• Home
  • »
  • News
  • »
  • mangaluru
  • »
  • Dharmasthala- Kukke: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದರ್ಶನ ಈ ದಿನದಂದು ನಿರ್ಬಂಧ

Dharmasthala- Kukke: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದರ್ಶನ ಈ ದಿನದಂದು ನಿರ್ಬಂಧ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಕುರಿತು ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಕ್ಷೇತ್ರಗಳ ಆಡಳಿತ ಮಂಡಳಿಗಳು ಅಧಿಕೃತ ಮಾಹಿತಿ ಬಿಡುಗಡೆ ಮಾಡಿವೆ.

  • News18 Kannada
  • Last Updated :
  • Mangalore, India
  • Share this:

    ಮಂಗಳೂರು:  ಸೂರ್ಯಗ್ರಹಣ (Surya Grahan 2022) ಮತ್ತು ಚಂದ್ರಗ್ರಹಣದ (Chandra Grahan) ಹಿನ್ನೆಲೆಯಲ್ಲಿ ಅಕ್ಟೋಬರ್ 25 ರಂದು ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ (Kukke Subrahmanya Temple Darshan) ಮತ್ತು ಧರ್ಮಸ್ಥಳದಲ್ಲಿ (Dharmasthala Temple Darshan) ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನಿರ್ಬಂಧಿಸಲಾಗಿದೆ.  ಅಕ್ಟೋಬರ್ 26 ರಂದು ಬೆಳಿಗ್ಗೆ 9 ಗಂಟೆ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲು ಅವಕಾಶ ನೀಡಲಾಗಿದೆ. ಈ ಕುರಿತು ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಕ್ಷೇತ್ರಗಳ ಆಡಳಿತ ಮಂಡಳಿಗಳು ಅಧಿಕೃತ ಮಾಹಿತಿ ಬಿಡುಗಡೆ ಮಾಡಿವೆ.


    ಧರ್ಮಸ್ಥಳದಲ್ಲಿ ರಾತ್ರಿ 7.30 ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅದೇ ರೀತಿ ಸುಬ್ರಹ್ಮಣ್ಯದಲ್ಲಿ ಅಕ್ಟೋಬರ್ 26 ರಂದು ಬೆಳಿಗ್ಗೆ 9 ಗಂಟೆ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ದೇಗುಲಗಳ ಆಡಳಿತ ಮಂಡಳಿಗಳು ಮಾಹಿತಿ ನೀಡಿವೆ.


    ಕಾಕತಾಳೀಯವೆಂಬಂತೆ ದೀಪಾವಳಿಯಂದೇ ಸೂರ್ಯಗ್ರಹಣ
    ಈ ವರ್ಷದ ಕೊನೆಯ ಸೂರ್ಯಗ್ರಹಣವು 25 ಅಕ್ಟೋಬರ್ 2022 ರಂದು ಸಂಭವಿಸಲಿದೆ. 27 ವರ್ಷಗಳ ನಂತರ ಕಾಕತಾಳೀಯವೆಂಬಂತೆ ದೀಪಾವಳಿಯಂದೇ ಸೂರ್ಯಗ್ರಹಣ ಸಂಭವಿಸಲಿದೆ.


    ಇದನ್ನೂ ಓದಿ: Mangaluru: ಗಿಡವಾಗಿ ಬೆಳೆಯೋ ಪಟಾಕಿ! ಢಂಢಂ ಅಂತ ಬೇಕಾದಷ್ಟು ಸಿಡಿಸಿ!


    ದೀಪಾವಳಿಯನ್ನು ಕಾರ್ತಿಕ ಅಮವಾಸ್ಯೆಯಂದು ಆಚರಿಸಲಾಗುತ್ತದೆ, ಈ ಬಾರಿ ಕಾರ್ತಿಕ ಅಮವಾಸ್ಯೆ ಅಂದರೆ ದೀಪಾವಳಿಯು ಅಕ್ಟೋಬರ್ 24 ಮತ್ತು 25 ಎರಡು ಆಚರಿಸಲಾಗುತ್ತದೆ.


    27 ವರ್ಷಗಳ ಬಳಿಕ ದೀಪಾವಳಿಯಂದು ಗ್ರಹಣ
    ಈ ಸೂರ್ಯಗ್ರಹಣವು ಭಾರತದಲ್ಲಿ ಭಾಗಶಃ ಗೋಚರಿಸುತ್ತದೆ. ಇದು ಅಕ್ಟೋಬರ್ 25 ರಂದು ಮಧ್ಯಾಹ್ನ 02.29 ರಿಂದ ಪ್ರಾರಂಭವಾಗುತ್ತದೆ.


    ಇದನ್ನೂ ಓದಿ: Mangaluru News: ದೀಪಾವಳಿ ಹಬ್ಬಕ್ಕೆ ಮಂಗಳೂರಿಗೆ ಸ್ಪೆಷಲ್ ರೈಲು!


    ಸಂಜೆ 06.32 ರವರೆಗೆ ಮುಂದುವರಿಯುತ್ತದೆ. ಈ ಸೂರ್ಯಗ್ರಹಣವು 04 ಗಂಟೆ 3 ನಿಮಿಷಗಳ ಕಾಲ ಇರುತ್ತದೆ. 27 ವರ್ಷಗಳ ಹಿಂದೆ 1995ರಲ್ಲಿ ದೀಪಾವಳಿಯ ಸಂದರ್ಭದಲ್ಲಿಯೇ ಸೂರ್ಯಗ್ರಹಣ ಸಂಭವಿಸಿದಾಗ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು.


    ದೀಪಾವಳಿ ಹಬ್ಬಕ್ಕೆ ಮಂಗಳೂರಿಗೆ ಸ್ಪೆಷಲ್ ರೈಲು!
    ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಬೇರೆ ಬೇರೆ ರಾಜ್ಯದಲ್ಲಿ ಉದ್ಯೋಗ ಸಹಿತ ಇನ್ನಿತರ ಕಾರಣಗಳಿಗಾಗಿ ಹೋಗಿ ನೆಲೆಸಿರುವವರು ತವರಿಗೆ ಆಗಮಿಸುತ್ತಾರೆ. ಹೀಗೆ ಸಾವಿರಾರು ಮಂದಿ ಏಕಕಾಲಕ್ಕೆ ಹೊರಡುವ ಸಾಧ್ಯತೆ ಇರುವುದರಿಂದ ರೈಲು ಪ್ರಯಾಣ ದುಸ್ತರವಾಗಬಹುದು. ಮೊದಲೇ ಭರ್ತಿಯಾಗಿರುವುದರಿಂದ ಕೆಲವರು ಊರಿಗೆ ತಲುಪದೇ ಇರಬಹುದು. ಹೀಗೆ ತವರಿಗೆ ಬರುವವರಲ್ಲಿ ಕರಾವಳಿಗರು (Coastal Karnataka) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿಯೇ ಕೊಂಕಣ ರೈಲ್ವೇ ವಿಶೇಷ ರೈಲೊಂದನ್ನು(Konkan Railway Diwali Special Trains) ಹೆಚ್ಚುವರಿಯಾಗಿ ಗುಜರಾತ್ ಉಧಾನ ಜಂಕ್ಷನ್ ನಿಂದ ಮಂಗಳೂರು ಜಂಕ್ಷನ್ ವರೆಗೆ ಓಡಾಟ ನಡೆಸಲು ನಿರ್ಧರಿಸಿದೆ.


    ವಿಶೇಷ ರೈಲಿನ ದಿನಾಂಕ
    ಈ ವಿಶೇಷ ರೈಲು ಉಧಾನ-ಮಂಗಳೂರು ನಡುವೆ ಅಕ್ಟೋಬರ್ 23 ಹಾಗೂ ಅಕ್ಟೋಬರ್ 30 ರಂದು ಸಂಚರಿಸಲಿದೆ. ಈ ದಿನಾಂಕಗಳಂದು ರಾತ್ರಿ 8 ಗಂಟೆಗೆ ಉಧನ ಜಂಕ್ಷನ್‌ದಿಂದ ಹೊರಡುವ ರೈಲು ಮರುದಿನ ಸಂಜೆ 6.30 ಕ್ಕೆ ಮಂಗಳೂರು ತಲುಪಲಿದೆ.


    ಮಂಗಳೂರಿನಿಂದ ಉಧನ ಜಂಕ್ಷನ್​ಗೆ ವಾಪಸ್
    ಇದೇ ರೈಲು ಅಕ್ಟೋಬರ್ 24 ಹಾಗೂ ಅಕ್ಟೋಬರ್ 31 ರಂದು ಮಂಗಳೂರು ಜಂಕ್ಷನ್ ನಿಂದ ಉಧನ ಜಂಕ್ಷನ್ ಗೆ ವಾಪಸ್ ಆಗಲಿದೆ. ಈ ದಿನಾಂಕಗಳಂದು ರಾತ್ರಿ 8.45 ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು ಮರುದಿನ ಸಂಜೆ 7.15 ಕ್ಕೆ ಉಧನ ಜಂಕ್ಷನ್ ತಲುಪಲಿದೆ.


    ರಾಜ್ಯದಲ್ಲಿ ಎಲ್ಲಿಲ್ಲಿ ಸ್ಟಾಪ್?
    ಈ ವಿಶೇಷ ರೈಲು ರಾಜ್ಯದ ಹಲವೆಡೆ ನಿಲುಗಡೆಯನ್ನು ಹೊಂದಿದ್ದು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೋಡ್ , ಗೋಕರ್ಣ, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್, ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಹಾಗೂ ಸುರತ್ಕಲ್‌ನಲ್ಲಿ ನಿಲುಗಡೆ ಹೊಂದಿರುತ್ತದೆ.


    ಹೆಚ್ಚಿನ ಮಾಹಿತಿಗಾಗಿ
    ರೈಲ್ವೇ ಸಂಬಂಧಿತ ಯಾವುದೇ ಮಾಹಿತಿ, ದೂರು ಹಾಗೂ ಸಲಹೆಗಳಿಗಾಗಿ 'ರೈಲ್ವೇ ಮದದ್' ಆ್ಯಪ್ ಅನ್ನು ಬಳಸಬಹುದಾಗಿದೆ. ಅಥವಾ ಉಚಿತ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: