Dakshina Kannada Rain: ದ.ಕ, ಕಾಸರಗೋಡು, ಹೆಬ್ರಿ ತಾಲೂಕಿನ ಶಾಲಾ, ಕಾಲೇಜಿಗೆ ರಜೆ

ಕರಾವಳಿಯಾದ್ಯಂತ ಸತತ ಎರಡನೇ ದಿನವೂ ಮಳೆ ಮುಂದುವರೆದಿದೆ. ಈ ಹಿನ್ನೆಲೆ ದ.ಕ., ಕಾಸರಗೋಡು ಜಿಲ್ಲೆ ಹಾಗೂ ಹೆಬ್ರಿ ತಾಲೂಕು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಳೆ

ಮಳೆ

  • Share this:
    ಮಂಗಳೂರು: ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಮಂಗಳವಾರ (05/07/2022) ಈ ಭಾಗದ ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸೋಮವಾರದಿಂದ ಆರಂಭವಾದ ಧಾರಾಕಾರ ಮಳೆ ಇಂದು ಮುಂದುವರೆದಿದೆ. ಸೋಮವಾರ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada Rain) ಬೆಳ್ತಂಗಡಿ ತಾಲೂಕಿಗಷ್ಟೇ ರಜೆ ಸಾರಲಾಗಿತ್ತು.‌ ಅಲ್ಲದೇ ಉಡುಪಿ ಜಿಲ್ಲೆಯ (Udupi Rain) ಎಲ್ಲ ಶಾಲಾ ಕಾಲೇಜುಗಳಿಗೆ ಅಲ್ಲಿನ ಜಿಲ್ಲಾಧಿಕಾರಿ ಕೂರ್ಮ ರಾವ್ ಆದೇಶಿಸಿದ್ದಾರೆ. ಮಳೆಯಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು ಮಳೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 

    ಇಲ್ಲೆಲ್ಲ ರಜೆ

    ಭಾರೀ ಗಾಳಿ ಸಹಿತ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲ ಶಾಲಾ, ಕಾಲೇಜು ಹಾಗೂ ಐಟಿಐ, ಡಿಪ್ಲೊಮಾಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ರಜೆ ಘೋಷಿಸಿದ್ದಾರೆ.
    ಇನ್ನು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಾದ್ಯಂತ ಶಾಲಾ, ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಉಡುಪಿ ಎಡಿಸಿ ವೀಣಾ ಬಿಎನ್ ಆದೇಶಿಸಿದ್ದಾರೆ. ಅಲ್ಲದೇ ಉಡುಪಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಸಹ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

    ಇದನ್ನೂ ಓದಿ: Vijayapura Jaggery Tea: ಕುಡಿದೋನೆ ಬಲ್ಲ ವಿಜಯಪುರ ಬೆಲ್ಲದ ಚಹಾದ ಸ್ವಾದ! ವಿಡಿಯೋ ನೋಡಿ

    ಕಾಸರಗೋಡಿನಲ್ಲೂ ರಜೆ

    ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲೂ ಭಾರೀ ಮಳೆ ಮುಂದುವರೆದ ಹಿನ್ನೆಲೆ, ಅಲ್ಲಿನ ಜಿಲ್ಲಾಧಿಕಾರಿ ಭಂಡಾರಿ ಸ್ವಗತ್ ಕೂಡಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

    ಇದನ್ನೂ ಓದಿ: Belagavi Police Museum: ಬೆಳಗಾವಿ ಪೊಲೀಸ್ ಮ್ಯೂಸಿಯಂ ನೋಡಿದ್ದೀರಾ? ವಿಡಿಯೋ ನೋಡಿ!

    ಕರಾವಳಿಯಾದ್ಯಂತ ಜುಲೈ 7ರ ವರೆಗೆ ಭಾರೀ ಮಳೆ ನಿರೀಕ್ಷಿಸಲಾಗಿದೆ. ಸಮುದ್ರ, ನದಿ, ಕೆರೆಗಳಿಗೆ ಇಳಿಯದಂತೆ ಆಯಾಯ ಜಿಲ್ಲಾಡಳಿತವು ಎಚ್ಚರಿಸಿದೆ.
    Published by:guruganesh bhat
    First published: