Dharmasthala: 1,15,000 ಜನರಿಗೆ ಹೊಸ ಜೀವನ ನೀಡಿದ ಮಂಜುನಾಥ! ಇದು ಧರ್ಮಸ್ಥಳ ಮಹಿಮೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕಳೆದ 30 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ರಾಜ್ಯದ ವಿವಿಧ ಭಾಗಗಳಲ್ಲಿ ಮದ್ಯವರ್ಜನ ಶಿಬಿರ ನಡೆಸಿ 1,15,000 ಜನರನ್ನು ವ್ಯಸನಮುಕ್ತರನ್ನಾಗಿ ಮಾಡಿದೆ.

  • News18 Kannada
  • 3-MIN READ
  • Last Updated :
  • Dakshina Kannada, India
  • Share this:

    ದಕ್ಷಿಣ ಕನ್ನಡ: ಅವರೆಲ್ಲಾ ಕುಡಿತದ ದಾಸರಾಗಿದ್ದರು. ಕುಡಿತದ ನಶೆಗೆ ಹೆಂಡತಿ-ಮಕ್ಕಳು ಬೀದಿ ಪಾಲಾಗುವ ಭೀತಿಯಲ್ಲಿದ್ದರು. ಆದರೆ ಧರ್ಮಸ್ಥಳದ (Dharmasthala) ಮದ್ಯವರ್ಜನ ಶಿಬಿರ ಅವರ ಬಾಳನ್ನು ಬೆಳಗಿಸಿದೆ. ಒಂದೂವರೆ ಸಾವಿರ ಜನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕುಡಿತ ಬಿಡುವ (Alcohol Withdrawal Camp)  ಶಪಥ ಮಾಡಿದ್ದಾರೆ.


    ನವಜೀವನ ಸಮಾವೇಶ
    ಶ್ರೀ ಕ್ಷೇತ್ರ ಧರ್ಮಸ್ಥಳ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದೆ. ಕುಡಿತದ ನಶೆಯಲ್ಲಿ ಜೀವನ ಮರೆತಿದ್ದ ಸಾವಿರಕ್ಕೂ ಅಧಿಕ ಜನರು ನವಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ನವಜೀವನ ಸಮಾವೇಶಲ್ಲಿ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ್ದ 1,644 ಮದ್ಯವ್ಯಸನಿಗಳು ಕುಡಿತ ಬಿಡುವ ನಿರ್ಧಾರ ಮಾಡಿದ್ದಾರೆ.


    ಧರ್ಮಸ್ಥಳ ದೇಗುಲ


    ಮದ್ಯವರ್ಜನ ಶಿಬಿರ
    ಕಳೆದ 30 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ರಾಜ್ಯದ ವಿವಿಧ ಭಾಗಗಳಲ್ಲಿ ಮದ್ಯವರ್ಜನ ಶಿಬಿರ ನಡೆಸಿ 1,15,000 ಜನರನ್ನು ವ್ಯಸನಮುಕ್ತರನ್ನಾಗಿ ಮಾಡಿದೆ. ಈ ಬಾರಿಯೂ 1,644 ಜನರು ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮದ್ಯ ತ್ಯಜಿಸಿದ್ದಾರೆ. ಶಿಬಿರಾರ್ಥಿಗಳ ಶಿಬಿರ ಮುಗಿದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮದ್ಯವರ್ಜನ ಶಿಬಿರಾರ್ಥಿಗಳ ನವಜೀವನ ಸಮಾವೇಶ ನಡೆದಿದೆ‌‌. ಸಮಾವೇಶದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.


    ಇದನ್ನೂ ಓದಿ: Dakshina Kannada: ಈ ಗಣಪನಿಗೆ ಪ್ರಕೃತಿಯೇ ಮಾಡುತ್ತೆ ನಿತ್ಯ ನಿರಂತರ ಅಭಿಷೇಕ!


    ಬದಲಾದ ಮದ್ಯಪಾನಿಗಳು
    ಸಮಾವೇಶದಲ್ಲಿ ಶಿಬಿರಾರ್ಥಿಗಳು ತಾವು ಮದ್ಯ ತ್ಯಜಿಸಿದ್ದರಿಂದ ತಮ್ಮ ಬಾಳಿನಲ್ಲಾದ ಏಳಿಗೆಯ ಅನುಭವವನ್ನು ಹಂಚಿಕೊಂಡರು. "ಕುಡಿತದ ದಾಸನಾಗಿದ್ದ ವೇಳೆಯಲ್ಲಿ ಎಲ್ಲವನ್ನು ಕಳೆದುಕೊಂಡಿದ್ದೆವು. ಬಾಳು ವಿನಾಶದ ಕಡೆಗೆ ಹೋಗಿತ್ತು‌‌. ಆದರೆ ಧರ್ಮಸ್ಥಳದ ಮದ್ಯವರ್ಜನ ಶಿಬಿರಕ್ಕೆ ಸೇರಿದ ಮೇಲೆ ಎಲ್ಲವೂ ಬದಲಾಗಿದೆ" ಎಂದು ಅನುಭವ ಹಂಚಿಕೊಂಡರು.




    ಇದನ್ನೂ ಓದಿ: Dakshina Kannada: ಇದಪ್ಪಾ ಡೇರಿಂಗ್ ಅಂದ್ರೆ! ಹಿಂದೆ ಮುಂದೆ ನೋಡದೆ ಬಾವಿಗಿಳಿದು ಚಿರತೆ ರಕ್ಷಿಸಿದ್ರು ಯುವ ವೈದ್ಯೆ!


    ಒಟ್ಟಿನಲ್ಲಿ ದಾನ ಧರ್ಮಗಳಿಗೆ ಹೆಸರುವಾಸಿಯಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮದ್ಯವ್ಯಸನಿಗಳ ನವಜೀವನದ ಕ್ಷಣಕ್ಕೆ ಸಾಕ್ಷಿಯಾಯಿತು.


    ಕಿಶನ್ ಶೆಟ್ಟಿ, ನ್ಯೂಸ್ 18 ಕನ್ನಡ ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: