Dr Veerendra Heggade: ಪುಟ್ಟ ಬಾಲಕನ ಜೊತೆ ವೀರೇಂದ್ರ ಹೆಗ್ಗಡೆಯವರ ಕ್ರಿಕೆಟ್ ಆಟ! ವೈರಲ್ ವಿಡಿಯೋ ನೋಡಿ

ಡಾ.ವೀರೇಂದ್ರ ಹೆಗ್ಗಡೆ

ಡಾ.ವೀರೇಂದ್ರ ಹೆಗ್ಗಡೆ

ಬ್ಯಾಟಿಂಗ್ ಮಾಡುತ್ತಿರುವ ಪುಟ್ಟ ಬಾಲಕನಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಬೌಲ್ ಮಾಡುತ್ತಿದ್ದಾರೆ. ಆ ವೈರಲ್ ವಿಡಿಯೋ ಇಲ್ಲಿದೆ ನೋಡಿ.

  • News18 Kannada
  • 2-MIN READ
  • Last Updated :
  • Dakshina Kannada, India
  • Share this:

    ದಕ್ಷಿಣ ಕನ್ನಡ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು (Dr Veerendra Heggade) ಕ್ರಿಕೆಟ್ ಆಡುತ್ತಿರುವ ವಿಡಿಯೋ ಒಂದು ಭಾರೀ ವೈರಲ್ ಆಗ್ತಿದೆ. ವಿಡಿಯೋದಲ್ಲಿ (Viral Video) ವೀರೇಂದ್ರ ಹೆಗ್ಗಡೆಯವರು ಪುಟ್ಟ ಬಾಲಕನ ಜೊತೆ ಕ್ರಿಕೆಟ್ ಆಡುತ್ತಿದ್ದಾರೆ. ಬ್ಯಾಟಿಂಗ್ ಮಾಡುತ್ತಿರುವ ಪುಟ್ಟ ಬಾಲಕನಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಬೌಲ್ ಮಾಡುತ್ತಿದ್ದಾರೆ.




    ಇದನ್ನೂ ಓದಿ: Ujire Ajji Hotel: ಧರ್ಮಸ್ಥಳ ಮಂಜುನಾಥನ ದರ್ಶನ ಆದ್ಮೇಲೆ ಭಕ್ತರು ವಿಸಿಟ್ ಹಾಕುವ ಅಜ್ಜಿ ಹೋಟೆಲ್!


    ಮನೆಯ ಆವರಣದ ಸುಂದರ ಹಸಿರು ಪರಿಸರದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಪುಟ್ಟ ಬಾಲಕನ ಕ್ರಿಕೆಟ್ ಆಟದ (Dr Veerendra Heggade Plays Cricket) ವಿಡಿಯೋ ಇದೀಗ ಭಕ್ತರ ಖುಷಿಗೆ ಕಾರಣವಾಗಿದೆ.




    ಡಾ. ವೀರೇಂದ್ರ ಹೆಗ್ಗಡೆ ಧಾರ್ಮಿಕತೆ, ಶಿಕ್ಷಣ, ಆರೋಗ್ಯ, ಸಮಾಜಸೇವೆ, ಸ್ವ ಉದ್ಯೋಗ, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವೀರೇಂದ್ರ ಹೆಗ್ಗಡೆ ಅವರು ದೇಶದೆಲ್ಲೆಡೆ ಚಿರಪರಿಚಿತರು. ಇದೀಗ ಅವರ ಸಾಧನೆಯನ್ನು ಗುರುತಿಸಿ ಅವರನ್ನು ರಾಜ್ಯಸಭಾ ಸದಸ್ಯ  ಸ್ಥಾನಕ್ಕೆ ಕೇಂದ್ರ ಸರ್ಕಾರವೇ ನೇರವಾಗಿ ನೇಮಕ ಮಾಡಿದೆ.


    ಇದನ್ನೂ ಓದಿ: Panjurli Daiva Video: ಪ್ರಜ್ಞೆ ತಪ್ಪಿಸುವ ತುಳುನಾಡಿನ ಪಂಜುರ್ಲಿ ದೈವ! ಆದೇಶ ಕೊಟ್ರೆ ತಕ್ಷಣ ಎಚ್ಚರವಾಗುತ್ತೆ!


    ಡಾ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇಗುಲದ ಧರ್ಮದರ್ಶಿಗಳಾಗಿದ್ದಾರೆ. ತಂದೆ ಮಂಜಯ್ಯ ಹೆಗ್ಗಡೆ ಅವರ ಬಳಿಕ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಧರ್ಮಾಧಿಕಾರಿ ಪಟ್ಟ ಏರಿ, ಅತೀ ಹೆಚ್ಚು ಸಮಯ ಧರ್ಮದರ್ಶಿಗಳಾಗಿದ್ದಾರೆ.


    ಅಪಾರ ಭಕ್ತರ ಮನಸ್ಸಿನಲ್ಲಿ ಸ್ಥಾನ
    ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ಹೆಗ್ಗಡೆ ದಂಪತಿಯ ಹಿರಿಯ ಪುತ್ರ ವೀರೇಂದ್ರ ಅವರು ನವೆಂಬರ್ 23, 1948 ರಂದು ಜನಿಸಿದರು. ಅವರು ತುಳು ಪರಂಪರೆಯ ಪೆರ್ಗಡೆ ರಾಜವಂಶದಿಂದ ಬಂದವರು. ಧರ್ಮಾಧಿಕಾರಿ ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆ ಎಂದರೆ ನಾಡಿನ ಜನತೆಗೆ ಅಪಾರ ಗೌರವ. ಲಕ್ಷಾಂತರ ಭಕ್ತರ ಮನೆಗಳಲ್ಲಿ ಶ್ರೀ ಮಂಜುನಾಥ ಸ್ವಾಮಿ ಫೋಟೋ ಜೊತೆಗೆ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಫೋಟೋ ಕೂಡಾ ಇರುತ್ತದೆ. ಭಕ್ತರು ಶ್ರದ್ಧೆಯಿಂದ ವೀರೇಂದ್ರ ಹೆಗ್ಗಡೆ ಅವರ ಫೋಟೋಗು ಪೂಜೆ ಮಾಡುತ್ತಾರೆ. ಅಷ್ಟರಮಟ್ಟಿಗೆ ಅವರ ಕಾರ್ಯದಿಂದ ಭಕ್ತರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: