• Home
  • »
  • News
  • »
  • mangaluru
  • »
  • Deepavali Special Trains: ಮುಂಬೈ-ಮಂಗಳೂರು ವಿಶೇಷ ರೈಲು ಘೋಷಣೆ

Deepavali Special Trains: ಮುಂಬೈ-ಮಂಗಳೂರು ವಿಶೇಷ ರೈಲು ಘೋಷಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Deepavali Special Trains: ಲೋಕಮಾನ್ಯ ತಿಲಕ್ ಮುಂಬೈ ರೈಲ್ವೇ ನಿಲ್ದಾಣ ಮತ್ತು ಮಂಗಳೂರು ಜಂಕ್ಷನ್ ನಡುವೆ  ದೀಪಾವಳಿ ಹಬ್ಬಕ್ಕಾಗಿ ವಿಶೇಷ ರೈಲು ಸೇವೆ ಒದಗಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ.

  • News18 Kannada
  • Last Updated :
  • Mangalore, India
  • Share this:

    ಮಂಗಳೂರು: ದೀಪಾವಳಿಗೆ ಭಾರತೀಯ ರೈಲ್ವೇಯು ಮಂಗಳೂರಿಗೆ (Mangaluru News) ವಿಶೇಷ ಸುದ್ದಿಯೊಂದನ್ನು ನೀಡಿದೆ. ಮುಂಬೈನಿಂದ ಮಂಗಳೂರಿಗೆ (Mumbai To Mangaluru Special Train) ವಿಶೇಷ ರೈಲು ಸಂಚರಿಸಲಿದೆ. ಲೋಕಮಾನ್ಯ ತಿಲಕ್ ಮುಂಬೈ ರೈಲ್ವೇ ನಿಲ್ದಾಣ ಮತ್ತು ಮಂಗಳೂರು ಜಂಕ್ಷನ್ ನಡುವೆ  ದೀಪಾವಳಿ ಹಬ್ಬಕ್ಕಾಗಿ (Deepavali Special Trains)  ವಿಶೇಷ ರೈಲು ಸೇವೆ ಒದಗಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಹಾಗಾದರೆ ಈ ಮುಂಬೈ ಮತ್ತು ಮಂಗಳೂರು ನಗರಗಳ ನಡುವಿನ ವಿಶೇಷ ರೈಲು ಎಂದು ಸಂಚರಿಸಲಿದೆ? ಈ ರೈಲು ಪ್ರಯಾಣ ಆರಂಭಿಸುವ ಸಮಯವೇನು? ಎಲ್ಲ ವಿವರ ನಿಮಗಾಗಿಯೇ ಇಲ್ಲಿದೆ ನೋಡಿ.


    ರೈಲು ಸಂಖ್ಯೆ 01185 ಲೋಕಮಾನ್ಯ ತಿಲಕ್ ಮುಂಬೈ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲು ಅಕ್ಟೋಬರ್ 21 ಮತ್ತು 28, ನವೆಂಬರ್ 4 ಮತ್ತು 11 (ಶುಕ್ರವಾರ) ಈ ದಿನಗಳಂದು ಲೋಕಮಾನ್ಯ ತಿಲಕ್ ಮುಂಬೈನಿಂದ ರಾತ್ರಿ 10.15 ಕ್ಕೆ ಹೊರಟು ಮರುದಿನ ಸಂಜೆ 5.05 ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.


    ಮಂಗಳೂರು ಜಂಕ್ಷನ್‌ನಿಂದ ಹೊರಡುವ ಸಮಯ
    ಅದೇ ರೀತಿ ರೈಲು ಸಂಖ್ಯೆ 01186 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ಮುಂಬೈ ಸಾಪ್ತಾಹಿಕ ವಿಶೇಷ ರೈಲು ಅಕ್ಟೋಬರ್ 22 ಮತ್ತು 29 ಮತ್ತು ನವೆಂಬರ್ 5 ಮತ್ತು 12, ಶನಿವಾರದಂದು ಮಂಗಳೂರು ಜಂಕ್ಷನ್‌ನಿಂದ ಸಂಜೆ 6.45 ಕ್ಕೆ ಹೊರಟು ಮರುದಿನ ಮಧ್ಯಾಹ್ನ 2.25 ಕ್ಕೆ ಲೋಕಮಾನ್ಯ ತಿಲಕ್ ಮುಂಬೈ ರೈಲು ನಿಲ್ದಾಣ ತಲುಪಲಿದೆ.


    ಇದನ್ನೂ ಓದಿ: Dharmasthala- Kukke: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದರ್ಶನ ಈ ದಿನದಂದು ನಿರ್ಬಂಧ


    ಯಾವ ನಿಲ್ದಾಣಗಳಲ್ಲಿ ನಿಲ್ಲಲಿದೆ ಈ ವಿಶೇಷ ರೈಲು?
    ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಕಾವಲಿ ಇತರ ಸ್ಥಳಗಳಲ್ಲಿ ನಿಲುಗಡೆಯಾಗಲಿದೆ. ಕೋಚ್ ಸಂಯೋಜನೆಯು ಎಸಿ 2-ಟೈರ್ ಕೋಚ್- 1, ಎಸಿ 3-ಟೈರ್ ಕೋಚ್‌ಗಳು-3, ಸ್ಲೀಪರ್ ಕ್ಲಾಸ್ ಕೋಚ್‌ಗಳು-8, ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಕೋಚ್‌ಗಳು-3 ಮತ್ತು ಸೆಕೆಂಡ್ ಕ್ಲಾಸ್, ಕಮ್ ಲಗೇಜ್/ಬ್ರೇಕ್ ವ್ಯಾನ್ ಕೋಚ್ -2 ಒಳಗೊಂಡಿರಲಿದೆ.


    ಇದನ್ನೂ ಓದಿ: Mangaluru: ಗಿಡವಾಗಿ ಬೆಳೆಯೋ ಪಟಾಕಿ! ಢಂಢಂ ಅಂತ ಬೇಕಾದಷ್ಟು ಸಿಡಿಸಿ!


    ದೀಪಾವಳಿ ಹಬ್ಬಕ್ಕೆ ಮಂಗಳೂರಿಗೆ ಸ್ಪೆಷಲ್ ರೈಲು!
    ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಬೇರೆ ಬೇರೆ ರಾಜ್ಯದಲ್ಲಿ ಉದ್ಯೋಗ ಸಹಿತ ಇನ್ನಿತರ ಕಾರಣಗಳಿಗಾಗಿ ಹೋಗಿ ನೆಲೆಸಿರುವವರು ತವರಿಗೆ ಆಗಮಿಸುತ್ತಾರೆ. ಹೀಗೆ ಸಾವಿರಾರು ಮಂದಿ ಏಕಕಾಲಕ್ಕೆ ಹೊರಡುವ ಸಾಧ್ಯತೆ ಇರುವುದರಿಂದ ರೈಲು ಪ್ರಯಾಣ ದುಸ್ತರವಾಗಬಹುದು. ಮೊದಲೇ ಭರ್ತಿಯಾಗಿರುವುದರಿಂದ ಕೆಲವರು ಊರಿಗೆ ತಲುಪದೇ ಇರಬಹುದು. ಹೀಗೆ ತವರಿಗೆ ಬರುವವರಲ್ಲಿ ಕರಾವಳಿಗರು (Coastal Karnataka) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿಯೇ ಕೊಂಕಣ ರೈಲ್ವೇ ವಿಶೇಷ ರೈಲೊಂದನ್ನು(Konkan Railway Diwali Special Trains) ಹೆಚ್ಚುವರಿಯಾಗಿ ಗುಜರಾತ್ ಉಧಾನ ಜಂಕ್ಷನ್ ನಿಂದ ಮಂಗಳೂರು ಜಂಕ್ಷನ್ ವರೆಗೆ ಓಡಾಟ ನಡೆಸಲು ನಿರ್ಧರಿಸಿದೆ.


    ವಿಶೇಷ ರೈಲಿನ ದಿನಾಂಕ
    ಈ ವಿಶೇಷ ರೈಲು ಉಧಾನ-ಮಂಗಳೂರು ನಡುವೆ ಅಕ್ಟೋಬರ್ 23 ಹಾಗೂ ಅಕ್ಟೋಬರ್ 30 ರಂದು ಸಂಚರಿಸಲಿದೆ. ಈ ದಿನಾಂಕಗಳಂದು ರಾತ್ರಿ 8 ಗಂಟೆಗೆ ಉಧನ ಜಂಕ್ಷನ್‌ದಿಂದ ಹೊರಡುವ ರೈಲು ಮರುದಿನ ಸಂಜೆ 6.30 ಕ್ಕೆ ಮಂಗಳೂರು ತಲುಪಲಿದೆ.


    ಮಂಗಳೂರಿನಿಂದ ಉಧನ ಜಂಕ್ಷನ್​ಗೆ ವಾಪಸ್
    ಇದೇ ರೈಲು ಅಕ್ಟೋಬರ್ 24 ಹಾಗೂ ಅಕ್ಟೋಬರ್ 31 ರಂದು ಮಂಗಳೂರು ಜಂಕ್ಷನ್ ನಿಂದ ಉಧನ ಜಂಕ್ಷನ್ ಗೆ ವಾಪಸ್ ಆಗಲಿದೆ. ಈ ದಿನಾಂಕಗಳಂದು ರಾತ್ರಿ 8.45 ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು ಮರುದಿನ ಸಂಜೆ 7.15 ಕ್ಕೆ ಉಧನ ಜಂಕ್ಷನ್ ತಲುಪಲಿದೆ.


    ರಾಜ್ಯದಲ್ಲಿ ಎಲ್ಲೆಲ್ಲ ಸ್ಟಾಪ್?
    ಈ ವಿಶೇಷ ರೈಲು ರಾಜ್ಯದ ಹಲವೆಡೆ ನಿಲುಗಡೆಯನ್ನು ಹೊಂದಿದ್ದು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೋಡ್ , ಗೋಕರ್ಣ, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್, ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಹಾಗೂ ಸುರತ್ಕಲ್‌ನಲ್ಲಿ ನಿಲುಗಡೆ ಹೊಂದಿರುತ್ತದೆ.

    Published by:ಗುರುಗಣೇಶ ಡಬ್ಗುಳಿ
    First published: