ ತ್ಯಾಜ್ಯ ಗೊಬ್ಬರದಂತೆ ಬಳಸಲಾಗುತ್ತೆ. ಇದರಿಂದ ನೀರಿನ ಸದ್ಬಳಕೆಯೂ ಆದಂತಾಗುತ್ತದೆ.


    ಇದನ್ನೂ ಓದಿ: Arecanut Future: ಅಡಿಕೆಗೆ ಭವಿಷ್ಯವಿದೆಯೇ? ಪುತ್ತೂರಿನಲ್ಲಿ ಕೃಷಿಕರಿಂದ ಮಹತ್ವದ ತೀರ್ಮಾನ


    ಒಟ್ಟಿನಲ್ಲಿ ಎಕ್ಸಲೆಂಟ್ ಸಂಸ್ಥೆಯು ತನ್ನ ಹೆಸರಿಗೆ ತಕ್ಕಂತೆ ತ್ಯಾಜ್ಯ ನಿರ್ವಹಣೆಯಲ್ಲೂ ಎಕ್ಸಲೆಂಟ್ ಎನಿಸಿಕೊಂಡಿದ್ದು, ಇತರೆ ಶಿಕ್ಷಣ ಸಂಸ್ಥೆಗಳಿಗೂ ಮಾದರಿಯೆನಿಸಿಕೊಂಡಿದೆ.


    ವರದಿ: ನಾಗರಾಜ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: