Dakshina Kannada News: ಕಲೆ, ಸಾಹಿತ್ಯ, ಸಂಗೀತ, ಜನಪದ, ನೃತ್ಯ, ಯಕ್ಷಗಾನ, ನಾಟಕ ಕಲಾ ಪ್ರಕಾರ ಉಳಿಸಲು ಧನಸಹಾಯ

ಜುಲೈ 20 ಕೊನೆ ದಿನಾಂಕವಾಗಿದ್ದು, ಆಸಕ್ತ ಸಂಘ ಸಂಸ್ಥೆಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಂಗಳೂರು: ಕಲೆ, ಸಾಹಿತ್ಯ, ಸಂಗೀತ, ಜನಪದ, ನೃತ್ಯ, ಯಕ್ಷಗಾನ, ನಾಟಕ ಸೇರಿದಂತೆ ನಾಡಿನ ಕಲಾಪ್ರಕಾರಗಳನ್ನು (Art And Culture Of Karnataka) ಉಳಿಸಿ ಬೆಳೆಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2022-23ನೇ ಸಾಲಿನ ಸಾಮಾನ್ಯ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ನಿರಂತರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘ-ಸಂಸ್ಥೆಗಳಿಗೆ ಪ್ರೋತ್ಸಾಹ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಿದೆ. ಹಾಗಾಗಿ ಆಸಕ್ತ ಕಲಾವಿದರ ಸಂಘಗಳು ಈ ಕೆಳಗಿನ ಮಾಹಿತಿ ಆಧರಿಸಿ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ವಿವಿಧ ಕಲಾ ಪ್ರಕಾರಗಳ ಸಂಘ ಸಂಸ್ಥೆಗಳಿಗೆ ಆರ್ಥಿಕವಾಗಿ ಉತ್ತೇಜಿಸುವುದರ ಜೊತೆಗೆ ಅಭಿವೃದ್ಧಿಗೆ ನೆರವು ನೀಡುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (Kannada And Culture Department)  ಧನಸಹಾಯ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.

    ಜುಲೈ 20 ಕೊನೆ ದಿನಾಂಕವಾಗಿದ್ದು, ಆಸಕ್ತ ಸಂಘ ಸಂಸ್ಥೆಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

    ಅರ್ಜಿ ಸಲ್ಲಿಕೆಗೆ ಅರ್ಹತೆಗಳು ಹೀಗಿರಲಿವೆ
    1. ಅರ್ಜಿ ಸಲ್ಲಿಕೆ ದಿನಾಂಕದಿಂದ 2 ವರ್ಷಗಳ ಮುಂಚಿತವಾಗಿ ಟ್ರಸ್ಟ್/ ಸಂಸ್ಥೆ ಅಸ್ತಿತ್ವದಲ್ಲಿರಬೇಕು.
    2. ಅರ್ಜಿದಾರರು ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದವರಾಗಿದ್ದರೆ ಅರ್ಜಿ ಸಲ್ಲಿಕೆಗೆ ಮುಂಚಿತವಾಗಿ 1 ವರ್ಷ ಅಸ್ತಿತ್ವದಲ್ಲಿರಬೇಕು.
    3. ಅರ್ಜಿದಾರರು ಅಥವಾ ಸಂಸ್ಥೆ/ ಟ್ರಸ್ಟ್ ಸದಸ್ಯರು ಒಂದು ವರ್ಷದ ಒಳಗಾಗಿ ಅದೇ ಯೋಜನೆಯಡಿ ಫಲಾನುಭವಿಗಳು ಆಗಿರಬಾರದು.

    ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲಾತಿಗಳು
    1. ಸಂಸ್ಥೆಯ ಅಂಗರಚನೆ/ ನಿಬಂಧನೆಗಳ ದೃಢೀಕೃತ ಪತ್ರ
    2. ಸಂಸ್ಥೆಯ ನೋಂದಣಿ ದಾಖಲೆಗಳು
    3. ಪ್ರಸಕ್ತ ವರ್ಷದ ನವೀಕರಣ ಪತ್ರ
    4. ಕಳೆದ ವರ್ಷ ದೊರೆತ ಅನುದಾನದ ಬಳಕೆ ಮಾಡಿರುವ ಕುರಿತಾದ ಪ್ರಮಾಣ ಪತ್ರ
    5. ಹಿಂದಿನ ವರ್ಷದ ಲೆಕ್ಕ ಪರಿಶೋಧಿತ ಪಟ್ಟಿ
    6. ಹಿಂದಿನ ವರ್ಷದ ಕಾರ್ಯ ಚಟುವಟಿಕೆಗಳ ವಿವರ
    7. ಪದಾಧಿಕಾರಿಗಳ ಭಾವಚಿತ್ರ
    8. ಪದಾಧಿಕಾರಿಗಳ ಪ್ರಮಾಣ ಪತ್ರ

    ಅರ್ಜಿ ಸಲ್ಲಿಸುವ ವಿಧಾನ
    ಅರ್ಜಿದಾರರು ಸೇವಾ ಸಿಂಧು ವೆಬ್​ಸೈಟ್​  ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಹಾಗೂ ಮಾರ್ಗಸೂಚಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ ಸೈಟ್ ಗಮನಿಸಬಹುದಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್​ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

    ಇದನ್ನೂ ಓದಿ: Vijayapura: ಮಳೆಗಾಗಿ 5 ದಿನ ನಿರಂತರ ಭಜನೆ! ಕೊನೆಗೂ ಮಳೆ ಬಂತಾ? ವಿಡಿಯೋ ನೋಡಿ

    ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಎಂದು?
    ಅರ್ಜಿದಾರರು ಸೂಕ್ತ ದಾಖಲಾತಿಗಳೊಂದಿಗೆ ಜುಲೈ 20ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗಿದೆ.

    ಇದನ್ನೂ ಓದಿ: Kittur Rani Chennamma Zoo: ಬೆಳಗಾವಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಹುಲಿ ಸಫಾರಿ! ವಿಡಿಯೋ ನೋಡಿ

    ಹೆಚ್ಚಿನ ಮಾಹಿತಿಗಾಗಿ
    ದಕ್ಷಿಣ ಕನ್ನಡ ಜಿಲ್ಲೆಯಿಂದ ಅರ್ಜಿ ಸಲ್ಲಿಸುವವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ 0824-2951327/2451527 ಸಂಪರ್ಕಿಸಬಹುದಾಗಿದೆ.
    Published by:guruganesh bhat
    First published: