• Home
  • »
  • News
  • »
  • mangaluru
  • »
  • Ganapathi Temple: ಭಕ್ತರಿಂದಲೇ ದೇಗುಲ ಕಟ್ಟಿಸಿಕೊಂಡ ದೇಲಂಪುರಿಯ ಗಣಪ!

Ganapathi Temple: ಭಕ್ತರಿಂದಲೇ ದೇಗುಲ ಕಟ್ಟಿಸಿಕೊಂಡ ದೇಲಂಪುರಿಯ ಗಣಪ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವೇಣೂರಿನಿಂದ ಕೂಗಳತೆ ದೂರದಲ್ಲಿರೋ ದೇಲಂಪುರಿ ದೇಗುಲ ಈ ಭಾಗದಲ್ಲಿ ಭಾರಿ ಫೇಮಸ್. ಮದುವೆಯಾಗದವರಿಗೆ ಮದುವೆ, ಮಕ್ಕಳಾಗದವರಿಗೆ ಮಕ್ಕಳ ಅನುಗ್ರಹಿಸುವ ಇಲ್ಲಿನ ಗಣಪ ಪವಾಡಗಳಿಗೆ ಹೆಸರುವಾಸಿಯೂ ಆಗಿದ್ದಾನೆ.

  • News18 Kannada
  • 3-MIN READ
  • Last Updated :
  • Dakshina Kannada, India
  • Share this:

    ಮಂಗಳೂರು: ಪ್ರಥಮ ಪೂಜಿತನಿಗೆ ಏನಿದ್ದರೂ ಭಕ್ತರೇ ಎಲ್ಲ. ತನ್ನ ಆಲಯವನ್ನು ಭಕ್ತರಿಂದಲೇ ನಿರ್ಮಿಸಬಲ್ಲ! ಹೌದು, ಭಕ್ತರೇ ತಮ್ಮ ನೆಚ್ಚಿನ ದೇವರ ದೇಗುಲ ನಿರ್ಮಾಣ ಮಾಡ್ತಿರೋ ಅಪರೂಪದ ದೃಶ್ಯವಿದು. ಕಾರ್ಮಿಕರ ಸಹಾಯವಿಲ್ಲದೇ ಸ್ವತಃ ಭಕ್ತಗಣವೇ ನಿರ್ಮಿಸಿದ ದೇಗುಲವಿದು. ಯೆಸ್, ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬೆಳ್ತಂಗಡಿ ತಾಲೂಕಿನ ವೇಣೂರಿನ (Venur) ದೇಲಂಪುರಿಯ ಗಣಪತಿಗೆ ಭಕ್ತರೇ (Ganapathi Temple Venur) ಸೇರಿ ಕರಸೇವೆಯ ಮೂಲಕ ದೇಗುಲ ನಿರ್ಮಿಸಿ ಇತಿಹಾಸ ಬರೆದಿದ್ದಾರೆ.


    ದಿನನಿತ್ಯ ಐವತ್ತರಿಂದ ನೂರಕ್ಕೂ ಹೆಚ್ಚು ಭಕ್ತಾಧಿಗಳು ಮಾಡಿದ ಕರಸೇವೆಯಿಂದಾಗಿ ದೇಲಂಪುರಿ ದೇಗುಲ ನಿರ್ಮಾಣವಾಗಿ ಇದೀಗ ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿದೆ. ಏಳು ತಿಂಗಳ ಸತತ ಯಾವುದೆ ಪ್ರತಿಫಲಾಪೇಕ್ಷೆಯಿಲ್ಲದೆ ಪ್ರಥಮ ಪೂಜಿತನ ಭಕ್ತರು ತೋರಿದ ನಿಸ್ವಾರ್ಥ ಸೇವೆ ಚೆಂದದ ದೇಗುಲ ತಲೆ ಎತ್ತುವಂತೆ ಮಾಡಿದೆ. ಇದೆಲ್ಲವೂ ಸಾಧ್ಯವಾಗಿದ್ದು ಇಲ್ಲಿರೋ ಗಣಪತಿ ಅನುಗ್ರಹದಿಂದ ಎಂದೇ ಭಕ್ತರು ಹೇಳ್ತಿದ್ದಾರೆ.




    ಪವಾಡಗಳಿಗೆ ಹೆಸರುವಾಸಿ ಈ ಗಣಪ
    ಸುತ್ತಮುತ್ತಲಿನ ಐದು ಸೀಮೆಗಳಿಗಿರುವ ಒಂದೇ ಒಂದು ಗಣಪನ ದೇಗುಲವಿದು. ವೇಣೂರಿನಿಂದ ಕೂಗಳತೆ ದೂರದಲ್ಲಿರೋ ದೇಲಂಪುರಿ ದೇಗುಲ ಈ ಭಾಗದಲ್ಲಿ ಭಾರಿ ಫೇಮಸ್. ಮದುವೆಯಾಗದವರಿಗೆ ಮದುವೆ, ಮಕ್ಕಳಾಗದವರಿಗೆ ಮಕ್ಕಳ ಅನುಗ್ರಹಿಸುವ ಇಲ್ಲಿನ ಗಣಪ ಪವಾಡಗಳಿಗೆ ಹೆಸರುವಾಸಿಯೂ ಆಗಿದ್ದಾನೆ.


    ಬೆಳೆಯನ್ನು ಗಣಪನಿಗೆ ಅರ್ಪಿಸಲೇಬೇಕು
    ಇಲ್ಲಿನ ರೈತರಂತೂ ತಾವು ಬೆಳೆದ ಬೆಳೆಯಲ್ಲಿ ಅಲ್ಪ ಪ್ರಮಾಣವನ್ನಾದರೂ ಗಣೇಶನಿಗೆ ಸಲ್ಲಿಸ್ತಾರೆ. ಒಂದ್ವೇಳೆ ತಮ್ಮ ಬೆಳೆಯನ್ನ ಗಣಪನಿಗೆ ಅರ್ಪಿಸದಿದ್ರೆ ಗಣಪ ವಿಚಿತ್ರ ರೀತಿಯಲ್ಲಿ ಬೇಡಿಕೆಯಿಟ್ಟು ತನಗೆ ಬೇಕಾದುದನ್ನ ಮಾಡಿಸಿಕೊಳ್ಳುತ್ತಾನೆ ಅನ್ನೋ ನಂಬಿಕೆಯಿದೆ.


    ಇದನ್ನೂ ಓದಿ: Success Story: ಬಸಳೆ ಬೆಳೆದು ತಿಂಗಳಿಗೆ 40 ಸಾವಿರ ಆದಾಯ ಗಳಿಸ್ತಿರೋ ಕರಾವಳಿ ಕೃಷಿಕ!


    ದಿನನಿತ್ಯ ಐವತ್ತರಿಂದ ನೂರಕ್ಕೂ ಹೆಚ್ಚು ಭಕ್ತಾಧಿಗಳು ಮಾಡಿದ ಕರಸೇವೆಯಿಂದಾಗಿ ದೇಲಂಪುರಿ ದೇಗುಲ ನಿರ್ಮಾಣವಾಗಿ ಇದೀಗ ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿದೆ. ಏಳು ತಿಂಗಳ ಸತತ ಯಾವುದೆ ಪ್ರತಿಫಲಾಪೇಕ್ಷೆಯಿಲ್ಲದೆ ಪ್ರಥಮ ಪೂಜಿತನ ಭಕ್ತರು ತೋರಿದ ನಿಸ್ವಾರ್ಥ ಸೇವೆ ಚೆಂದದ ದೇಗುಲ ತಲೆ ಎತ್ತುವಂತೆ ಮಾಡಿದೆ.


    ಇದನ್ನೂ ಓದಿ: Dakshina Kannada: ಅಷ್ಟಮಂಗಲದ ಪ್ರಕಾರವೇ ಪತ್ತೆಯಾಯ್ತು ಶಿವಲಿಂಗ!


    ಸುಮಾರು ಏಳು ತಿಂಗಳ ಪರಿಶ್ರಮ, ಇನ್ನೂರಕ್ಕೂ ಹೆಚ್ಚು ಕರಸೇವಕರ ಸೇವೆಯಿಂದ ಸಿದ್ಧವಾಗಿರುವ ಮೋದಕ ಪ್ರಿಯ ಗಣೇಶನ ದೇಗುಲ ವೇಣೂರು ಭಾಗದಲ್ಲಿ ಭಾರೀ ಸುದ್ದಿಯಲ್ಲಿದೆ.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು