• Home
  • »
  • News
  • »
  • mangaluru
  • »
  • Dose Habba: ದೀಪಾವಳಿಗೆ ದೋಸೆಹಬ್ಬ! ಬೆಳ್ತಂಗಡಿಯಲ್ಲಿ ದೋಸೆ ಸವಿದ ಸಾವಿರಾರು ಜನ!

Dose Habba: ದೀಪಾವಳಿಗೆ ದೋಸೆಹಬ್ಬ! ಬೆಳ್ತಂಗಡಿಯಲ್ಲಿ ದೋಸೆ ಸವಿದ ಸಾವಿರಾರು ಜನ!

ದೋಸೆಹಬ್ಬ ಇಲ್ಲಿ ನೋಡಿ

"ದೋಸೆಹಬ್ಬ ಇಲ್ಲಿ ನೋಡಿ"

ಇಡೀ ದೇಶದಲ್ಲೇ ದೀಪಾವಳಿಗೆ ದೋಸೆಹಬ್ಬ ಅನ್ನೋ ವಿಶಿಷ್ಟ ಆಚರಣೆ ನಡೆಯೋದು ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಮಾತ್ರ ಅಂತ ಎಲ್ರೂ ದೋಸೆತಿಂತಾ ಖುಷಿಪಟ್ರು!

  • Share this:

    ಮಂಗಳೂರು: ವೆರೈಟಿ ವೆರೈಟಿ ರುಚಿರುಚಿ ದೋಸೆ! ದೀಪಾವಳಿಗೆ (Deepavali 2022) ಎಲ್ರೂ ದೀಪ- ಹಣತೆ ಹಚ್ಚಿದ್ರೆ ಇಲ್ಲೇನು ದೋಸೆ ಎರಿತಿದ್ದಾರೆ ಅಂದ್ಕೊಂಡ್ರಾ! ಪಟಾಕಿ ಹಚ್ಚೋ ಬದಲು ಇಲ್ಲೇನು ಸೌಟು, ಕಾವಲಿ ಹಿಡಿದು ದೋಸೆ ಹುಯ್ತಿದ್ದಾರೆ. ಇದೆಂತಾ ದೀಪಾವಳಿ ಹಬ್ಬವೊ ದೋಸೆ ಹಬ್ಬವೋ (Dose Habba) ಅಂತಂದ್ಕೊಂಡ್ರಾ? ಹೌದು ಕಣ್ರೀ..ಇದು ದೋಸೆ ಹಬ್ಬಾನೇ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲೇ ಈ ದೋಸೆಹಬ್ಬ (Belthangady Dose Habba) ನಡೆದದ್ದು, ಕಳೆದ ವರ್ಷ 25 ಸಾವಿರ ಜನರು ದೋಸೆ ಸವಿದಿದ್ದ ಈ ದೋಸೆಹಬ್ಬದಲ್ಲಿ ಈ ವರ್ಷವೂ ಸಾವಿರಾರು ಜನರು ದೋಸೆ ಚಪ್ಪರಿಸಿದರು.


    ದೋಸೆ ಹುಯ್ದು ಉದ್ಘಾಟಿಸಿದ ಶಾಸಕ, ಸಚಿವರು
    ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಾವಲಿ ಮೇಲೆ ದೋಸೆ ಹಿಟ್ಟು ಹೊಯ್ದು ದೋಸೆ ಹಬ್ಬ ಉದ್ಘಾಟಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹ ದೋಸೆ ಹುಯ್ದರು.


    ಇದನ್ನೂ ಓದಿ: Mangaluru: ಗಿಡವಾಗಿ ಬೆಳೆಯೋ ಪಟಾಕಿ! ಢಂಢಂ ಅಂತ ಬೇಕಾದಷ್ಟು ಸಿಡಿಸಿ!


    ದೇಶದಲ್ಲೇ  ದೋಸೆಹಬ್ಬ ಇಲ್ಲಿ ಮಾತ್ರ!
    ಇಡೀ ದೇಶದಲ್ಲೇ ದೀಪಾವಳಿಗೆ ದೋಸೆಹಬ್ಬ ಅನ್ನೋ ವಿಶಿಷ್ಟ ಆಚರಣೆ ನಡೆಯೋದು ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಮಾತ್ರ ಅಂತ ಎಲ್ರೂ ದೋಸೆತಿಂತಾ ಖುಷಿಪಟ್ರು!


    ಇದನ್ನೂ ಓದಿ: Mangaluru Viral Video: ಒಂದೇ ಬಲೆಗೆ ಕ್ವಿಂಟಾಲ್‌ಗಟ್ಟಲೆ ಮೀನು ಸಿಕ್ತು!


    ಒಟ್ಟಿನಲ್ಲಿ ದೀಪಾವಳಿಗೆ ದೀಪ ಹಚ್ಚಿ ಖುಷಿಪಡೋದು ಒಂದ್ಕಡೆ ಆದ್ರೆ ದೋಸೆಹಬ್ಬ ನಡೆಸಿದ ಬೆಳ್ತಂಗಡಿ ಗಮನಸೆಳೆಯಿತು. ಕರಾವಳಿ ಮಂದಿ ವೆರೈಟಿ ವೆರೈಟಿಯ ರುಚಿರುಚಿ ದೋಸೆ ಸವಿದು ನಾಲಿಗೆ ಚಪ್ಪರಿಸಿದರು.

    Published by:ಗುರುಗಣೇಶ ಡಬ್ಗುಳಿ
    First published: